Ads By Google

Spoken English: ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್, ಇನ್ಮುಂದೆ ಎಲ್ಲಾ ಇಂಗ್ಲಿಷ್

Spoken English course for government school students

Image Credit: Original Source

Ads By Google

Spoken English Classes In Government School: ಸದ್ಯ ರಾಜ್ಯದ ಸರ್ಕಾರೀ ಹಾಗೂ ಖಾಸಗಿ ಶಾಲೆಗಳಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಅನೇಕ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಸದ್ಯ ಸರ್ಕಾರೀ ಶಾಲೆಯ ಮಕ್ಕಳು ಇಂಗ್ಲಿಷ್ ಬರಲ್ಲ ಅನ್ನೋ ಕಾರಣದಿಂದ ಅದೆಷ್ಟೋ ಅವಕಾಶದಿಂದ ವಂಚಿತರಾಗಿದ್ದಾರೆ.

ಇದನ್ನ ಗಮದಲ್ಲಿಟ್ಟುಕೊಂಡು ಸದ್ಯ ರಾಜ್ಯ ಸರ್ಕಾರ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ಅನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Image Credit: Digitallearning

ಇನ್ನುಮುಂದೆ ಸರ್ಕಾರೀ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್
ಪ್ರಸ್ತುತ ರಾಜ್ಯ ಸರ್ಕಾರ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ಪರಿಚಯಿಸಲು ಮುಂದಾಗಿದೆ. ಸದ್ಯ ಶಿಕ್ಷಣ ಇಲಾಖೆ ಮಾಡಿದ ಈ ನಿರ್ಧಾರದಿಂದ ಹಲವು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಗ್ರಾಮೀಣ ಭಾಗದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುದರಿಂದ ಅವರಿಗೆ ಇಂಗ್ಲಿಷ್ ಅಂದರೆ ಭಯವಾಗುದು ಸಹಜ. ಇದರಿಂದ ಎಷ್ಟೋ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಭಯ ಇನ್ನುಮುಂದೆ ಸರ್ಕಾರೀ ಶಾಲೆಯ ಮಕ್ಕಳಿಗೆ ಬರಬಾರದು ಅನ್ನುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಮಹತ್ವ ಹೆಜ್ಜೆ ಇಟ್ಟಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳು ಯಾವುದೇ ಫಿಯರ್ ಇಲ್ಲದೆ ಇಂಗ್ಲಿಷ್ ಮಾತನಾಡುವ ಸಲುವಾಗಿ ಸ್ಪೋಕನ್ ಇಂಗ್ಲೀಷ್ ಅನ್ನು ಈ ಪ್ರಸಕ್ತ ಸಾಲಿನಿಂದ ಪರಿಚಯ ಮಾಡಲಾಗಿದೆ. 1 ರಿಂದ 10 ನೇ ತರಗತಿ ವರೆಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಸ್ಪೆಶಲ್ ಇಂಗ್ಲಿಷ್ ಕ್ಲಾಸಸ್ ಮಾಡಲು ಶಿಕ್ಷಣ ಇಲಾಖೆ ಸೂಚನೆ ಕೊಟ್ಟಿದೆ. ವಾರದ ಒಂದು ಶನಿವಾರ ದಿನದಲ್ಲಿ ಒಂದು ಅವಧಿ ಅಂದ್ರೆ 40 ನಿಮಿಷಗಳಕಾಲ ಇಂಗ್ಲಿಷ್ ಕಲಿಕೆಗೆ ಮೀಸಲು ಇಡಲಾಗುತ್ತೆ. ಇಂಗ್ಲಿಷ್ ಅಲ್ಲಿ ಡ್ಯಾನ್ಸ್, ನಿರೂಪಣೆ, ಇಂಗ್ಲಿಷ್ ಅಲ್ಲೇ ಕಡ್ಡಾಯವಾಗಿ ಮಕ್ಕಳು ಈ ಅವಧಿಯಲ್ಲಿ ಮಾತನಾಡಬೇಕು. ಇದರಿಂದ ಮಕ್ಕಳು ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳಲು ನೆರವಾಗುತ್ತದೆ.

Image Credit: Thehansindia
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in