SSLC And PUC: SSLC ಮತ್ತು PUC ಪರೀಕ್ಷೆಯಲ್ಲಿ ಐತಿಹಾಸಿಕ ಬದಲಾವಣೆ, ಮಧು ಬಂಗಾರಪ್ಪ ಮಹತ್ವದ ಘೋಷಣೆ.
SSLC ಮತ್ತು PUC ಪರೀಕ್ಷಾ ನಿಯಾಮದಲ್ಲೂ ಬದಲಾವಣೆ ಮಾಡಿದ ಸರ್ಕಾರ.
SSLC And PUC Board Exam: ಇತ್ತೀಚಿಗೆ ಶಿಕ್ಷಣ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ. ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇನ್ನು ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಮುಖ್ಯವಾಗಿರುತ್ತದೆ. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ SSLC ಮತ್ತು PUC ಪ್ರಮುಖವಾದ ಹೆಜ್ಜೆ ಆಗಿರುತ್ತದೆ.
ಪಿಯುಸಿ ಹಾಗು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಪಾಸ್ ಆದರೆ ಬಹಳ ಬೇಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಇದೀಗ ಸೆಪ್ಟೆಂಬರ್ 5 ರಂದು ನೆಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು SSLC ಹಾಗೂ PUC ವಿದ್ಯಾರ್ಥಿಗಳಿಗೆ ಹೊಸ ಘೋಷಣೆಯನ್ನು ಹೊರಡಿಸಿದ್ದಾರೆ.
ಶಾಲಾ ಮಕ್ಕಳಿಗೆ ವಾರಕ್ಕೆ 2 ಬಾರಿ ಮೊಟ್ಟೆ ನೀಡಿಕೆ
ಶಾಲೆಗೆ ಹೋಗಲು ಮಕ್ಕಳಿಗೆ ಶಕ್ತಿ ಬೇಕು, ಈ ನಿಟ್ಟಿನಲ್ಲಿ 1 ನೇ ತರಗತಿಯಿಂದ 8 ನೇ ತರಗತಿಯ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿತ್ತು. ಇದನ್ನು ಮೊದಲು ವಾರಕ್ಕೆ ಒಂದು ಬಾರಿ ಮಾತ್ರ ನೀಡಲಾಗುತ್ತಿತ್ತು, ಆದರೆ ಈಗ ಸಿ ಎಂ ಸಿದ್ದರಾಮಯ್ಯ ಅವರು 1 ರಿಂದ 10 ನೇ ತರಗತಿವರೆಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡಲಾಗುತ್ತಿದೆ ಎಂದಿದ್ದಾರೆ.
ಅಥಿತಿ ಶಿಕ್ಷಕರ ನೇಮಕಾತಿ
ಶಿಕ್ಷಕರ ವರ್ಗಾವಣೆಯ ನಂತರ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ. ಇದನ್ನು ಗಮನಿಸಿದ ಸಿದ್ದರಾಮಯ್ಯ ಅವರು ಅಥಿತಿ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಿದ್ದಾರೆ. ಇದೀಗ 43 ಸಾವಿರ ಮಂದಿ ಅಥಿತಿ ಶಿಕ್ಷಕರಾಗಿ ಕೆಲಸ ಮಾಡುತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನುಮುಂದೆ SSLC ಹಾಗೂ PUC ಪರೀಕ್ಷೆ ವರ್ಷದಲ್ಲಿ 3 ಬಾರಿ
ವಿಧಾನಸೌಧದಲ್ಲಿ ನೆಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಿಗೆ 20, ಪ್ರೌಢ ಶಾಲಾ ಶಿಕ್ಷಕರಿಗೆ 20, ಇಬ್ಬರು ವಿಶೇಷ ಶಿಕ್ಷಕರು ಸೇರಿದಂತೆ 31 ಉತ್ತಮ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಯಿತು. ಹಾಗೆ ಕಲಿಕಾ ಚೇತರಿಕೆಯ ಕಾರಣದಿಂದ ಇನ್ನುಮುಂದೆ ವರ್ಷದಲ್ಲಿ 3 ಬಾರಿ SSLC ಹಾಗೂ PUC Board Exam ಗಳನ್ನೂ ನೆಡೆಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಘೋಷಣೆ ಮಾಡಿದ್ದಾರೆ.
ಮಕ್ಕಳು ಎಷ್ಟು ಒತ್ತಡದಲ್ಲಿ ಓದುತ್ತಿದ್ದಾರೆ ಅನ್ನುವುದು ನನಗೆ ತಿಳಿದಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ SSLC ಹಾಗೂ PUC ಪರೀಕ್ಷೆಗಳನ್ನು ಮೂರೂ ಬಾರಿ ನೆಡೆಸಲು ಅವಕಾಶ ನೀಡಲಾಗುತ್ತಿದೆ ಎಂದರು. ಯಾವುದೊ ಒಂದು ಕಾರಣಕ್ಕೆ ಮಕ್ಕಳಿಗೆ ಒಂದು ವರ್ಷ ವ್ಯರ್ತ ಆಗಬಾರದು. ಪರೀಕ್ಷೆಗಳು ಮಕ್ಕಳನ್ನು ಫೇಲ್ ಮಾಡೋದಕ್ಕಲ್ಲ, ಜೀವನದ ಬಗ್ಗೆ ಕಲಿಕೆಗಾಗಿ ಇರಬೇಕು ಎಂದಿದ್ದಾರೆ ಮಧು ಬಂಗಾರಪನ್ನವರು.