Jio Glass: ಸಿಮ್ ಮತ್ತು ಮೊಬೈಲ್ ಜೊತೆಗೆ ಈಗ Glass ಬಿಡುಗಡೆ ಮಾಡಿದ Jio, Glass ಫೀಚರ್ ಕಂಡು ಮೆಚ್ಚಿದ ಮೋದಿ.

Jio ಈಗ Glass ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈ ಗ್ಲಾಸ್ ಪ್ರಧಾನಿ ಮೋದಿ ಮೆಚ್ಚುಗೆಗೆ ಕೂಡ ಕಾರಣವಾಗಿದೆ.

Jio Launched Jio Glass: ಸದ್ಯ ದೇಶದಲ್ಲಿ Reliance Jio ಟೆಲಿಕಾಂ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲ್ಲ ವಿಭಾಗದಲ್ಲಿ ತನ್ನ ಸ್ಥಾನವನ್ನ ಪಡೆದುಕೊಂಡಿದೆ. ದೇಶದಲ್ಲಿ ಅತಿ ಹೆಚ್ಚು ಜನರು Jio ನೆಟ್ವರ್ಕ್ ಅನ್ನು ಬಳಸುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಕಡಿಮೆ ಬೆಲೆಗೆ ಇಂಟರ್ನೆಟ್ ಮತ್ತು ಮೊಬೈಲ್ ಲಾಂಚ್ ಮಾಡುವ ಮೂಲಕ Jio ಟೆಲಿಕಾಂ ಕ್ಷೇತ್ರದಲ್ಲಿ ವಿಶೇಷವಾದ ಸಾಧನೆ ಮಾಡುತ್ತಿದೆ ಎಂದು ಹೇಳಬಹುದು.

ಇತ್ತೀಚೆಗಂತೂ Jio 5G ನೆಟ್ವರ್ಕ್ ನ ಮೂಲಕ ಎಲ್ಲರ ಗಮನ ಸೆಳೆದಿದೆ. ಇದೀಗ Jio ಮತ್ತೊಂದು ಹೆಜ್ಜೆ ಮುಂದೆ ಇತ್ತು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಜನರಿಗೆ ಅಚ್ಚರಿ ಮೂಡಿಸಿದೆ. ಇದೀಗ Jio ತನ್ನ ಗ್ರಾಹಕರಿಗೆ Glass ಅನ್ನು ಪರಿಚಯಿಸುವ ಮೂಲಕ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಿದೆ ಎನ್ನಬಹುದು. ಈ ಗ್ಲಾಸ್ ಮೂಲಕ ದೇಶದಲ್ಲಿ Jio ಹೆಸರು ಇನ್ನಷ್ಟು ಖ್ಯಾತಿ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

Jio Glass launched in india
Image Credit: jagran

ಟೆಕ್ ವಲಯವನ್ನೇ ಆಚ್ಚರಿಗೊಳಿಸಲಿದೆ ಜಿಯೊದ ನೂತನ ಆವಿಷ್ಕಾರ
Reliance Jio ಇತ್ತೀಚೆಗೆ ನವದೆಹಲಿಯಲ್ಲಿ ನಡೆದ India Mobile Congress (IMC 2023) ನಲ್ಲಿ ತನ್ನ MR ಗ್ಲಾಸ್‌ ಗಳನ್ನು ಪ್ರದರ್ಶಿಸಿದೆ. ಈ ಹಿಂದೆ ಕಂಪನಿಯು 2020 ರಲ್ಲಿ ತನ್ನ 43 ನೇ AGM ನಲ್ಲಿ Jio Glass ಅನ್ನು ಘೋಷಿಸಿತ್ತು. ವಿಶೇಷವಾಗಿ ಕಳೆದ ವರ್ಷ MWC ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇದನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಇನ್ನು ಈ Jio Glass ವಿಶೇಷವಾಗಿ 100 ಇಂಚಿನ ಡಿಸ್ಪ್ಲೇ ಹೊಂದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಇದೀಗ ಈ Jio Glaas ನ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

Jio Glass
ಜಿಯೋ ಗ್ಲಾಸ್ ಮಿಶ್ರ ರಿಯಾಲಿಟಿ (MR), ಆಗ್ಮೆಂಟೆಡ್ ರಿಯಾಲಿಟಿ (AR) ಮತ್ತು ವರ್ಚುವಲ್ ರಿಯಾಲಿಟಿ (VR) ನಲ್ಲಿ ಕಾರ್ಯನಿರ್ವಹಿಸುತ್ತದೆ. MR ಗ್ಲಾಸ್‌ ಗಳು ಡಿಜಿಟಲ್ ವಿಷಯವನ್ನು ನೈಜ ಜಗತ್ತು ಮತ್ತು ವರ್ಚುವಲ್ ವಸ್ತುಗಳೊಂದಿಗೆ ಪರಸ್ಪರ ಕ್ರಿಯೆಯನ್ನು ಸಕ್ರಿಯಗೊಳಿಸುವ ರೀತಿಯಲ್ಲಿ ಸಂಯೋಜಿಸುತ್ತವೆ. ಬಳಕೆದಾರರು ಇದರಿಂದಾಗಿ ಡಿಜಿಟಲ್ ಪರಿಸರದಲ್ಲಿ ಸಂಪೂರ್ಣ ಅನುಭವವನ್ನು ಪಡೆಯಬಹುದಾಗಿದೆ.

the features of jio glass
Image Credit: jagran

Jio Glass ಬಳಕೆಯ ಉಪಯೋಗವೇನು..?
ಅಷ್ಟಕ್ಕೂ ಈ Jio Glass ಬಳಕೆಯ ಉಪಯೋಗ ಏನು ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಗೊಂದಲ ಉಂಟಾಗಿರಬಹುದು. ಈ ಜಿಯೋ ಗ್ಲಾಸ್ ಅನ್ನು ಬಳಸುವುದರಿಂದ ಫೋನ್ ಸ್ಕ್ರೀನ್ ಗಳು 100 ಇಂಚುಗಳು ದೊಡ್ಡದಾಗಿ ಕಾಣುತ್ತದೆ. ಇದರಿಂದಾಗಿ ಸಿನಿಮಾ ಅನುಭವವನ್ನು ಈ ಜಿಯೋ ಗ್ಲಾಸ್ ಧರಿಸುವ ಮೂಲಕ ಉತ್ತಮವಾಗಿ ಪಡೆಯಬಹುದು.

Join Nadunudi News WhatsApp Group

ಇನ್ನು ಬಳಕೆದಾರರು ಫೋನ್ ನಲ್ಲಿ ಜಿಯೋಇಮ್ಮರ್ಸ್ ಎಕ್ಸ್‌ ಆರ್‌ ಸ್ಟೋರ್‌ ನಿಂದ XR ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ಈ ಅನುಭವನ್ನು ಪಡೆಯಾಬಹುದು. ಇನ್ನು Jio ಗ್ಲಾಸ್ ನಲ್ಲಿ ವಾಯ್ಸ್ ಕರೆಗೆ ಅನುಮತಿ ನೀಡುವುದರ ಜೊತೆಗೆ 40000mAh ಬ್ಯಾಟರಿ ಸಾಮರ್ಥ್ಯವನ್ನು ಕೂಡ ಅಳವಡಿಸಲಾಗಿದೆ.

Join Nadunudi News WhatsApp Group