Spandana Heart Attack: ಸ್ಪಂದನ ನಿಧನಕ್ಕೆ ಕಾರಣವೇನು,…? ಸ್ಪಂದನ ಸಾವಿಗೆ ಜಾತಕದ ಕಂಟಕ ಕಾರಣವಾಯ್ತಾ.
ಸ್ಪಂದನ ಅವರಿಗೆ ದಿಡೀರ್ ಹೃದಯಾಘಾತ ಆಗಲು ತೂಕ ಇಳಿಕೆ ಕಾರಣ ಆಯ್ತಾ ಅಥವಾ ಜಾತಕದ ಗೃಹ ಗತಿ ಕಾರಣವಾ ಎನ್ನುವ ಬಗ್ಗೆ ಸಣ್ಣ ಮಾಹಿತಿ ಲಭಿಸಿದೆ.
Spandana Death Reason: ಸ್ಯಾಂಡಲ್ ವುಡ್ ನ ಸ್ಟಾರ್ ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನ (Spandana Vijay Raghavendra) ಅವರು ಆಗಸ್ಟ್ 7 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸ್ಪಂದನ ವಿಜಯ್ ರಾಘವೇಂದ್ರ ಅವರ ಅಕಾಲಿಕ ಮರಣ ಕರುನಾಡನ್ನೇ ಬೆಚ್ಚಿ ಬೀಳಿಸಿದೆ.
ಸ್ಪಂದನ ಅವರನ್ನು ಕಳೆದುಕೊಂಡ ಅವರ ಕುಟುಂಬದ ಕಣ್ಣೀರು ಮುಗಿಲು ಮುಟ್ಟುತ್ತಿದೆ. ಇನ್ನು ನಿನ್ನೆ ಸ್ಪಂದನ ವಿಜಯ್ ರಾಘವೇಂದ್ರ ಅವರ ಅಂತಿಮ ಕಾರ್ಯ ನಡೆದಿದೆ. ಇದೀಗ ಸಂಪ್ರದಾಯದಂತೆ ಸ್ಪಂದನ ಅವರ ಅಂತ್ರ್ಯಕ್ರಿಯೆ ನಡೆಸಲಾಗಿದೆ.
ಕಳೆದ ಮೂರು ದಿನಗಳಿಂದ ಸ್ಪಂದನ ಅವರ ಸಾವಿನ ಸುದ್ದಿ ಬಹಳ ವೈರಲ್ ಆಗುತ್ತಿದೆ. ಸ್ಪಂದನ ಅವರ ಸಾವಿನ ಕಾರಣ ಬಗ್ಗೆ ನಾನಾ ಸುದ್ದಿಗಳು ವೈರಲ್ ಆಗುತ್ತಿದೆ. ಈಗಾಗಲೇ ಸ್ಪಂದನ ಅವರು ಲೂ ಬಿಪಿ ಕಾರಣದಿಂದ ಮೃತಪಟ್ಟಿರುವುದಾಗಿ ಕುಟುಂಬದವರು ಮಾಹಿತಿ ನೀಡಿದ್ದರು. ಆದರೂ ಸ್ಪಂದನ ಸಾವಿನ ಹಿಂದಿನ ಕಾರಣದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ವಿದೇಶಿ ಪ್ರವಾಸದಲ್ಲಿದ್ದ ಸ್ಪಂದನ ಅವರಿಗೆ ದಿಢೀರ್ ಹೃದಯಾಘಾತ ಆಗಿರುವ ಬಗ್ಗೆ ಎಲ್ಲರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಪಂದನ ನಿಧನಕ್ಕೆ ತೂಕ ಇಳಿಕೆ ಕಾರಣವಾಯ್ತಾ
ವಿಜಯ್ ಪತ್ನಿ ಸ್ಪಂದನ ಅವರು ತೂಕ ಇಳಿಸಿಕೊಳ್ಳಲು ಜಿಮ್ ಮಾಡುತ್ತಿದ್ದರು ಎನ್ನುವ ಬಗ್ಗೆ ವರದಿಯಾಗಿದೆ. ಲಾಕ್ ಡೌನ್ ಸಮಯದಲ್ಲಿ ದಪ್ಪಗಾಗಿದ್ದ ಸ್ಪಂದನ ತಮ್ಮ ತೂಕ ಇಳಿಸಿಕೊಳ್ಳುವ ಸಲುವಾಗಿ ಜಿಮ್ ಹಾಗೂ ಡಯಟ್ ಮಾಡುತ್ತಿದ್ದರು. ಸ್ಪಂದನ ಡಯಟ್ ನ ಮಾಡುವ ಮೂಲಕ 16 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸ್ಪಂದನ ಅವರ ಸಾವಿಗೆ ಜಿಮ್ ಡಯಟ್ ಪರಿಣಾಮ ಬಿದ್ದಿರಬಹುದು ಎನ್ನಲಾಗುತ್ತಿದೆ. ಆದರೆ ಇದೀಗ ಸ್ಪಂದನ ಸಾವಿಗೆ ಮತ್ತೊಂದು ಕಾರಣ ಲಭಿಸಿದೆ. ಈ ಕಾರಣದಿಂದ ಸ್ಪಂದನ ಮರಣ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಸ್ಪಂದನ ಸಾವಿಗೆ ಗೃಹಗತಿಯೇ ಕಾರಣವಾಗಿದೆ
ಸ್ಪಂದನ ಸಾವಿಗೆ ಅವರ ಜಾತಕದಲ್ಲಿರುವ ಗ್ರಹಗತಿಯೇ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ವಿಜಯ್ ರಾಘವೇಂದ್ರ ಹಾಗು ಸ್ಪಂದನ ಕುಟುಂಬಕ್ಕೆ ಮೊದಲೇ ಸೂಚನೆ ನೀಡಿದ್ದರಂತೆ. ಸ್ಪಂದನ ಜಾತಕದ ಕಂಟಕದ ಬಗ್ಗೆ ಆದ್ಯಾತ್ಮಿಕ ಗುರೂಜಿ ಮಾಹಿತಿ ನೀಡಿದ್ದರು.
ಇನ್ನು ಸ್ಪಂದನ ಸಾವಿನ ಸುದ್ದಿ ಕೇಳಿ ಗುರೂಜಿ ಅವರು ಸ್ಪಂದನ ಅವರ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಈ ವೇಳೆ ನಾನು ಮೊದಲೇ ಹೇಳಿದ್ದೆ, ಸ್ಪಂದನ ಅವರ ಕಂಟಕವನ್ನು ಪೂಜೆ, ಹೋಮಗಳ ಮೂಲಕ ನಿವಾರಿಸಬಹುದಿತ್ತು ನೀವು ನಿರ್ಲಕ್ಷ್ಯ ಮಾಡಿದಿರಿ ಎಂದಿದ್ದಾರೆ. ಈ ಬಗ್ಗೆ ಸ್ಪಂದನ ಕುಟುಂಬದ ಆಪ್ತ ಮೂಲಗಳಿಂದ ಮಾಹಿತಿ ಲಭಿಸಿದೆ.
ಇನ್ನು ಒಂದೆಡೆ ಅನಾರೋಗ್ಯಕರ ಡಯೆಟ್ ಸ್ಪಂದನ ಬಾಳಿಗೆ ಮುಳುವಾಗಿದೆ ಎನ್ನುವ ಬಗ್ಗೆ ಕೂಡ ಸುದ್ದಿಗಳು ವೈರಲ್ ಆಗುತ್ತಿವೆ. ಸಾವು ಯಾವ ಸಮಯದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂದು ಯಾರಿಂದಲೂ ಊಹೆ ಮಾಡಲು ಸಾಧ್ಯವಿಲ್ಲ. ಸದ್ಯ ಸ್ಪಂದನ ಸಾವಿನ ಕುರಿತಂತೆ ವೈರಲ್ ಆಗಿರುವ ಈ ಸುದ್ದಿಗೆ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.