Spandana Dreams: ಸ್ಪಂದನ ಕೊನೆ ಆಸೆ ಏನಾಗಿತ್ತು ಗೊತ್ತಾ?

ಮಗನ ಭವಿಷ್ಯದ ಬಗ್ಗೆ ಸ್ಪಂದನ ಕಂಡ ಕನಸನ್ನು ವಿಜಯ್ ರಾಘವೇಂದ್ರ ಅವರು ಈಡೇರಿಸಬೇಕಿದೆ.

Spandana Vijay Raghavendra Dream: ಸ್ಪಂದನ ವಿಜಯ್ ರಾಘವೇಂದ್ರ ಅವರ ಅಕಾಲಿಕ ಮರಣ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ಬದುಕಿ ಬಾಳ ಬೇಕಾದವರು ಚಿಕ್ಕ ವಯಸ್ಸಿನಲ್ಲಿ ನಿಧನ ಹೊಂದಿರುವುದು ದುಃಖದ ಸಂಗತಿಯಾಗಿದೆ. ನಟ ವಿಜಯ್ ರಾಘವೇಂದ್ರ ಅವರು ತನ್ನ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ.

ಪ್ರೀತಿಸಿ ಮದುವೆಯಾದ ಸ್ಪಂದನ ಹಾಗೂ ವಿಜಯ್ ರಾಘವೇಂದ್ರ (Vijay Raghavendra)ಅವರು ಇತರ ಜೋಡಿಗಳಿಗೆ ಮಾದರಿಯಾಗಿದ್ದರು. ಈ ದಂಪತಿಗೆ ಮುದ್ದಾದ ಶೌರ್ಯ (Shourya)ಎಂಬ ಹೆಸರಿನ ಮಗನಿದ್ದಾನೆ. ಇದೀಗ ಸ್ಪಂದನ (Spandana) ಅವರು ತಮ್ಮ ಮಗನ ಭವಿಷ್ಯವನ್ನು ರೂಪಿಸುವ ಬಗ್ಗೆ ಒಂದು ಕನಸನ್ನು ಕಂಡಿದ್ದರು. ಈ ಬಗ್ಗೆ ಸಣ್ಣ ಮಾಹಿತಿಯೊಂದು ಲಭಿಸಿದೆ.

Spandana Vijay Raghavendra Dream
Image Credit: Indianexpress

ಸ್ಪಂದನ ವಿಜಯ್ ರಾಘವೇಂದ್ರ ನಿಧನ
ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಬ್ಯಾಂಕಾಕ್ ಗೆ ತೆರಳಿದ ಸ್ಪಂದನ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಆಗಸ್ಟ್ 6 ರ ಸಂಜೆ ಎದೆನೋವಿನ ಕಾರಣ ಆಸ್ಪತ್ರೆಗೆ ತೆರಳಿದರು ಆದರೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ. ಸ್ಪಂದನ ಅವರು ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿರುವುದು ಎಲ್ಲರ ಮುಖದಲ್ಲಿ ಬೇಸರವನ್ನು ತರಿಸಿದೆ.

ವಿಜಯ್ ಪತ್ನಿ ಅಂತ್ಯಕ್ರಿಯೆ
ನಿನ್ನೆ ಸಂಜೆ ಬ್ಯಾಂಕಾಕ್ ನಿಂದ ಥಾಯ್ ಪ್ಲೈಟ್ ನಲ್ಲಿ ಸ್ಪಂದನ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನ ಮಲೇಶ್ವರಂ ಆಟದ ಮೈದಾನದಲ್ಲಿ ಸ್ಪಂದನ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಅಂತಿಮ ದರ್ಶನ ಆದ ನಂತರ ಶ್ರೀರಾಮ್ ಪುರದ ಹರಿಶ್ಚಂದ್ರ ಘಾಟ್ (Harishchandra Ghat) ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸ್ಪಂದನ ಅವರ ಅಂತಿಮ ದರ್ಶನಕ್ಕೆ ಸಾಕಷ್ಟು ನಟ ನಟಿಯರು ಗಣ್ಯರು ಆಗಮಿಸುತ್ತಿದ್ದಾರೆ.

Spandana and Vijay Raghavendra son Shourya
Image Credit: Indianexpress

ಸ್ಪಂದನ ಹಾಗೂ ವಿಜಯ್ ವೈವಾಹಿಕ ಜೀವನ
ಇನ್ನು ಸ್ಪಂದನ ಹಾಗೂ ವಿಜಯ್ ರಾಘವೇಂದ್ರ ಅವರು 2016 ಆಗಸ್ಟ್ 26 ರಂದು ವಿವಾಹವಾಗಿದ್ದರು. ಇವರು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಸ್ಪಂದನ ಹಾಗೂ ವಿಜಯ್ ಬಹಳ ಅನ್ಯೋನ್ಯವಾಗಿದ್ದರು. ಜೋಡಿಗೆ ಶೌರ್ಯ ಎಂಬ ಮಗ ಇದ್ದಾನೆ. ತಮ್ಮ ಮಗನನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದರು. ಮಗನನ್ನ ನೋಡಿಕೊಳ್ಳುವ ರೀತಿಯಲ್ಲೇ ಶ್ರೀಮುರುಳಿ ಹಾಗೂ ಪ್ರಶಾಂತ್ ನೀಲ್ ಅವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

Join Nadunudi News WhatsApp Group

ಸ್ಪಂದನ ಕನಸು ನನಸು ಮಾಡಬೇಕಿದೆ ವಿಜಯ್
ಸ್ಪಂದನ ಅವರು ತಮ್ಮ ಮಗನನ್ನು ಹೀರೋ ಮಾಡಬೇಕು ಎನ್ನುವ ಕನಸನ್ನ ಕಂಡಿದ್ದರು. ಹಾಗೆ ಮಗನ ಮೊದಲ ಸಿನಿಮಾವನ್ನು ವಿಜಯ್ ರಾಘವೇಂದ್ರ ಅವರೇ ಡೈರೆಕ್ಷನ್ ಮಾಡುವ ಯೋಚನೆಯನ್ನು ಮಾಡಿದ್ದರು. ಇದೀಗ ಸ್ಪಂದನ ಅವರು ಅಕಾಲಿಕ ಮರಣ ಹೊಂದಿದ್ದು ಇವರ ಆಸೆ ಹಾಗೆ ಉಳಿದುಕೊಂಡಿದೆ. ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಆಸೆಯನ್ನು ಈಡೇರಿಸಬೇಕಿದೆ.

Join Nadunudi News WhatsApp Group