Yuva Nidhi: ಈ ದಿನದಂದು ಖಾತೆಗೆ ಬರಲಿದೆ 3000 ರೂ, ಡಿಪ್ಲೋಮ ಮತ್ತು ಪದವಿ ಮಾಡಿದವರಿಗೆ ಸಿದ್ದರಾಮಯ್ಯ ಗುಡ್ ನ್ಯೂಸ್.
ಯುವ ನಿಧಿ ಯೋಜನೆ ಜಾರಿ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ.
Karnataka Yuva Nidhi Scheme 2023: ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿದೆ. ಕಾಂಗ್ರೆಸ್ ಸರ್ಕಾರ (Congress Government )ಅಧಿಕಾರಕ್ಕೆ ಬರುದಕ್ಕಿಂತ ಮೊದಲು ಕೆಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು.
ಸಿದ್ದರಾಮಯ್ಯ ( Siddaramaiah) ಸರ್ಕಾರ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳಲ್ಲಿ ಈಗಾಗಲೇ ಶಕ್ತಿ ಯೋಜನೆ ಅನ್ನಭಾಗ್ಯ ಯೋಜನೆ ಜಾರಿಯಲ್ಲಿದೆ.ಹಾಗೆ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯೋಜನೆಗಳ ಜಾರಿ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಇದೀಗ ಯುವಕರು ಹಣ ಪಡೆಯುವ ಗ್ಯಾರಂಟಿ ಯೋಜನೆಯಾದ ಯುವ ನಿಧಿ (Yuva Nidhi)ಬಗ್ಗೆ ಕಾಂಗ್ರೆಸ್ ಸರ್ಕಾರ ಮಹತ್ವ ಮಾಹಿತಿಯನ್ನ ನೀಡಿದೆ.
ಯಾರಿಗೆ ಸಿಗಲಿದೆ ಯುವನಿಧಿ ಲಾಭ
2022 -23 ನೇ ಸಾಲಿನಲ್ಲಿ ತೇರ್ಗಡೆಯಾಗಿ 6 ತಿಂಗಳು ಉದ್ಯೋಗ ಸಿಗದೇ ಇದ್ದರೆ ಕರ್ನಾಟಕ ಸರ್ಕಾರದ ಈ ಯುವನಿಧಿ ಯೋಜನೆಯ ಲಾಭ ಸಿಗಲಿದೆ. ಗರಿಷ್ಟ 2 ವರ್ಷಗಳ ವರೆಗೆ ಈ ನಿರುದ್ಯೋಗ ಭತ್ಯೆ ಸಿಗುತ್ತದೆ. 2 ವರ್ಷದೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತವಾಗುತ್ತದೆ.
ಯುವ ನಿಧಿ ಯೋಜನೆ ಚಾಲನೆ ಬಗ್ಗೆ ಸ್ಪಷ್ಟನೆ
ಯುವ ನಿಧಿ ಯೋಜನೆಯ ಅಡಿಯಲ್ಲಿ ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲಾ ಪದವೀಧರರಿಗೆ ಪ್ರತಿ ತಿಂಗಳು 3000 ರೂಪಾಯಿ ಹಾಗೆ ಡಿಪ್ಲೊಮೊ ಪದವಿದರರಿಗೆ ಮಾಸಿಕವಾಗಿ 1500 ರೂಪಾಯಿಯನ್ನ ನೀಡಲಾಗುದು ಎಂದು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು. ಅದರ ಪ್ರಕಾರ ಈ ಯುವನಿಧಿ ಯೋಜನೆಯನ್ನು ಡಿಸೇಂಬರ್ ಅಥವಾ ಜನವರಿಯಲ್ಲಿ ಜಾರಿಗೊಳಿಸಲಾಗುದು ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು ಮಾಹಿತಿಯನ್ನ ನೀಡಿದರೆ ಕಟ್ಟಬೇಕು ಹೆಚ್ಚಿನ ದಂಡ
ಯುವನಿಧಿ ಯೋಜನೆಯ ಲಾಭ ಪಡೆಯುತ್ತಿದ್ದು ಮದ್ಯದಲ್ಲಿ ಉದ್ಯೋಗ ದೊರೆತರೆ ಅದರ ಬಗ್ಗೆ ಮಾಹಿತಿ ನೀಡಬೇಕು ಹಾಗೆ ಸುಳ್ಳು ಮಾಹಿತಿಯನ್ನ ನೀಡಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ.
ಈ ದಿನದಂದು ಜಮಾ ಆಗಲಿದೆ 2000
ಇನ್ನು ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗೆ ಮಾಸಿಕವಾಗಿ 2000 ಹಣ ನೀಡುದಾಗಿ ಘೋಷಣೆ ಮಾಡಿತ್ತು ಆ ಪ್ರಕಾರ ಆಗಸ್ಟ್ 29 ಅಥವಾ 30 ಕ್ಕೆ ಗೃಹ ಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಆಗಲಿದೆ ಎಂದು ಡಿಕೆ ಶಿವಕುಮಾರ್ (D K Shivakumar)ಅವರು ಮಾಹಿತಿ ನೀಡಿದ್ದಾರೆ.