Hero Bikes EMI: ಕೇವಲ 24 ಸಾವಿರಕ್ಕೆ ಮನೆಗೆ ತನ್ನಿ 70 Km ಮೈಲೇಜ್ ಕೊಡುವ ಈ ಹೀರೋ ಬೈಕ್, ಬಡವರಿಗಾಗಿ ಸೂಪರ್ ಬೈಕ್.
ಕೇವಲ 24 ಸಾವಿರ ಕೊಟ್ಟು ಈಗ ಹೊಸ ಹೀರೋ ಮೈಲೇಜ್ ಬೈಕ್ ಖರೀದಿ ಮಾಡಬಹುದು.
Hero Splendor Plus EMI Offer: ವಾಹನಗಳ ಖರೀದಿಗೆ ಇದೀಗ ಉತ್ತಮ ಅವಕಾಶ ಲಭ್ಯವಾಗಿದೆ ಎನ್ನಬಹುದು. ವಿವಿಧ ಕಂಪನಿಗಳು ತನ್ನ ಮಾದರಿಯ ಬೈಕ್ ,ಕಾರ್ ಗಳ ಖರೀದಿಗೆ ವಿಶೇಷ ರಿಯಾಯಿತಿಯನ್ನು ಘೋಷಿಸುತ್ತಿದೆ. ಸದ್ಯ ಹಬ್ಬದ ಸೀಸನ್ ಹತ್ತಿರವಾಗುತ್ತಿದ್ದಂತೆ ಕಂಪನಿಗಳು ಅತಿ ಅಗ್ಗದ ಬೆಲೆಯಲ್ಲಿ ಬೈಕ್ ಗಳನ್ನೂ ಪರಿಚಯಿಸುತ್ತಿವೆ.
ಸದ್ಯ ದೇಶದ ಪ್ರತಿಷ್ಠಿತ ಬೈಕ್ ತಯಾರಕ ಕಂಪನಿಯಾದ Hero MotoCorp ಇತ್ತೀಚಿಗೆ ಕಡಿಮೆ ಬೆಲೆಯ ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ವಿನ್ಯಾಸದ ವಿಭಿನ್ನ ಮಾದರಿಯ ಬೈಕ್ ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಈಗಾಗಲೇ ಹೀರೋ ಕಂಪನಿಯು ಸ್ಪ್ಲೆಂಡರ್ ಬೈಕ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದೀಗ ಕಂಪನಿಯು ಹೀರೋ ಸ್ಪ್ಲೆಂಡರ್ ಅನ್ನು ನವೀಕರಿಸಿದ ವಿನ್ಯಾಸದಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದು ನೀವು 25 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಹೊಸ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಖರೀದಿಸಬಹುದಾಗಿದೆ.
Hero Splendor Plus Bike
ಇದೀಗ ಹೀರೋ ಕಂಪನಿಯ Splendor Plus ಬೈಕ್ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಬೈಕ್ 97.2CC ಏರ್ ಕೋಲ್ಡ್ ಸಿಂಗಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. Splendor Plus Xtec 7.9BHP ಪವರ್ ಮತ್ತು 8.05 NM ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ i3S ಎಂಜಿನ್ ಸ್ಟಾರ್ಟ್ ಅಥವಾ ಸ್ಟಾಪ್ ಸಿಸ್ಟಮ್ ಆಯ್ಕೆಯನ್ನು ಹೊಂದಿದ್ದು, ಈ ಡೈಮಂಡ್ ಬೈಕ್ ಪ್ರತಿ ಲೀಟರ್ ಗೆ ಸುಮಾರು 70KM ಮೈಲೇಜ್ ನೀಡಲಿದೆ. ಈ ಬೈಕ್ ನಲ್ಲಿ ಬ್ಲೂಟೂತ್ ಸಂಪರ್ಕ ಮತ್ತು ಡಿಜಿಟಲ್ ಮೀಟರ್ ಅನ್ನು ಅಳವಡಿಸಲಾಗಿದ್ದು ವಿಭಿನ್ನ ಫೀಚರ್ ಗಳ ಮೂಲಕ ಗ್ರಾಹಕರನ್ನು ಸೆಳೆಯಲಿದೆ.
ಕೇವಲ 24 ಸಾವಿರಕ್ಕೆ ಮನೆಗೆ ತನ್ನಿ 70 Km ಮೈಲೇಜ್ ಕೊಡುವ ಈ ಹೀರೋ ಬೈಕ್
Splendor Plus ಬೈಕ್ ನ ಆರಂಭಿಕ ಬೆಲೆ 76,346 ರೂ. ಆಗಿದ್ದು ಎಕ್ಸ್ ಶೋ ರೂಮ್ ಬೆಲೆಯ ಆಧಾರದ ಮೇಲೆ ಇದರ ಆನ್ ರೋಡ್ ಬೆಲೆ 91,056 ರೂ. ಆಗಿದೆ. ನೀವು ರೂ. 24,000 ಡೌನ್ ಪೇಮೆಂಟ್ ಪಾವತಿಸುವ ಮೂಲಕ ಈ ಬೈಕ್ ಅನ್ನು ಮನೆಗೆ ತರಬಹುದು. ಈ ಬೈಕ್ ಖರೀದಿಗೆ ಬ್ಯಾಂಕ್ ನಿಮಗೆ 10 % ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನಂತರ ಪ್ರತಿ ತಿಂಗಳು 2,164 ರೂ. ಪಾವತಿಸುವ ಮೂಲಕ ಸಾಲದ ಮರುಪಾವತಿ ಮಾಡಬಹುದು.