ಕಾರ್ ಅಂದರೆ ಯಾರುತಾನೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರೂ ಕೂಡ ಕಾರುಗಳನ್ನ ಇಷ್ಟಪಡುತ್ತಾರೆ, ಆದರೆ ಕಾರುಗಳ ಬೆಲೆ ಮತ್ತು ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಕಾರಣ ಜನರು ತಮ್ಮ ಆಸೆಯನ್ನ ಮನದಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮಾರುಕಟ್ಟೆಗೆ ವಿಧವಿಧವಾದ ವಾಹನಗಳು ಬರುತ್ತಿದ್ದು ಇದು ಜನರ ಗಮನವನ್ನ ಸೆಳೆಯುತ್ತಿದೆ. ಇನ್ನು ಜನರು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಹೌದು ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಆದಕಾರಣ ಜನರು ಎಲೆಕ್ಟ್ರಿಕ್ ವಾಹನಗಳತ್ತ ಗಮನವನ್ನ ಹರಿಸುತ್ತಿದ್ದು ಎಲೆಕ್ಟ್ರಿಕ್ ವಾಹನಗಳು ತನ್ನ ಸಾಮ್ರಾಜ್ಯವನ್ನ ವಿಸ್ತರಣೆ ಮಾಡುತ್ತಿದೆ.
ಇನ್ನು ಈಗ ಕಾರ್ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್ ಬಂದಿದ್ದು ಮಾರುಕಟ್ಟೆಗೆ ಬೈಕ್ ಮತ್ತು ಆಟೋ ರಿಕ್ಷಾ ಹೋಲುವ ಅತೀ ಕಡಿಮೆಯ ಬೆಲೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬಂದಿದ್ದು ಜನರು ಈ ಕಾರನ್ನ ಖರೀದಿ ಮಾಡಲು ಮುಗಿಬಿದ್ದಿದ್ದಾರೆ ಎಂದು ಹೇಳಬಹುದು. ಹಾಗಾದರೆ ಈ ಕಾರ್ ಯಾವುದು ಮತ್ತು ಇದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಮಾರುಕಟ್ಟೆಗೆ ಸ್ಟ್ರಾಮ್ ಆರ್3 ಕಾರು ಬಿಡುಗಡೆಯಾಗಿದೆ. ಈ ಕಾರಿನ ಬೆಲೆ ಅತೀ ಕಡಿಮೆ ಆಗಿದ್ದು ನೀವು 10 ಸಾವಿರ ರೂಪಾಯಿಯನ್ನ ನೀಡಿ ಮುಂಚಿತ ಬುಕಿಂಗ್ ಮಾಡಬಹುದಾಗಿದೆ.
ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಈ ಕಾರು ಬಹಳ ಜನರ ಗಮನವನ್ನ ಸೆಳೆದಿದ್ದು ಈಗಾಗಲೇ 7500 ಕ್ಕೂ ಅಧಿಕ ಜನರು ಈ ಕಾರನ್ನ ಮುಂಚಿತ ಬುಕಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಂದು ಕಡೆಯಿಂದ ಈ ವಾಹನ ಕಾರಿನ ರೀತಿ ಕಂಡರೆ ಇನ್ನೊಂದು ಕಡೆಯಿಂದ ಆಟೋ ರಿಕ್ಷಾದ ರೀತಿ ಕಾಣುತ್ತದೆ. ಮುಂಬೈನ ಸ್ಟಾರ್ಟ್ ಅಪ್ ಕಂಪನಿಯೊಂದು ತಯಾರಿಸಿ ಮಾರುಕಟ್ಟೆ ಪ್ರವೇಶಿಸುವ ಹಂತದಲ್ಲಿರುವ ಇಲೆಕ್ಟ್ರಿಕ್ ಕಾರು. ಅದಕ್ಕೆ ಕಂಪನಿ ಇಟ್ಟಿರುವ ಹೆಸರು ಸ್ಟ್ರಾಮ್ ಆರ್3. ಇನ್ನು ಈ ಕಾರಿನ ವಿಶೇಷತೆ ಏನು ಅಂದರೆ ಅಂದರೆ, ಈ ಕಾರಿಗೆ ಎರಡು ಡೋರ್ ಮತ್ತು ಎರಡು ಸೀಟ್ ಇದೆ ಮತ್ತು ಕಾರಿಗೆ ಲೀಥಿಯಂ ಬ್ಯಾಟರಿ ಅಳವಡಿಸಲಾಗಿದೆ.
ಈ ಕಾರಿನ ಅತಿ ದೊಡ್ಡ ಪ್ಲಸ್ ಅಂದರೆ ಅದನ್ನು ರೋಡ್ ಮೇಲೆಯೇ ಚಾರ್ಜ್ ಮಾಡಬಹುದು ಮತ್ತು ಪ್ರತಿ ಚಾರ್ಜ್ ಗೆ ಈ ಕಾರು ಸುಮಾರು 200 ಕಿಲೋ ಮಿಟರ ಚಲಿಸುತ್ತದೆ ಎಂದು ಕಂಪನಿ ಹೇಳಿದೆ. ಇನ್ನು ವೇಗದ ವಿಷಯಕ್ಕೆ ಬರುವುದಾದರೆ ಈ ಕಾರು ಗರಿಷ್ಠವಾಗಿ 80 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಈ ಕಾರಿನ ಬೆಲೆ 4.50 ಲಕ್ಷ ರೂಪಾಯಿ ಆಗಿದೆ ಮತ್ತು ಈ ಕಾರಿಗೆ ಕಂಪನಿಯು ಮೂರು ವರ್ಷ ಅಥವಾ 1 ಲಕ್ಷ ಕಿಮೀ ವಾರಂಟಿಯನ್ನು ನೀಡುತ್ತದೆ. ಸ್ನೇಹಿತರೆ ನೀವು ಈ ಕಾರನ್ನ ಮುಂಚಿತವಾಗಿ ಬುಕಿಂಗ್ ಮಾಡಬಹುದಾಗಿದೆ.