SSC GD Constable Posts: SSLC ಪಾಸ್ ಆದವರಿಗೆ ಉತ್ತಮ ಉದ್ಯೋಗಾವಕಾಶ ಒದಗಿ ಬಂದಿದೆ. ಸ್ಥಿರ ಉದ್ಯೋಗದ ದೊಡ್ಡ ಕನಸು ಕಾಣುತ್ತಿರುವವರಿಗೆ ಇದೊಂದು ಉತ್ತಮ ಅವಕಾಶ ಎಂದರೆ ತಪ್ಪಾಗಲ್ಲ. ಹತ್ತನೇ ತರಗತಿ ಪಾಸಾದ ಯುವಕ ಮತ್ತು ಯುವತಿಯರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನೇಮಕಾತಿಗೆ ಅರ್ಜಿ ಆವ್ಹಾನ ಮಾಡಲಾಗಿದೆ. ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು..? ಅಗತ್ಯ ದಾಖಲೆಗಳೇನು..? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಅನ್ನು ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
SSC GD ಕಾನ್ಸ್‌ಟೇಬಲ್ 2025
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2026 ರ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ನೇಮಕಾತಿಗೆ 25,487 ಹುದ್ದೆಗಳ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ 1, 2025 ಅರ್ಜಿ ಆರಂಭವಾಗಿದ್ದು ಜನವರಿ 1, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಅರ್ಹ ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆ
* ಭಾರತೀಯ ನಾಗರಿಕನಾಗಿರಬೇಕು
* ಮಾನ್ಯತೆ ಪಡೆದ ಬೋರ್ಡ್ ನಿಂದ SSLC ಪಾಸ್ ಆಗಿರಬೇಕು
* ವಯಸ್ಸು, 2026 ಜನವರಿ 1 ರಂತೆ 18 ರಿಂದ 23 ವರ್ಷಗಳ ನಡುವೆ ಇರಬೇಕು
* SC / ST / OBC ಮತ್ತು ಇತರ ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ
* ಮಾಜಿ ಸೈನಿಕರಿಗೆ ಶೇ.10 ಮೀಸಲಾತಿ ಸಹ ಲಭ್ಯ.
ಈ ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಿ
ಮೊದಲು https://ssc.gov.in/ ವೆಬ್ ಸೈಟ್ ಗೆ ಭೇಟಿ ನೀಡಿ, ರಿಜಿಸ್ಟರ್ ಮಾಡಿಕೊಂಡು, ಅರ್ಜಿ ಫಾರ್ಮ್ ಭರ್ತಿ ಮಾಡಿ ಶುಲ್ಕ ಪಾವತಿ ಮಾಡಬೇಕು. ಪುರುಷ ಅಭ್ಯರ್ಥಿಗಳಿಗೆ 100 ರೂಪಾಯಿ ಶುಲ್ಕ ಮತ್ತು ಮಹಿಳೆಯರು, SC / ST, ಮಾಜಿ ಸೈನಿಕರು ಶುಲ್ಕ ವಿನಾಯಿತಿ ಪಡೆದುಕೊಳ್ಳುತ್ತಾರೆ. ಡಿಸೆಂಬರ್ 1, 2025 ಅರ್ಜಿ ಆರಂಭವಾಗಿದ್ದು ಜನವರಿ 1, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ತಿದ್ದು ಪಡಿ ಜನವರಿ 8 ರಿಂದ 10 ರ ವರೆಗೆ ಇರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಫೆಬ್ರವರಿ ಅಥವಾ ಏಪ್ರಿಲ್ 2026 ರಲ್ಲಿ ನೆಡೆಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
* ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
* ದೈಹಿಕ ಮಾನದಂಡ ಪರೀಕ್ಷೆ (PST)
* ದೈಹಿಕ ಸಾಮರ್ಥ್ಯ ಪರೀಕ್ಷೆ (PET)
* ದಾಖಲೆ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ
ಸಂಬಳ
ಆಯ್ಕೆ ಆದ ಅಭ್ಯರ್ಥಿಗಳಿಗೆ ಪೇ ಲೆವೆಲ್-3 ರಲ್ಲಿ 21,700 ದಿಂದ 69,100 ವರೆಗೆ ಮೂಲ ವೇತನ ನೀಡಲಾಗುತ್ತದೆ. ಹಾಗೆ ಇತರ ಭತ್ಯೆಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ SSC ವೆಬ್ ಸೈಟ್ ಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

