Ads By Google

SSY And PPF: PPF SSY ಮತ್ತು NPS ಖಾತೆ ಇದ್ದವರು ಮಾರ್ಚ್ 31 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ ಖಾತೆ ನಿಷ್ಕ್ರಿಯ.

SSY Benefits

Image Source: India Today

Ads By Google

SSY, PPF, NPS Minimum Balance Deadline:  ಸಾಮಾನ್ಯವಾಗಿ ಜನರು ತಮ್ಮ ಉಳಿತಾಯದ ಹಣವನ್ನು ವಿವಿಧ ಹೂಡಿಕೆಯ ಯೋಜನೆಗಳಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಇನ್ನು ಹೂಡಿಕೆಯ ಯೋಜನೆಗಳಲ್ಲಿ Public provident Fund , Sukanya Samriddhi Yojana , National Pension Scheme ನಲ್ಲಿ ಹೆಚ್ಚಿನ ಜನರು ತಮ್ಮ ಹೂಡಿಕೆಯನ್ನು ಮಾಡುತ್ತಿದ್ದಾರೆ ಎನ್ನಬಹುದು.

ಸದ್ಯ ಈ ಮೂರು ಯೋಜನೆಗಳಲ್ಲಿ ಹೂಡಿಕೆ ಮಾಡಿದವರಿಗೆ ಹೊಸ ನಿಯಮ ಜಾರಿಯಾಗಿದೆ. ಹೌದು, ಈ ಮೂರು ಯೋಜನೆಗಳ ಹೂಡಿಕೆದಾದರೂ ನಿಗದಿತ ಸಮಯದೊಳಗೆ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Image Credit: Haryanaupdate

PPF SSY ಮತ್ತು NPS ಖಾತೆ ಇದ್ದವರು ಮಾರ್ಚ್ 31 ರೊಳಗೆ ಈ ಕೆಲಸ ಮಾಡಿ
ಸದ್ಯ ಕೇಂದ್ರದಿಂದ SSY , PPF , NPS ಯೋಜನೆಯ ಹೂಡಿಕೆದಾರರಿಗೆ ಹೊಸ ರೂಲ್ಸ್ ಜಾರಿ ಮಾಡಿದೆ. ನಿಮ್ಮ ಈ ಮೂರು ಹೂಡಿಕೆಯ ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಹೊಸ ನಿಯಮವೂ ಜಾರಿಗೆ ಬಂದಿದೆ. ಮಾರ್ಚ್ 31, 2024 ರ ವರೆಗೆ ಈ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ.

ಖಾತೆದಾರರು ತನ್ನ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಅಂತವರ ಖಾತೆಯು ನಿಷ್ಕ್ರಿಯವಾಗಬಹುದು. ನಿಷ್ಕ್ರಿಯ ಖಾತೆಯನ್ನು ಪುನಃ ತೆರೆಯಲು, ಖಾತೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಇದೀಗ ನಾವು SSY, PPF, NPS ಯೋಜನೆಯ ಖಾತೆಯಲ್ಲಿ ಎಷ್ಟು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದು ಅಗತ್ಯವಾಗಿದೆ…? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Image Credit: Jagran

SSY Minimum Balance
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ Minimum Balance 250 ರೂ. ಆಗಿದೆ. ಅಂದರೆ ಖಾತೆಯನ್ನು ಸಕ್ರಿಯವಾಗಿಡಲು ಆರ್ಥಿಕ ವರ್ಷದಲ್ಲಿ 250 ರೂ. ಗಳನ್ನು ಹೂಡಿಕೆ ಮಾಡುವುದು ಅಗತ್ಯ. ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ಖಾತೆದಾರನು ವರ್ಷಕ್ಕೆ 50 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ನಿಮ್ಮ SSY ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಮಾರ್ಚ್ 31 ರೊಳಗೆ ಕಾಯ್ದಿರಿಸುವುದು ಅಗತ್ಯ.

PPF Minimum Balance
PPF ನಿಯಮಗಳು 2019 ರ ಪ್ರಕಾರ, ಪ್ರತಿ ಹಣಕಾಸು ವರ್ಷದಲ್ಲಿ PPF ಖಾತೆಯಲ್ಲಿ ಕನಿಷ್ಠ 500 ರೂ. ಠೇವಣಿ ಅಗತ್ಯವಿದೆ. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ, ಪಿಪಿಎಫ್ ಖಾತೆ ನಿಷ್ಕ್ರಿಯವಾಗುತ್ತದೆ. PPF ಖಾತೆಯು ನಿಷ್ಕ್ರಿಯವಾಗಿರುವಾಗ ಸಾಲ ಮತ್ತು ಹಿಂಪಡೆಯುವ ಸೌಲಭ್ಯಗಳು ಲಭ್ಯವಿರುವುದಿಲ್ಲ. ಖಾತೆ ಡೀಫಾಲ್ಟ್ ಆಗಿದ್ದಲ್ಲಿ ವರ್ಷಕ್ಕೆ ರೂ. 50 ಶುಲ್ಕ ವಿಧಿಸಲಾಗುತ್ತದೆ. ಡೀಫಾಲ್ಟ್ ಶುಲ್ಕದ ಹೊರತಾಗಿ ಠೇವಣಿದಾರರು ಪ್ರತಿ ವರ್ಷ ಕನಿಷ್ಠ 500 ರೂ. ಪಾವತಿಸಬೇಕಾಗುತ್ತದೆ.

Image Credit: Valueresearchonline

NPS Minimum Balance
ಕೆಲವು ತೆರಿಗೆದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD(1B) ಅಡಿಯಲ್ಲಿ ಹೆಚ್ಚುವರಿ 50,000 ರೂ. ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಲು NPS ಖಾತೆಯನ್ನು ತೆರೆಯಿರಿ. ಸೆಕ್ಷನ್ 80 ಸಿ ಅಡಿಯಲ್ಲಿ, 50,000 ರೂ. ಹೂಡಿಕೆಯನ್ನು 1.5 ಲಕ್ಷದ ಮಿತಿಗಿಂತ ಹೆಚ್ಚು ಅನುಮತಿಸಲಾಗಿದೆ. NPS ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 1,000 ರೂ. ಕನಿಷ್ಠ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ನಿಮ್ಮ ಖಾತೆ ನಿಷ್ಕ್ರಿಯವಾಗಿದ್ದರೆ 500 ರೂ. ಠೇವಣಿ ಮಾಡುವ ಮೂಲಕ ಇದನ್ನು ಸಕ್ರಿಯಗೊಳಿಸಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in