Ads By Google

Indian Rupee: ಭಾರತದ 1 ರೂಪಾಯಿಗೆ ಶ್ರೀಲಂಕಾದಲ್ಲಿ ಇರುವ ಬೆಲೆ ಎಷ್ಟು ಗೊತ್ತಾ…? ಶ್ರೀಮಂತವಾಗುತ್ತಿದೆ ಭಾರತ.

sri lankan rupee value

Image Credit: Original Source

Ads By Google

Sri Lanka And Indian Rupee: ವಿಶ್ವದ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ವಿವಿಧ ದೇಶದಗಳಿಗೆ ಹೋಲಿಸಿದರೆ ಉನ್ನತ ಸ್ಥಾನದಲ್ಲಿದೆ ಎನ್ನಬಹುದು. ಭಾರತ ದೇಶದವು ಇತ್ತೀಚಿಗೆ ಹೆಚ್ಚಿನ ಪ್ರಗತಿ ಕಾಣುತ್ತಿದೆ. ಭಾರತದ ಹೆಸರು ಇಡೀ ವಿಶ್ವದೆಲ್ಲೆಡೆ ಪ್ರಸಿದ್ದಿ ಪಡೆದಿದೆ.

ಇನ್ನು ಇತ್ತೀಚೆಗಷ್ಟೇ ಯಶಸ್ಸು ಕಂಡಿರುವ Chandrayan 3 ಇತಿಹಾಸದಲ್ಲಿ ಭಾರತದ ಹೆಸರಿನ ದಾಖಲೆಯನ್ನು ಮುದ್ರಿಸಿದೆ. ಚಂದ್ರಯಾನ 3 ಯಶಸ್ಸಿನಿಂದಾಗಿ ಭಾರತ ದೇಶವನ್ನು ಇಡೀ ವಿಶ್ವವೇ ಕೊಂಡಾಡಿದೆ. ಇನ್ನು ಭಾರತ ದೇಶದವನ್ನು ಇನ್ನಿತರ ದೇಶಗಳಿಗೆ ಹೆಚ್ಚಾಗಿ ಹೋಲಿಕೆ ಮಾಡಲಾಗುತ್ತದೆ.

Image Credit: Cnbctv18

ಭಾರತ ಮತ್ತು ಶ್ರೀಲಂಕಾ
ಇನ್ನು ಹೆಚ್ಚಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಭಾರತವನ್ನು ಶ್ರೀಲಂಕಾಗೆ ಹೋಲಿಸಲಾಗುತ್ತದೆ. ಆದರೆ ಶ್ರೀಲಂಕಾ ಯಾವುದೇ ವಿಷಯದಲ್ಲೂ ಕೂಡ ಭಾರತವನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ಇನ್ನು ಆರ್ಥಿಕತೆಯ ವಿಷಯವಾಗಿ ಕೂಡ ಶ್ರೀಲಂಕಾ ಭಾರತಕ್ಕಿಂತ ಹಿಂದಿದೆ. ಇದೀಗ ಆರ್ಥಿಕತೆಯ ವಿಷಯವಾಗಿ ಕೂಡ ಶ್ರೀಲಂಕಾ ಭಾರತಕ್ಕಿಂತ ಎಷ್ಟು ಪಟ್ಟು ಹಿಂದೆ ಇದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Sri Lanka And Indian Rupee
ಶ್ರೀಲಂಕಾದಲ್ಲಿ ಹಣವನ್ನು Sri Lankan Rupee ಎನ್ನಲಾಗುತ್ತದೆ. ಭಾರತದಲ್ಲಿ ಹಣವನ್ನು ರೂಪಾಯಿಗಳಲ್ಲಿ ಪರಿಗಣಿಸಲಾಗುತ್ತದೆ. ಇನ್ನು ಭಾರತದ ರೂಪಾಯಿಗೆ ಹೋಲಿಸಿದರೆ Sri Lankan Rupee ಎಷ್ಟು ಪಟ್ಟು ಕಡಿಮೆ ಇದೆ ಎಂದು ಮಾಹಿತಿ ತಿಳಿದುಬಂದಿದೆ. ಶ್ರೀಲಂಕಾದಲ್ಲಿ ಕರೆನ್ಸಿ ಬಾರಿ ಕುಸಿತವನ್ನು ಕಂಡಿದೆ. ಒಂದು Indian Currency ಎದುರು Sri Lankan Rupee ಮೌಲ್ಯ ಕುಸಿದಿದೆ. ಶ್ರೀಲಂಕಾದಲ್ಲಿ ಹಣದುಬ್ಬರತೆ ಹೆಚ್ಚಿದೆ ಎನ್ನಬಹುದು. ಈ ಕಾರಣಕ್ಕೆ  ಶ್ರೀಲಂಕಾದಲ್ಲಿ ಎಲ್ಲ ವಸ್ತುಗಳ ಬೆಲೆ ಕೊಡ ಹೆಚ್ಚಿರುತ್ತದೆ.

Image Credit: Gulfnews

ಭಾರತೀಯ ಕರೆನ್ಸಿಯೊಂದಿಗೆ ಶ್ರೀಲಂಕಾದ ಕರೆನ್ಸಿಯ ಹೋಲಿಕೆ
ಇದೀಗ ಭಾರತೀಯ ಕರೆನ್ಸಿಯೊಂದಿಗೆ ಶ್ರೀಲಂಕಾದ ಕರೆನ್ಸಿಯನ್ನು ಹೋಲಿಕೆ ಮಾಡಿ ನೋಡಣ. ಮೂಲಗಳ ಪ್ರಕಾರ, ಭಾರತದ ಕರೆನ್ಸಿಗೂ ಶ್ರೀಲಂಕಾದ ಕರೆನ್ಸಿಗೂ ಬಹಳ ವ್ಯತ್ಯಾಸವಿದೆ. ಭಾರತದ ಒಂದು ರೂಪಾಯಿ ಶ್ರೀಲಂಕಾದ 4 ರೂಪಾಯಿಗೆ ಸಮಾನ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಶ್ರೀಲಂಕಾದ ನಾಲ್ಕು ರೂಪಾಯಿಯ ಬೆಲೆ ಭಾರತದಲ್ಲಿ 1 ರೂ. ಮೌಲ್ಯವನ್ನು ಹೊಂದಿದೆ ಎನ್ನಬಹುದು. ನಾವು ಶ್ರೀಲಂಕಾ ಪ್ರವಾಸಕ್ಕೆ ಹೋದರೆ ನಿಮ್ಮ ಬಳಿ 1000 ರೂ ಇದ್ದರೆ ಅವರು ನಮಗೆ 4000 ರೂ ಕೊಡುತ್ತಾರೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.