Sriimurali: ಅತ್ತಿಗೆ ಸಾವಿಗೆ ಕಾರಣ ಏನು ತಿಳಿಸಿದ ಶ್ರೀಮುರಳಿ, ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಶ್ರೀಮುರಳಿ.
ಅತ್ತಿಗೆ ಸ್ಪಂದನ ಅವರ ಅಗಲಿಕೆ ಬಗ್ಗೆ ಮಾತನಾಡಿದ ಶ್ರೀಮುರುಳಿ.
Sriimurali About Spandana Death: ಕನ್ನಡದ ಖ್ಯಾತ ನಟನಾದ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನ (Spandana) ಅವರ ಅಗಲಿಕೆಯ ಸುದ್ದು ಎಲ್ಲರಿಗೆ ಇಳಿದಿರುವುದೇ. ಸ್ಪಂದನ ಅವರ ಅಕಾಲಿಕ ಮರಣ ಎಲ್ಲರಲ್ಲೂ ಬೇಸರ ಮೂಡಿಸಿದೆ. ಚಿತ್ರರಂಗದಿಂದ ಹಿಡಿದು ಅನೇಕ ಗಣ್ಯರು ಕನ್ನಡಿಗರು ಸ್ಪಂದನ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ.
ವಿಜಯ್ ಪತ್ನಿ ಸ್ಪಂದನ ನಿಧನ
ಇನ್ನು ಸ್ಪಂದನ ಅವರು ಬ್ಯಾಂಕಾಕ್ ಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಕೆಲಸದ ನಿಮಿತ್ತ ತೆರಳಿದ್ದರು. ಈ ವೇಳೆ ಆಗಸ್ಟ್ 6 ರ ಸಂಜೆ ಸ್ಪಂದನ ತೀವ್ರ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಗಿದ್ದರು. ಮರು ದಿನ ಮುಂಜಾನೆ ಸ್ಪಂದನ ಅವರು ಹೃದಯಾಘಾತದಿಂದ ಮೃತ ಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ.
ಲೋ ಬಿಪಿಯಿಂದಾಗಿ ಸ್ಪಂದನ ನಿಧನಾ ಹೊಂದಿರುವುದಾಗಿ ಮಾಹಿತಿ ಲಭಿಸಿದೆ. ನಿಜಕ್ಕೂ ಸ್ಪಂದನ ಅವರದ್ದು ಸಾಯುವ ವಯಸ್ಸಲ್ಲ. ಬದುಕಿ ಬಾಳಬೇಕಾದವರು ಹೀಗೆ ಅನಿರೀಕ್ಷಿತ ಸಾವು ಕಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಹೃದಯಾಘಾತದಿಂದ ಮೃತಪಟ್ಟ ಸ್ಪಂದನ
ಇನ್ನು ಸ್ಪಂದನ ಅವರ ಸಾವಿನ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತಿವೆ. ಯಾವ ಕಾರಣಕ್ಕೆ ಸ್ಪಂದನ ಅವರು ಮರಣ ಹೊಂದಿರಬಹುದು ಎನ್ನುವ ಬಗ್ಗೆ ಈಗಾಗಲೇ ನಾನಾ ಮಾಹಿತಿ ಕೂಡ ಲಭಿಸುತ್ತಿದೆ. ಒಂದೆಡೆ ಸ್ಪಂದನ ಅವರು ಹೆಚ್ಚು ದಪ್ಪಗಿದ್ದ ಕಾರಣ ಈ ನಡುವೆ ಡಯಟ್ ಹಾಗೂ ಜಿಮ್ ಮಾಡುತ್ತಿದ್ದರು.
ಈ ರೀತಿಯ ವರ್ಕ್ ಔಟ್ ಸ್ಪಂದನ ಬಾಳಿಗೆ ಮುಳುವಾಗಿದೆ ಎನ್ನುವ ಬಗ್ಗೆ ಕೂಡ ಸುದ್ದಿ ಹರಡುತ್ತಿದೆ. ಈವರೆಗೂ ಸ್ಪಂದನ ಅವರ ಸಾವಿನ ಬಗ್ಗೆ ನಿಖರ ಮಾಹಿತಿ ಲಭಿಸಿರಲಿಲ್ಲ. ಇದೀಗ ವಿಜಯ್ ರಾಘವೇಂದ್ರ ಅವರ ಸಹೋದರ ಶ್ರೀ ಮುರುಳಿ (Sriimurali) ಅವರು ತಮ್ಮ ಅತ್ತಿಗೆಯ ಸಾವಿನ ದುರಂತದ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದಾರೆ.
ಅತ್ತಿಗೆಯ ಸಾವಿನ ದುರಂತದ ಬಗ್ಗೆ ಮಾಹಿತಿ ನೀಡಿದ ಶ್ರೀಮುರುಳಿ
“ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ಕರೆ ಮಾಡಿ ತಿಳಿಸಿದ್ದಾರೆ. ಅತ್ತಿಗೆ ಕುಟುಂಬಸ್ಥರ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಇದ್ದ ಕಾರಣ ವಿಜಯ್ ಇಲ್ಲಿಯೇ ಇದ್ದಿದ್ದರು. ಸದ್ಯದಲ್ಲೇ ಅವರು ಕೂಡ ವಿದೇಶಕ್ಕೆ ಹೋಗುವವರಿದ್ದರು.
ಆಗಸ್ಟ್ 6 ರ ರಾತ್ರಿ ಮಲಗಿದ್ದ ಅತ್ತಿಗೆ ಮತ್ತೆ ಏಳಲೇ ಇಲ್ಲ. ಲೋ ಬಿಪಿ ಇಂದ ಹೀಗೆ ಆಯಿತು ಎನ್ನಲಾಗಿದೆ. ಮಾತ್ತಷ್ಟು ಮಾಹಿತಿಯನ್ನು ನಾಳೆ ನೀಡುತ್ತೇವೆ” ಎಂದು ಶ್ರೀ ಮುರುಳಿ ಹೇಳಿದ್ದಾರೆ. ಇನ್ನು ಸ್ಪಂದನ ಅವರು ವಿದೇಶದ್ಲಲಿದ್ದ ಕಾರಣ ಅವರ ಸಾವಿನ ಮಾಹಿತಿ ಯಾರಿಗೂ ಲಭಿಸಿಲ್ಲ. ಸ್ಪಂದನ ಅವರ ಅಗಲಿಕೆಯಿಂದ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುತ್ತಿದೆ.