Pancha Mitra: ಗ್ರಾಮೀಣ ಭಾಗದ ಜನರಿಗಾಗಿ “ಪಂಚಮಿತ್ರ” ಸೇವೆ ಯೋಜನೆಗೆ ಆರಂಭ, ನಿಮ್ಮ ಸಮಸ್ಯೆಗೆ ಸಹಾಯವಾಣಿ.
ಗ್ರಾಮೀಣ ಜನತೆಯ ಸಮಸ್ಯೆಗೆ ಪರಿಹಾರ ನೀಡಲು "ಪಂಚಮಿತ್ರ ಸಹಾಯವಾಣಿ" ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
State Govt Pancha Mitra Scheme: ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ ಜನತೆಗಾಗಿ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿವೆ. ರಾಜ್ಯದ ಜನತೆಗೆ ರಾಜ್ಯ ಸರ್ಕಾರದ ಪ್ರತಿ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ರಾಜ್ಯ ಸರ್ಕಾರ ಇತ್ತಿಚೆಗಸ್ತ್ಯೇ ರಾಜ್ಯದ ಜನತೆಗಾಗಿ Gruha Arogya ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯ ಅಡಿಯಲ್ಲಿ ಅರ್ಹರು ಉಚಿತ ಚಿಕಿತ್ಸೆಯನ್ನು ಪಡೆಯಲಿದೆ. ಸದ್ಯ ರಾಜ್ಯದ ಸರ್ಕಾರ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿದ ಬೆನ್ನಲ್ಲೇ ಮತ್ತೊಂದು ಮಹತ್ವದ ಯೋಜನೆಯನ್ನ ರೂಪಿಸಲು ಸಿದ್ದವಾಗಿದೆ.
ಗ್ರಾಮೀಣ ಭಾಗದ ಜನರಿಗಾಗಿ “ಪಂಚಮಿತ್ರ” ಸೇವೆ ಯೋಜನೆಗೆ ಆರಂಭ
ಸದ್ಯ ರಾಜ್ಯ ಸರ್ಕಾರ ರಾಜ್ಯದ ಗ್ರಾಮೀಣ ಜನತೆಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಗ್ರಾಮೀಣ ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಲು ನಿರ್ಧರಿಸಿದೆ. ರಾಜ್ಯದ ಪ್ರತಿಯೊಂದು ಗ್ರಾಮಗಳ ಸಮಸ್ಯೆಯನ್ನು ನಿವಾರಿಸಲು ಇದೀಗ ಹೊಸ ಯೋಜನೆ ಸಿದ್ಧವಾಗುತ್ತಿದೆ. ಗ್ರಾಮೀಣ ಜನತೆಯ ಸಮಸ್ಯೆಗೆ ಪರಿಹಾರ ನೀಡಲು “ಪಂಚಮಿತ್ರ ಸಹಾಯವಾಣಿ” (Pancha Mitra Helpline) ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾಹಿತಿ ನೀಡಿದ್ದಾರೆ. ಗ್ರಾಮ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಪಂಚಮಿತ್ರ ಎಂಬ ಸಹಾಯವಾಣಿಯನ್ನು ಇನ್ನೆರಡು ತಿಂಗಳಲ್ಲಿ ಆರಂಭಿಸಲಾಗುವುದು. ಇದು ರಾಜ್ಯದಾದ್ಯಂತ ಎಲ್ಲ ಪಂಚಾಯತಿಗಳ ವ್ಯವಸ್ಥೆಯಲ್ಲೂ ಅನ್ಯವಯವಾಗಲಿದೆ. ಪಂಚತಂತ್ರ 2 ಸಾಫ್ಟ್ ವೆರ್ ಮೂಲಕ ಮುಂದಿನ ದಿನಗಳಲ್ಲಿ 2 ರಿಂದ 3 ಸಾವಿರ ಕೋಟಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಲಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಜನತೆಗಾಗಿ Gruha Arogya Yojana
ಜನರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧಿಯನ್ನು ಒದಗಿಸುವ ‘Gruha Arogya’ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆ ರೂಪಿಸಲು ಚಿಂತನೆ ನಡೆಸಿದೆ. ಈ ಯೋಜನೆಯಡಿ ಆರೋಗ್ಯ ಸಿಬ್ಬಂಧಿ ಎಲ್ಲ ಮನೆಗಳಿಗೆ ಭೇಟಿ ನೀಡಿ ಎಲ್ಲಾ ಕುಟುಂಬದ ಸದ್ಯಸ್ಯರನ್ನು ತಪಾಸಣೆ ನಡೆಸಲಿದ್ದಾರೆ.
ಬಿಪಿ, ಮಧುಮೇಹ ಸೇರಿದಂತೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲೇ ಔಷಧ ನೀಡಲಿದ್ದು, ಸಂಕೀರ್ಣ ಕಾಯಿಲೆಯನ್ನು ಪತ್ತೆ ಹಚ್ಚಿ ಗಂಭೀರ ಸಮಸ್ಯೆ ಇದ್ದವರನ್ನು ಗುರುತಿಸಿ ಸೂಕ್ತ ಚಿಕೆತ್ಸೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಸದ್ಯದಲ್ಲೇ ಗೃಹ ಆರೋಗ್ಯ ಯೋಜನೆಯ ಜೊತೆಗೆ ರಾಜ್ಯದ ಗ್ರಾಮೀಣ ಪ್ರದೇಶದ ಜನತೆ ಈ ಪಂಚಮಿತ್ರ ಸೇವಾ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.