Sri Murali: ತಾಯಿಯಂತೆ ಇದ್ದ ಅತ್ತಿಗೆಯ ಬಹುದೊಡ್ಡ ಕನಸಿನ ಬಗ್ಗೆ ಹೇಳಿದ ಶ್ರೀ ಮುರಳಿ, ಈಡೇರುತ್ತಾ ಸ್ಪಂದನ ಕನಸು…?

ಅತ್ತಿಗೆ ಕಂಡ ಕನಸಿನ ಬಗ್ಗೆ ಮಾತನಾಡಿದ ನಟ ಶ್ರೀ ಮುರಳಿ

Sri Murali About Spandana Dream: ಚಿನ್ನಾರಿ ಮುತ್ತಾ ಎಂದು ಪ್ರಸಿದ್ಧ ಹೊಂದಿರುವ ಕನ್ನಡ ನಟ ವಿಜಯ್ ರಾಘವೇಂದ್ರ. ವಿಜಯ್ ರಾಘವೇಂದ್ರ ಸದಾ ನಗು ಮುಖ ಹೊಂದಿರುವ ವ್ಯಕ್ತಿ. ವಿಜಯ್ ರಾಘವೇಂದ್ರ (Vijay Raghavendra) ಅವರು ಸ್ಪಂದನಾ (Spandana) ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಸುಖಮಯವಾಗಿತ್ತು ಎನ್ನುವ ಸಂದರ್ಭದಲ್ಲೇ ನುಂಗಲಾರದ ನೋವು ಇವರ ಕುಟುಂಬಕ್ಕೆ ಎದುರಾಗಿದೆ.

Sri Murali About Spandana Dream

ಬಾರದ ಲೋಕಕ್ಕೆ ಕಾಲಿಟ್ಟ ಸ್ಪಂದನ ವಿಜಯ್ ರಾಘವೇಂದ್ರ
ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ಪ್ರವಾಸಕ್ಕೆ ಹೋದಾಗ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕ್ಸಿತೆ ಫಲಿಸದೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ನಟ ವಿಜಯ ರಾಘವೇಂದ್ರ ಅವರು ಸ್ಪಂದನ ಮೃತ ದೇಹವನ್ನು ಬೆಂಗಳೂರಿಗೆ ತರಲು ತುಂಬಾ ಕಷ್ಟ ಪಟ್ಟಿದ್ದಾರೆ. ಇವರಿಗೆ ಶೌರ್ಯ ಎಂಬ ಮಗನಿದ್ದು ಅಮ್ಮನ ನಿಧನದಿಂದ ಅವನು ನೋವಿನಲ್ಲಿ ಮುಳುಗಿದ್ದಾನೆ. ತಾಯಿಯ ಸ್ಥಾನದಲ್ಲಿದ್ದ ಅತ್ತಿಗೆಯನ್ನು ಕಳೆದುಕೊಂಡ ಶ್ರೀ ಮುರುಳಿ ಅತ್ತಿಗೆಯ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ.

ಅತ್ತಿಗೆ ಅಲ್ಲ ಅಮ್ಮನಂತಿದ್ರು ಎಂದ ಶ್ರೀ ಮುರಳಿ
ನನ್ನ ಅಣ್ಣನನ್ನು ಮದುವೆಯಾಗಿ ಬಂದಾಗ ಸ್ಪಂದನ ನನಗೆ ಅತ್ತಿಗೆಯಾಗಿ ಬರಲಿಲ್ಲ, ಅಮ್ಮನಂತೆ ಮನೆಗೆ ಬಂದ್ರು, ಮನೆಗೆ ಮೊದಲ ಸೊಸೆಯಾಗಿದ್ದ ಸ್ಪಂದನ ಮನೆಯಲ್ಲಿ ಎಲ್ಲರ ಜೊತೆಗೂ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು. ಶ್ರೀ ಮುರುಳಿ ಅವರನ್ನು ತನ್ನ ಮೈದುನನಂತೆ ಕಾಣದೆ ಸ್ವಂತ ಮಗನಂತೆ ಕಾಣುತ್ತಿದ್ದರು.

Spandana Vijay Raghavendra latest news update
Image Credit: Filmibeat

ಸ್ಪಂದನ ಕನಸು ಈಡೇರಲಿಲ್ಲ
ಸ್ಪಂದನ ಅವರಿಗೆ ನಟ ಶ್ರೀ ಮುರಳಿ ಮತ್ತೆ ವಿಜಯ ರಾಘವೇಂದ್ರ ಅವರು ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸನ್ನು ಹೊಂದಿದ್ದರು. ಸ್ಪಂದನ ಅವರು ತಮ್ಮ ನಿರ್ಮಾಣದಲ್ಲಿ ಸಿನಿಮಾವನ್ನು ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು.

Join Nadunudi News WhatsApp Group

ಈ ಹಿಂದೆ ಮಿಂಚಿನ ಓಟ ಎಂಬ ಸಿನಿಮಾದಲ್ಲಿ ರಾಘು ಹಾಗೂ ಶ್ರೀ ಮುರುಳಿ ಒಟ್ಟಿಗೆ ನಟಿಸಿದ್ದರು ಆದರೆ ಆ ಚಿತ್ರ ಹೆಚ್ಚು ಯಶಸ್ಸು ಕಾಣಲಿಲ್ಲ ಹಾಗಾಗಿ ಆ ನಷ್ಟವನ್ನು ಮರೆಸುವಂತ ಸಿನಿಮಾವನ್ನು ಮಾಡಬೇಕು ಅನ್ನುವ ಅಸೆ ಸ್ಪಂದನ ಅವರಿಗೆ ಇತ್ತು ಹಾಗಾಗಿ ಅವರು ನಿರ್ಮಾಪಕಿ ಆಗುವ ಕನಸನ್ನು ಕಂಡಿದ್ದರು. ಆದರೆ ವಿಧಿ ಆಟವೇ ಬೇರೆ ಆಗಿತ್ತು. ಸ್ಪಂದನ ಅವರು ಕನಸು ಕನಸಾಗಿಯೇ ಉಳಿಯಿತು.

Join Nadunudi News WhatsApp Group