Spandana Funeral: ಸ್ಪಂದನ ಪೋಸ್ಟ್ ಮಾರ್ಟಮ್ ಮುಕ್ತಾಯ, ರಿಪೋರ್ಟ್ ನಲ್ಲಿ ಬಂದಿದ್ದೇನು, ನಾಳೆ ಅಂತ್ಯಕ್ರಿಯೆ.

ಸ್ಪಂದನ ಅವರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ, ಮರಣೋತ್ತರ ವರದಿ ಈ ರೀತಿಯಾಗಿ ಬಂದಿದೆ.

Spandana Funeral Update:  ಸ್ಪಂದನ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಅಕಾಲಿಕ ಮರಣ ಎಲ್ಲರಲ್ಲೂ ಬೇಸರ ಮೂಡಿಸಿದೆ. ಸ್ಪಂದನ ಅವರ ಕುಟುಂಬ ಇದೀಗ ದುಃಖದಲ್ಲಿದೆ. ನಟ ವಿಜಯ್ ರಾಘವೇಂದ್ರ (Vijay Raghavendra)  ಅವರು ತಮ್ಮ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ. ಸ್ಪಂದನ ಅಕಾಲಿಕ ಮರಣಕ್ಕೆ ಚಿತ್ರರಂಗದವರು ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

Actor Vijay Raghavendra’s wife Spandana passes away
Image Credit: Filmibeat

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಅಕಾಲಿಕ ಮರಣ
ಇನ್ನು ಸ್ಪಂದನ ಅವರು ಬ್ಯಾಂಕಾಕ್ ಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಕೆಲಸದ ನಿಮಿತ್ತ ತೆರಳಿದ್ದರು. ಈ ವೇಳೆ ಆಗಸ್ಟ್ 6 ರ ಸಂಜೆ ಸ್ಪಂದನ ತೀವ್ರ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಗಿದ್ದರು. ಮರು ದಿನ ಮುಂಜಾನೆ ಸ್ಪಂದನ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲೋ ಬಿಪಿಯಿಂದಾಗಿ ಸ್ಪಂದನ ನಿಧನ ಹೊಂದಿರುವುದಾಗಿ ಮಾಹಿತಿ ಲಭಿಸಿದೆ. ನಿಜಕ್ಕೂ ಸ್ಪಂದನ ಅವರದ್ದು ಸಾಯುವ ವಯಸ್ಸಲ್ಲ. ಬದುಕಿ ಬಾಳಬೇಕಾದವರು ಚಿಕ್ಕ ವಯಸ್ಸಿನಲ್ಲೇ ಹೃಯದಯಾಘಾತದಿಂದ ಮೃತಪಟ್ಟಿದ್ದಾರೆ.

ಸ್ಪಂದನ ಪೋಸ್ಟ್ ಮಾರ್ಟಮ್ ಮುಕ್ತಾಯ, ರಿಪೋರ್ಟ್ ನಲ್ಲಿ ಬಂದಿದ್ದೇನು
ಥೈಲ್ಯಾಂಡ್ ನಲ್ಲಿ ಸ್ಪಂದನ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಥೈಲ್ಯಾಂಡ್ ನ ನಿಯಮದ ಪ್ರಕಾರ ಇಂದು ಮಧ್ಯಾಹ್ನ 1 ಗಂಟೆಗೆ ಸ್ಪಂದನ ಪೋಸ್ಟ್ ಮಾರ್ಟಮ್ ಮುಕ್ತಾಯಗೊಂಡಿದೆ. ಇನ್ನು ಅಂತಿಮ ಮರಣೋತ್ತರ ಪರೀಕ್ಷೆ ವರದಿ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ.

ವೈದ್ಯ ಮೂಲಗಳಿಂದ ಸ್ಪಂದನ ಅವರಿಗೆ ಮಲಗಿದ್ದಾಗ ತೀವ್ರವಾದ ಹೃದಯಾಘಾತ ಆಗಿದೆ ಎಂದು ತಿಳಿದುಬಂದಿದೆ. ಇನ್ನು ಇಂದು ಸಂಜೆ ಥಾಯ್ ಪ್ಲೈಟ್ ನಲ್ಲಿ ಸ್ಪಂದನ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಿದ್ದಾರೆ. ಸರಿಸುಮಾರು ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

Spandana Funeral Update
Image Credit: Filmibeat

ನಾಳೆ ನಡೆಯಲಿದೆ ಸ್ಪಂದನ ಅಂತ್ಯಕ್ರಿಯೆ
ಇನ್ನು ನಾಳೆ ಮಧ್ಯಾಹ್ನದವರೆಗೆ ಸ್ಪಂದನ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಅಂತಿಮ ದರ್ಶನದ ಬಳಿಕ ಶ್ರೀರಾಮ್ ಪುರದ ಹರಿಶ್ಚಂದ್ರ ಘಾಟ್ (Harishchandra Ghat) ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Join Nadunudi News WhatsApp Group

ಸ್ಪಂದನ ಅಂತ್ಯಕ್ರಿಯೆಯ ಬಗ್ಗೆ ಸ್ಪಂದನ ಅವರ ದೊಡ್ಡಪ್ಪ ಬಿ. ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಇನ್ನು ಸ್ಪಂದನ ಅವರ ಅಗಲಿಕೆಯ ನೋವಿನಿಂದಾಗಿ ನಟ ವಿಜಯ್ ರಾಘವೇಂದ್ರ ಅವರು ಕಂಗಾಲಾಗಿದ್ದಾರೆ. ಸ್ಪಂದನ ಕುಟುಂಬ ಅವರ ಅಗಲಿಕೆಯ ನೋವಿನಲ್ಲಿ ಕಣ್ಣೀರಿಡುತ್ತಿದ್ದಾರೆ.

Join Nadunudi News WhatsApp Group