Space Travel: ಬಾಹ್ಯಾಕಾಶಕ್ಕೆ ಪ್ರವಾಸ ಮಾಡಲು ಒಬ್ಬ ವ್ಯಕ್ತಿಗೆ ಎಷ್ಟು ಖರ್ಚಾಗುತ್ತದೆ…? ವಿಜ್ಞಾನಿಗಳ ಲೆಕ್ಕಾಚಾರ.

ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಎಷ್ಟು ಖರ್ಚಾಗಬಹುದು.

 Space Travel Expenses: ಭಾರತದಲ್ಲಿ ಚಂದ್ರಯಾನ 3 (Chandrayaan -3) ಯಶಸ್ವಿಯಾಗಿದೆ. ಈಗಾಗಲೇ ಚಂದ್ರಯಾನ ತನ್ನ ಸಂಶೋಧನೆಯನ್ನು ಪ್ರಾರಂಭಿಸಿದೆ. ಚಂದ್ರನ ಕುರಿತು ಮಾನವರಿಗೆ ತಿಳಿದಿರದ ಸಾಕಷ್ಟು ವಿಷಯಗಳನ್ನು ಈ ಚಂದ್ರಯಾನ 3 ಬಹಿರಂಗಪಡಿಸುತ್ತದೆ. ಚಂದ್ರನ ಬಗ್ಗೆ ತಿಳಿದಿರದ ಸಾಕಷ್ಟು ವಿಷಯಗಳ ಬಗ್ಗೆ ಮಾಹಿತಿ ತಿಳಿಯಬಹುದಾಗಿದೆ. ಈಗಾಗಲೇ ಚಂದ್ರಯಾನ 3 ಚಂದ್ರನ ಮೇಲ್ಮೈ ತಾಪಮಾನದ ಬಗ್ಗೆ ಮಾಹಿತಿ ನೀಡಿದೆ.

Space Travel Expenses
Image Source; Mind Games

ಬಾಹ್ಯಾಕಾಶ ಪ್ರವಾಸ
ಇನ್ನು ಚಂದ್ರಯಾನ 3 ನಂತರ ಚಂದ್ರನ ಭೂಮಿ ಖರೀದಿಯ ಬಗ್ಗೆ ಕೂಡ ಸಾಕಷ್ಟು ವಿಷಯಗಳು ವೈರಲ್ ಆಗಿವೆ. ಇದೀಗ ಬಾಹ್ಯಾಕಾಶ ಪ್ರವಾಸದ ಬಗ್ಗೆ ಸುದ್ದಿಗಳುಈ ಹರಿದಾಡುತ್ತಿದೆ. ಕೆಲವು ಕ್ಷಣದ ಮನರಂಜನೆಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡಿ ಪ್ರವಾಸಕ್ಕೆ ಹೋಗುವ ಸಾಕಷ್ಟು ಜನರಿದ್ದಾರೆ. ಹೀಗಿರುವ ಬಾಹ್ಯಾಕಾಶ ಪ್ರವಾಸವು ಬಹಳ ವಿಶೇಷವಾಗಿರುತ್ತದೆ. ಈ ಬಾಹ್ಯಾಕಾಶದ ಪ್ರವಾಸದ ಬಗ್ಗೆ ಕೂಡ ಸಾಕಷ್ಟು ಜನರು ಯೋಚಿಸುತ್ತಾರೆ. ಇದೀಗ ಬಾಹ್ಯಾಕಾಶ ಪ್ರವಾಸಕ್ಕೆ ಎಷ್ಟು ಖರ್ಚಾಗುತ್ತದೆ ಎನ್ನುವ ಬಗ್ಗೆ ವಿವರವನ್ನು ತಿಳಿಯೋಣ.

ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಎಷ್ಟು ಖರ್ಚಾಗಬಹುದು
ಸೋವಿಯತ್ ಒಕ್ಕೂಟದ ಗಗನಯಾತ್ರಿ ಯೂರಿ ಗಗಾರಿನ್ 1961 ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶವನ್ನು ಹತ್ತಿರದಿಂದ ನೋಡಿದ್ದಾರೆ. ಅಂದಿನಿಂದ ಸೌರವ್ಯೂಹ ಮತ್ತು ಇತರ ಗ್ರಹಗಳನ್ನು ಅರ್ಥಮಾಡಿಕೊಳ್ಳಲು ಅನೇಕ ಬಾಹ್ಯಾಕಾಶ ಕಾರ್ಯಾಚರಣೆಗಳು ನಡೆದಿವೆ. ಕಾಲಾನಂತರದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿಯೂ ಪ್ರಗತಿ ಸಾಧಿಸಲಾಗಿದೆ. ಇಂದು ಬಾಹ್ಯಾಕಾಶದಲ್ಲಿ ವಿಜ್ಞಾನ ಮಾತ್ರವಲ್ಲ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೂ ಅವಕಾಶ ತೆರೆದುಕೊಂಡಿದೆ.

 Space Travel Expenses
Image Source: Mint

ಬಾಹ್ಯಾಕಾಶ ಪ್ರವಾಸೋದ್ಯಮ ಎಂದರೆ ಬಾಹ್ಯಾಕಾಶಕ್ಕೆ ಪ್ರಯಾಣ. ಈ ಮೂಲಕ ಜನರು ಹಣ ಪಾವತಿಸಿ ಬಾಹ್ಯಾಕಾಶ ಪ್ರಯಾಣದ ಅನುಭವ ಪಡೆಯಬಹುದು, ಇದರ ಉದ್ದೇಶ ಮನರಂಜನೆ. ಅನೇಕ ಕಂಪನಿಗಳು ಬಾಹ್ಯಾಕಾಶಕ್ಕೆ ಪ್ರಯಾಣಿಸಲು ತಯಾರಿ ನಡೆಸುತ್ತಿದೆ. ಬಾಹ್ಯಾಕಾಶ ಪ್ರಯಾಣದ ವೆಚ್ಚವು ಪ್ರಪಂಚದ ಹೊರಗಿರುತ್ತದೆ. ಇದೀಗ ಕೆಲವೇ ಕಂಪನಿಗಳು ಜನರನ್ನು ಬಾಹ್ಯಾಕಾಶಕ್ಕೆ ಪ್ರಯಾಣಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ಬಾಹ್ಯಾಕಾಶ ನೌಕೆಗಳು ವಿವಿಧ ಎತ್ತರಗಳಲ್ಲಿ ಚಲಿಸುತ್ತವೆ.

ಈ ಹೆಚ್ಚಿನ ಬಾಹ್ಯಾಕಾಶ ಪ್ರವಾಸೋದ್ಯಮ ಕಂಪನಿಗಳ ಟಿಕೆಟ್ ದರವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಬಿಲಿಯನೇರ್ ಉದ್ಯಮಿ ಸರ್ ರಿಚರ್ಡ್ ಬ್ರಾನ್ಸನ್ ಅವರ ವರ್ಜಿನ್ ಗ್ಯಾಲಕ್ಟಿಕ್ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಪ್ರಸಿದ್ಧ ಹೆಸರು.

Join Nadunudi News WhatsApp Group

ಇದರಲ್ಲಿ ಒಬ್ಬ ಪ್ರಯಾಣಿಕನಿಗೆ 2 ಕೋಟಿ ರೂ.ನಿಂದ ಟಿಕೆಟ್ ಆರಂಭವಾಗುತ್ತದೆ. ಇನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್‌ನ ಬಾಹ್ಯಾಕಾಶ ಪ್ರಯಾಣ ಕಂಪನಿಯ ಬೆಲೆ ಇನ್ನೂ ನಿರ್ಧರಿಸಲಾಗಿಲ್ಲ. ವರದಿಗಳ ಪ್ರಕಾರ ಒಂದು ಟಿಕೆಟ್ ಬೆಲೆ 2.5 ಕೋಟಿ ರೂ. ಆಗಿದೆ.

Join Nadunudi News WhatsApp Group