Toll Plaza: ದೇಶದ ಎಲ್ಲಾ ಟೋಲ್ ಪ್ಲಾಜಾ ಗಳಲ್ಲಿ ಜಾರಿಗೆ ಬಂತು ಐತಿಹಾಸಿಕ ರೂಲ್ಸ್, ಕೇಂದ್ರದ ಹೊಸ ರೂಲ್ಸ್.

ದೇಶದ ಎಲ್ಲಾ ಟೋಲ್ ಗೇಟ್ ಗಳಿಗೆ ಹೊಸ ನಿಯಮ ಜಾರಿಗೆ.

Standard Operating Procedure: ಸದ್ಯ ದೇಶದಲ್ಲಿ Traffic ಸಮಸ್ಯೆಯ ನಿಯಂತ್ರಣಕ್ಕಾಗಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರವು ಟ್ರಾಫಿಕ್ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದರು ಕೂಡ Traffic ಸಮಸ್ಯೆ ಕಡಿಮೆ ಆಗುತ್ತಿಲ್ಲ ಎನ್ನಬಹುದು.

ದೇಶದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗಾಗಲೇ ಟ್ರಾಫಿಕ್ ನಿಯಂತ್ರಣಕ್ಕಾಗಿ ವಿವಿಧ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಸದ್ಯ Toll ನಲ್ಲಿ ಪ್ರತಿ ನಿತ್ಯ ಹಣ ಕಟ್ಟುವವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

New rule for toll payers
Image Credit: Jagranjosh

ಟೋಲ್ ನಲ್ಲಿ ಪ್ರತಿನಿತ್ಯ ಹಣ ಕಟ್ಟುವವರಿಗೆ ಇಂದಿನಿಂದ ಹೊಸ ನಿಯಮ
ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನ ಕೂಡ Toll Plaza ವನ್ನು ಹಾದುಹೋಗಬೇಕಾಗುತ್ತದೆ. Toll Plaza ದಲ್ಲಿ ಆಗಾಗ ಜಗಳ ಉಂಟಾಗುವುದು ಸಹಜ. ಸದ್ಯ National Highways Authority of India (NHAI) ಪ್ರಯಾಣಿಕರು ಮತ್ತು ಟೋಲ್ ನಿರ್ವಾಹಕ ಸುರಕ್ಷತೆಗಾಗಿ ಮತ್ತು ಅಲ್ಲಿ ಉಂಟಾಗುವ ಜಗಳವನ್ನು ಕಡಿಮೆ ಮಾಡುವ ಸಲುವಾಗಿ ಹೊಸ ಕ್ರಮವನ್ನು ಕೈಗೊಂಡಿದೆ.

Standard Operating Procedure (SOP)
ಸದ್ಯ NHAI ದೇಶದಲ್ಲಿ ಟೋಲ್ ಪ್ಲಾಜಾದಲ್ಲಿ Standard Operating Procedure ಅನ್ನು ಹೊರಡಿಸಿದೆ. ಈ ಬಗ್ಗೆ NHAI ಅಧಿಕೃತ ಮಾಹಿತಿ ನೀಡಿದೆ. ಇನ್ನು SOP ಮೂಲಕ ಸರ್ಕಾರದಿಂದ ಕೆಲವು ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. Toll ಸಂಗ್ರಹಿಸುವ ಏಜೆನ್ಸಿಗಳು ತಮ್ಮ ಸಿಬ್ಬಂದಿ ಮತ್ತು ರಸ್ತೆ ಬಳಕೆದಾರರನ್ನು ಸಾಮರ್ಥವಾಗಿ ನಿರ್ವಹಿಸುವುದನ್ನು ಖಾಚಿತಪಡಿಸಿಕೊಳ್ಳಲು NHAI ಪ್ರಾದೇಶಿಕ ಕಚೇರಿಗಳಿಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ.

Toll Plaza New Rule
Image Credit: Economictimes

SOP ಪ್ರಕಾರ, ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ Toll ಸಂಗ್ರಹ ಏಜೆನ್ಸಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಪ್ರಾದೇಶಿಕ ಕಚೇರಿಗಳು ಖಚಿತಪಡಿಸಿಕೊಳ್ಳುತ್ತದೆ. ಟೋಲ್ ಪ್ಲಾಜಾ ನೌಕರರು ತಮ್ಮ ಹೆಸರಿನೊಂದಿಗೆ NHAI ಸೂಚಿಸಿದ ಸಮವಸ್ತ್ರವನ್ನು ಧರಿಸುವುದನ್ನು ಟೋಲ್ ಸಂಗ್ರಹ ಸಂಸ್ಥೆ ಖಚಿತಪಡಿಸುತ್ತದೆ ಎಂದು ತಿಳಿಸಲಾಗಿದೆ. ಯಾವುದೇ ಹಿಂಸಾಚಾರದ ಘಟನೆಯನ್ನು ಟೋಲ್ ಪ್ಲಾಜಾ ನಿರ್ವಾಹಕರು/ಲೇನ್ ವೀಕ್ಷಕರು ಬಾಡಿ ಕ್ಯಾಮೆರಾಗಳನ್ನು ಧರಿಸಿ ಮಾತ್ರ ನಿಯಂತ್ರಿಸಬೇಕು. ಇದು ಅಲ್ಲಿ ನಡೆಯುವ ಘಟನೆಯನ್ನು ದಾಖಲಿಸುತ್ತದೆ.

Join Nadunudi News WhatsApp Group

Join Nadunudi News WhatsApp Group