Govt Scheme: ಬಡ ಪೋಷಕರ ಮಗಳ ಮದುವೆ ಮಾಡಲು ಕೇಂದ್ರ ಸರ್ಕಾರವೇ ಕೊಡಲಿದೆ ಹಣ, ಇಂದೇ ಯೋಜನೆಗೆ ಅರ್ಜಿ ಹಾಕಿ.
ಕೇಂದ್ರ ಸರ್ಕಾರ ಬಡ ಪೋಷಕರ ಮಗಳ ಮದುವೆ ಮಾಡಲು ಈ ಯೋಜನೆಯ ಮೂಲಕ ಹಣವನ್ನು ನೀಡುತ್ತಿದೆ.
SSY Latest Update: ಸಾಮಾನ್ಯವಾಗಿ ತಂದೆ ತಾಯಿಗೆ ಹೆಣ್ಣು ಮಗು ಜನಿಸಿದರೆ ಚಿಂತೆ ಹೆಚ್ಚಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳು ಜನಿಸಿದ ತಂದೆ ತಾಯಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಹೆಣ್ಣು ಮಗುವಿನ ವಿದ್ಯಾಭ್ಯಾಸದಿಂದ ಹಿಡಿದು ಅವಳು ಮದುವೆಯಾಗಿ ಗಂಡ ಮನೆ ಸೇರುವವರೆಗೂ ಆ ಹೆಣ್ಣು ಮಗುವಿನ ಜವಾಬ್ದಾರಿ ತಂದೆ ತಾಯಿಯದ್ದಾಗಿರುತ್ತದೆ. ಇನ್ನು ಹೆಣ್ಣು ಮಗು ಬೆಳೆಯುತ್ತಿದ್ದಂತೆ ಚಿಂತೆ ಹೆಚ್ಚಾಗುತ್ತದೆ.
ಹೀಗಾಗಿ ನೀವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಪರಿಚಯಿಸಿರುವ ಈ ಯೋಜನೆಯಲ್ಲಿ ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿ. ಇದರಿಂದ ನಿಮ್ಮ ಮಗಿವಿನ ಜವಾಬ್ದಾರಿಯ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಅಷ್ಟಕ್ಕೂ ಕೇಂದ್ರದ ಈ ಯೋಜನೆ ಯಾವುದು ಎಂದು ಯೋಚಿಸುತ್ತಿದ್ದೀರಾ? ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೇಂದ್ರ ಪರಿಚಯಿಸಿರುವ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.
ಬಡ ಪೋಷಕರ ಮಗಳ ಮದುವೆ ಮಾಡಲು ಕೇಂದ್ರ ಸರ್ಕಾರವೇ ಕೊಡಲಿದೆ ಹಣ
ಕೇಂದ್ರ ಸರ್ಕಾರ ಇದೀಗ ಬಡ ಪೋಷಕರ ಮಗಳ ವಿದ್ಯಾಭ್ಯಾಸ ಹಾಗೂ ಮದುವೆ ಮಾಡಲು ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಹಣವನ್ನು ನೀಡುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆಂದೇ ರೂಪಿಸಿರುವ ಈ ಯೋಜನೆಯ ಹೆಸರು Sukanya Samruddhi Yojana.
ನಿಮಗೆ ಈಗಾಗಲೇ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದಿರಬಹುದು ಎಂದು ಭಾವಿಸೋಣ. ಈಗಾಗಲೇ ದೇಶದಲ್ಲಿ ಲಕ್ಷಾಂತರ ಪೋಷಕರು ತಮ್ಮ ಹೆಣ್ಣು ಮಗಳ ಹೆಸರಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ. ಈ ಯೋಜನೆಯಲ್ಲಿ ಹೂಡಿಕೆ ಮೊತ್ತ ಎಷ್ಟು? ಹೂಡಿಕೆಯ ಅವಧಿ ಎಷ್ಟು? ಹೂಡಿಕೆಯಿಂದ ಗಳಿಸಬಹುದಾದ ಲಾಭ ಎಷ್ಟು? ಎನ್ನುವ ಎಲ್ಲ ಪ್ರಶ್ನೆಗೆ ಉತ್ತರ ತಿಳಿಯೋಣ.
ಅತಿ ಕಡಿಮೆ ಹೂಡಿಕೆಯಲ್ಲಿ ಪಡೆಯಿರಿ ಹೆಚ್ಚಿನ ಲಾಭ
ನೀವು Sukanya Samruddhi ಯೋಜನೆಯಲ್ಲಿ ಕನಿಷ್ಟ ರೂ 250 ರಿಂದ ಗರಿಷ್ಠ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ನೀವು 15 ವರ್ಷಗಳವರೆಗೆ ನಿರಂತರವಾಗಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ನೀವು ಮಾಸಿಕ 5000 ರೂಪಾಯಿ ಹೂಡಿಕೆ ಮಾಡಿದರೆ ಮಗಳ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅದರಂತೆ ನೀವು ಯೋಜನೆಯಲ್ಲಿ ವಾರ್ಷಿಕವಾಗಿ 60 ಸಾವಿರ ರೂ. ವರೆಗೆ ಹೂಡಿಕೆ ಮಾಡಬಹುದು. ಈ ರೀತಿಯಾಗಿ 15 ವರ್ಷಗಳಲ್ಲಿ ನೀವು ಒಟ್ಟು ರೂ. 9,00,000 ಹೂಡಿಕೆ ಮಾಡಬೇಕಾಗುತ್ತದೆ.
ನೀವು 15 ರಿಂದ 21 ವರ್ಷಗಳವರೆಗೆ ಅಂದರೆ 6 ವರ್ಷಗಳವರೆಗೆ ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ. ಪ್ರಸ್ತುತ ಹೆಣ್ಣು ಮಕ್ಕಳಿಗೆ ಹೂಡಿಕೆಗೆ ಶೇ. 8 ರಷ್ಟು ಬಡ್ಡಿ ನೀಡಲಾಗುತ್ತಿದೆ. 9 ಲಕ್ಷ ಹೂಡಿಕೆ ಮಾಡಿದರೆ ವಾರ್ಷಿಕ 17,93814 ರೂ.ಗಳನ್ನು ಬಡ್ಡಿಯಾಗಿ ನೀಡಲಾಗುತ್ತದೆ. ಇದರ ಪ್ರಕಾರ, ನೀವು ಮೆಚ್ಯೂರಿಟಿಯಲ್ಲಿ ರೂ. 26,93,814 ಲಕ್ಷ ಹಣವನ್ನು ಪಡೆದು ನೀವು ನಿಮ್ಮ ಮಗಳಿಗೆ ಉತ್ತಮ ಭವಿಷ್ಯವನ್ನು ನೀಡಬಹುದು.