Spandana Dairy: ಕೊನೆಗೂ ಸಿಗ್ತು ಸ್ಪಂದನಾ ಬರೆದಿಟ್ಟಿದ್ದ ಡೈರಿ, ಏನೆಂದು ಬರೆಯಲಾಗಿದೆ ಗೊತ್ತಾ?

ತನ್ನ ಬಹುದೊಡ್ಡ ಆಸೆಯನ್ನು ಡೈರಿಯಲ್ಲಿ ಬರೆದಿಟ್ಟ ಸ್ಪಂದನ ವಿಜಯ ರಾಘವೇಂದ್ರ.

Spandana Desire: ಚಿನ್ನಾರಿ ಮುತ್ತಾ ಎಂದು ಪ್ರಸಿದ್ಧ ಹೊಂದಿರುವ ಕನ್ನಡ ನಟ ವಿಜಯ್ ರಾಘವೇಂದ್ರ (Vijay Raghavendra). ವಿಜಯ್ ರಾಘವೇಂದ್ರ ಸದಾ ನಗು ಮುಖ ಹೊಂದಿರುವ ವ್ಯಕ್ತಿ. ವಿಜಯ್ ರಾಘವೇಂದ್ರ ಅವರು ಸ್ಪಂದನಾ (Spandana Vijay Raghavendra) ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. 

ಈ ದಂಪತಿಗೆ ಶೌರ್ಯ ಎಂಬ ಮಗ ಇದ್ದ. ಸ್ಪಂದನಾ ಮೂಲತ ಮಂಗಳೂರಿನ ಬೆಳ್ತಂಗಡಿನವರು. ಸ್ಪಂದನಾ ಅವರ ತಂದೆಗೆ  ಇಬ್ಬರು ಮಕ್ಕಳು. ಸ್ಪಂದನಾ ಅವರ ತಂದೆಗೆ ಸ್ಪಂದನಾ ಎಂದರೆ ಪ್ರಾಣ. ಪ್ರೀತಿಯಿಂದ ಅವರ ತಂದೆ ಸ್ಪಂದನಾ ಅವರಿಗೆ ಅಚ್ಚು ಎಂದು ಕರೆಯುತಿದ್ದರು.

Spandana Desire
Image Credit: Starsunfolded

ಸ್ಪಂದನಾ ಅವರ ಅಂತಿಮ ಸಂಸ್ಕಾರ
ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅನ್ಯೋನ್ಯವಾಗಿ ಸಂಸಾರ ನೆಡೆಸುತಿದ್ದರು. ಆದರೆ ಆಗಸ್ಟ್ 7 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿಯ ಅಕಾಲಿಕ ಮರಣ ವಿಜಯ್ ರಾಘವೇಂದ್ರ ಅವರಿಗೆ ತೀರ್ವ ನೋವುಂಟು ಮಾಡಿದೆ.

ಬ್ಯಾಂಕಾಕ್ ಗೆ ಸಂಬಂಧಿಕರ ಜೊತೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಶಾಪಿಂಗ್ ಮಾಡಿ ರೂಮ್ ಗೆ ಬಂದಾಗ ಸ್ಪಂದನಾ ಅವರು ಹೃದಯಾಘಾತದಿಂದ ಕುಸಿದು ಬೀಳುತ್ತಾರೆ. ಅದನ್ನು ನೋಡಿ ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆದರೆ ಅವರನ್ನು ಬದುಕಿಸಲು ಆಗಲಿಲ್ಲ. ಈ ವಿಷಯ ಕೇಳಿ ವಿಜಯ್ ರಾಘವೇಂದ್ರ ಬ್ಯಾಂಕಾಕ್ ಹೋಗುತ್ತಾರೆ.

ಸ್ಪಂದನಾ ಅವರ ಮೃತ ದೇಹವನ್ನು ತರಲು ಮರಣೋತ್ತರ ಪರೀಕ್ಷೆ ಮಾಡಲಾಯಿತು. ಸ್ಪಂದನಾ ಅವರ ಮೃತ ದೇಹವನ್ನು ಬೆಂಗಳೂರಿಗೆ ಆಗಸ್ಟ್ 8 ರಂದು ತರಲಾಯಿತು. ಸ್ಪಂದನಾ ಅವರ ಅಂತ್ಯಕ್ರಿಯೆಯನ್ನು ಬಿಲ್ಲವರ ಸಂಪ್ರದಾಯದಂತೆ ಮಗ ನೆರವೇರಿಸಿದ. ಸ್ಪಂದನಾ ಅವರ ಅಗಲಿಕೆಯ ನೋವು ಕುಟುಂಬದವರನ್ನು ಕಾಡುತ್ತಿದೆ. ಇದೀಗ ಸ್ಪಂದನಾ ಅವರ ಆಸೆಯ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group

Spandana Vijay Raghavendra latest news
Image Credit: Vijaykarnataka

ಸ್ಪಂದನಾ ಡೈರಿಯಲ್ಲಿದ್ದ ಆಸೆ ಈಡೇರಬೇಕಿದೆ
ವಿಜಯ್ ರಾಘವೇಂದ್ರ ಅವರ ಪತ್ನಿ ಅಕಾಲಿಕ ಮರಣದಿಂದ ಇಡೀ ಕರ್ನಾಟಕವೇ ನೋವಿನಲ್ಲಿದೆ. ಸ್ಪಂದನಾ ಅವರಿಗೆ ಮಗನನ್ನು ಚಿತ್ರರಂಗಕ್ಕೆ ತರಬೇಕು ಎನ್ನುವುದು ಅವರ ಆಸೆ ಆಗಿತ್ತು. ಸ್ಪಂದನಾ ಅವರ ಮಗನನ್ನು ಚಿತ್ರರಂಗಕ್ಕೆ ತರುವ ಹೊಣೆ ವಿಜಯ್ ರಾಘವೇಂದ್ರ ಅವರ ಮೇಲಿದೆ. ಸ್ಪಂದನಾ ಅವರ ಡೈರಿಯಲ್ಲಿ ಅವರ ಮತ್ತೊಂದು ಆಸೆಯನ್ನು ಬರೆದಿದ್ದರು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದನಾ ಅವರ ಈಡೇರದ ಆಸೆ ಸುದ್ದಿಯಾಗುತ್ತಿದೆ. ಸ್ಪಂದನಾ ಅವರಿಗೆ ದೊಡ್ಡ ನಿರ್ಮಾಪಕಿ ಆಗಬೇಕು ಎನ್ನುವುದ ಅವರ ಆಸೆ ಆಗಿತ್ತು. ಈ ಬಗ್ಗೆ ಸ್ಪಂದನಾ ಅವರು ಸ್ವತಃ ಡೈರಿಯಲ್ಲಿ ಬರೆದಿದ್ದರು. ಸ್ಪಂದನಾ ಅವರಿಗೆ ಪಾರ್ವತಮ್ಮ ರಾಜಕುಮಾರ್ ಅವರ ಹಾಗೆ ನಿರ್ಮಾಪಕಿ ಆಗಬೇಕು ಎನ್ನುವುದ ಅವರ ಬಹುದಿನದ ಆಸೆ. ಈ ಬಗ್ಗೆ ಅವರ ಮಾವ ಪೀತಾಂಬರ ಹೇರಾಜೆ ಮಾಹಿತಿ ತಿಳಿಸಿದ್ದಾರೆ.

Join Nadunudi News WhatsApp Group