Spandana Reels: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಜಯ್ ಜೊತೆ ಸ್ಪಂದನ ಕೊನೆಯ ರೀಲ್ಸ್, ವಿಧಿಯ ಆಟ ಕ್ರೂರ.

ಪತಿಯ ಜೊತೆ ಕೊನೆದಾಗಿ ಹೆಜ್ಜೆ ಹಾಕಿದ ಸ್ಪಂದನ., ವೈರಲ್ ಆಗಿದೆ ಸ್ಪಂದನ ಮತ್ತು ವಿಜಯ್ ರಾಘವೇಂದ್ರ ವಿಡಿಯೋ.

Spandana And Vijay Raghavendra Reels Viral: ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನ (Spandana ) ಅಕಾಲಿಕ ಮರಣ ಎಲ್ಲರಿಗೂ ಆಘಾತವನ್ನ ಉಂಟುಮಾಡಿದೆ. ವಿಜಯ್ ಪತ್ನಿ ನಿಧಾನಕ್ಕೆ ಚಿತ್ರರಂಗದವರು ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ.

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರಿಗೆ ನಿನ್ನೆ ಲೊ BP ಕಾಣಿಸಿಕೊಂಡಿದ್ದು ರಾತ್ರಿ ಮಲಗಿದ್ದಲ್ಲೇ ಇಹಲೋಕವನ್ನ ತ್ಯಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸ್ಪಂದನ ಅವರ ಸಾವಿಗೆ ಇಡೀ ಕರ್ನಾಟಕವೇ ಸಂತಸವನ್ನ ಸೂಚಿಸಿದೆ. ಸ್ಪಂದನ ಮರಣದ ಸುದ್ದಿಯ ಜೊತೆಗೆ ಇದೀಗ ವಿಜಯ್ ಹಾಗೂ ಸ್ಪಂದನ ಮಾಡಿದ ರೀಲ್ಸ್ ವೇದಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Spandana And Vijay Raghavendra Reels Viral
Image Credit: Dailyhunt

ವಿಜಯ್ ಸ್ಪಂದನ ಕೊನೆಯ ರೀಲ್ಸ್ ವೈರಲ್
ವಿಜಯ್ ರಾಘವೇಂದ್ರ ಹಾಗು ಸ್ಪಂದನ ಅವರು ಬಹಳ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಇನ್ನು ವೀಕೆಂಡ್ ವಿಥ್ ರಮೇಶ್ ಸೀಸನ್ ನಲ್ಲಿ ವಿಜಯ್ ಅವರು ತಮ್ಮ ಮದುವೆಯ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆ ಸಮಯದಲ್ಲೇ ವಿಜಯ್ ಹಾಗೂ ಸ್ಪಂದನ ನಡುವಿನ ಪ್ರೀತಿ ಎಲ್ಲರಿಗು ತಿಳಿದಿತ್ತು. ವಿಜಯ್ ಹಾಗೂ ಸ್ಪಂದನ ಪ್ರೀತಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಇದೀಗ ವಿಜಯ್ ಹಾಗೂ ಸ್ಪಂದನ ಅವರ ಕೊನೆಯ ರೀಲ್ಸ್ ಬಾರಿ ವೈರಲ್ ಆಗುತ್ತಿದೆ.

ಜೀವ ಹೂವಾಗಿದೆ ಸಾಂಗ್ ರೀಲ್ಸ್ ಮಾಡಿದ ವಿಜಯ್ ಸ್ಪಂದನ
ಇನ್ನು ಸ್ಪಂದನ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ವಿಜಯ್ ಹಾಗು ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಸ್ವಲ್ಪ ದಿನಗಳ ಹಿಂದೆ ವಿಜಯ್ ಹಾಗೂ ಸ್ಪಂದನ ಜೀವ ಹೂವಾಗಿದೆ, ಭಾವ ಜೇನಾಗಿದೆ ಎನ್ನುವ ಅಣ್ಣಾವ್ರ ಸಾಂಗ್ ಗೆ ರೀಲ್ಸ್ ಮಾಡಿದ್ದರು. ಇದೀಗ ವಿಜಯ್ ಸ್ಪಂದನ ಕೊನೆಯ ರೀಲ್ಸ್ ವೈರಲ್ ಆಗುತ್ತಿದೆ. ಈ ಜೋಡಿಯ ಸುಂದರ ಕ್ಷಣಗಳನ್ನು ಕಂಡ ಬಳಿಕ ಸ್ಪಂದನ ಇನ್ನಿಲ್ಲ ಎನ್ನುವ ವಿಷಯ ಎಲ್ಲರಿಗು ನೋವು ನೀಡುತ್ತಿದೆ.

Vijay Raghavendra wife Spandana passes away
Image Credit: Newsbugz

ವಿಜಯ್ ಪತ್ನಿ ನಿಧನಕ್ಕೆ ಕಾರಣವೇನು
ವಿಜಯ್ ಪತ್ನಿ ಸ್ಪಂದನ ಅವರು ತೂಕ ಇಳಿಸಿಕೊಳ್ಳಲು ಜಿಮ್ ಮಾಡುತ್ತಿದ್ದರು ಎನ್ನುವ ಬಗ್ಗೆ ವರದಿಯಾಗಿದೆ. ಲಾಕ್ ಡೌನ್ ಸಮಯದಲ್ಲಿ ದಪ್ಪಗಾಗಿದ್ದ ಸ್ಪಂದನ ತಮ್ಮ ತೂಕ ಇಳಿಸಿಕೊಳ್ಳುವ ಸಲುವಾಗಿ ಜಿಮ್ ಹಾಗೂ ಡಯಟ್ ಮಾಡುತ್ತಿದ್ದರು. ಸ್ಪಂದನ ಡಯಟ್ ನ ಮಾಡುವ ಮೂಲಕ 16 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

Join Nadunudi News WhatsApp Group

ಸ್ಪಂದನ ಅವರ ಸಾವಿಗೆ ಜಿಮ್ ಡಯಟ್ ಪರಿಣಾಮ ಬಿದ್ದಿರಬಹುದು ಎನ್ನಲಾಗುತ್ತಿದೆ. ಇನ್ನು ಸ್ಪಂದನ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ವಿಜಯ್ ಅವರಿಗೆ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ವಿಜಯ್ ಕುಟುಂಬದಲ್ಲಿ ನೋವಿನ ಆಕ್ರಂದನ ಮುಗಿಲು ಮುಟ್ಟಿದೆ.

Join Nadunudi News WhatsApp Group