Girls Scheme: ಮಗಳ ಹೆಸರಿನಲ್ಲಿ 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 27 ಲಕ್ಷ ರೂ, ಕೇಂದ್ರದ ಈ ಯೋಜನೆ ಹೆಣ್ಣು ಮಕ್ಕಳಿಗೆ ಮಾತ್ರ.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪಡೆಯಿರಿ 27 ಲಕ್ಷ ರೂಪಾಯಿ.

SSY Investment Details And Benefits: ಸರ್ಕಾರ ಜನರಿಗಾಗಿ ವಿವಿಧ ಹೂಡಿಕೆಯ ಯೋಜನೆಯನ್ನು ಪರಿಚಯಿಸುತ್ತದೆ. ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ವಿವಿಧ ಯೋಜನೆಯನ್ನು ಪರಿಚಯಿಸಿದೆ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಉಳಿತಾಯ ಯೋಜನೆಯಲ್ಲಿ ಹೊದಿಕೆ ಮಾಡಿದರೆ ಪೋಷಕರಿಗೆ ಹೆಚ್ಚಿನ ಚಿಂತೆ ಆಗುತ್ತದೆ ಎನ್ನಬಹುದು.

ಸಾಮಾನ್ಯವಾಗಿ ತಂದೆ ತಾಯಿಗೆ ಹೆಣ್ಣು ಮಗು ಜನಸಿದರೆ ಒಂದು ರೀತಿಯಲ್ಲಿ ಜವಾಬ್ದಾರಿ ಹೆಚ್ಚುತ್ತದೆ ಎನ್ನಬಹುದು. ಇನ್ನೂ ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಸಿದರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ಹೆಣ್ಣು ಮಗು ಹುಟ್ಟಿದ ತಕ್ಷಣ ನೀವು ಈ ಸರ್ಕಾರೀ ಯೋಜನೆಯಲ್ಲಿ ಹೂಡಿಕೆ ಮಾಡಿ ನಿಮ್ಮ ಮಗುವಿನ ಭವಿಷ್ಯಕ್ಕೆ ಲಕ್ಷ ಲಕ್ಷ ಹಣವನ್ನು ಪಡೆದುಕೊಳ್ಳಬಹುದು. ನೀವು ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ರೆ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

SSY Investment Profit
Image Credit: Businessleague

ನಿಮ್ಮ ಮಗುವಿನ ಹೆಸರಿನಲ್ಲಿ ಇಂದೇ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ
ಸರ್ಕಾರ ಹೆಣ್ಣು ಮಕ್ಕಾಳಿಗಾಗಿ Sukanya Samruddhi ಯೋಜನೆಯನ್ನು ಪರಿಚಯಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆಯಲು ಮಗುವಿನ ಗರಿಷ್ಠ ವಯಸ್ಸು 10 ವರ್ಷ ಆಗಿದೆ. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಗು ಜನಸಿದ ತಕ್ಷಣವೇ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹದು. ಈ ಯೋಜನೆಯಲ್ಲಿ ಮಗಳಿಗೆ 21 ವರ್ಷ ತುಂಬಿದ ನಂತರ ಮಾತ್ರ ಮೆಚ್ಯೂರಿಟಿ ಮೊತ್ತ ಲಭ್ಯವಾಗುತ್ತದೆ. 18 ವರ್ಷ ವಯಸ್ಸಿನಲ್ಲಿ ನೀವು ಮೊತ್ತದ 50 ಪ್ರತಿಶತವನ್ನು ಹಿಂತೆಗೆದುಕೊಳ್ಳಬಹುದು.

ಈ ಯೋಜನೆಗೆ ಸರ್ಕಾರ ನೀಡುವ ಬಡ್ಡಿದರ ಎಷ್ಟು..?
ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರ ಶೇಕಡಾ 8 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಮೊದಲು ವಾರ್ಷಿಕ ಬಡ್ಡಿ ಶೇ. 7.60 ದರದಲ್ಲಿ ಲಭ್ಯವಿತ್ತು. ಆದರೆ ಈ ವರ್ಷದ ಮೊದಲ ತ್ರೈಮಾಸಿಕ ದಲ್ಲಿ ಸರ್ಕಾರವು SSY ಬಡ್ಡಿದರವನ್ನು 40bps ಹೆಚ್ಚಿಸಿದೆ. ಇದರಿಂದಾಗಿ ಹೂಡಿಕೆದಾರರು ಉತ್ತಮ ಲಾಭ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಈ ಯೋಜನೆಯಲ್ಲಿ ಮಗಳ ಹೆಸರಿನಲ್ಲಿ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸಿಕೊಳ್ಳಬಹುದು.

SSY Latest Updates
Image Credit: Original Source

ಮಗಳ ಹೆಸರಿನಲ್ಲಿ 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 27 ಲಕ್ಷ ರೂ
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 5000 ರೂ. ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಹೊದಿಕೆಯ ಪ್ರಕಾರ ನೀವು ಪ್ರತಿ ವರ್ಷ ಹೂಡಿಕೆ 60 ಸಾವಿರ ರೂ. ಹೂಡಿಕೆ ಮಾಡಬೇಕಾಗುತ್ತದೆ ಮತ್ತು 15 ವರ್ಷಗಳಲ್ಲಿ 9 ಲಕ್ಷ ರೂ. ಹೂಡಿಕೆ ಆಗಲಿದೆ. ನೀವು 15 ರಿಂದ 21 ವರ್ಷಗಳ ನಡುವೆ ಹೂಡಿಕೆ ಮಾಡುವ ಅಗತ್ಯವಿಲ್ಲ. ಈ ಹೂಡಿಕೆಯ ಮೇಲೆ ನೀವು 8 ಪ್ರತಿಶತ ಬಡ್ಡಿಯನ್ನು ಪಡೆಯುತ್ತೀರಿ. ಹೂಡಿಕೆ ಹಾಗೂ ಬಡ್ಡಿದರದ ಆಧಾರದ ಮೇಲೆ ನೀವು ಮೆಚ್ಯುರಿಟಿ ಅವಧಿಯ ನಂತರ 27 ಲಕ್ಷ ಹಣವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group