Ads By Google

Subsidy Loans: ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್, ಈ ಯಂತ್ರಕ್ಕೆ ಸರ್ಕಾರದಿಂದ ಸಿಗಲಿದೆ 50 % ಸಬ್ಸಿಡಿ.

subsidy loan for chaff cutter machine

Image Credit: Original Source

Ads By Google

Subsidy Loan For Farmers: ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಅಭಿವೃದ್ದಿಗಾಗಿ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತಿದೆ. ದೇಶದ ರೈತರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ರೈತರ ಕೃಷಿಗೆ ಹೆಚ್ಚಿನ ಸೌಲಭವನ್ನು ಒದಗಿಸಿಕೊಡಲಾಗಿದೆ. ಇದೀಗ ಕೇಂದ್ರ ರೈತರಿಗೆ ಕೃಷಿ ಯಂತ್ರೋಪಕರಗಳ ಖರೀದಿಗೆ ಸಹಾಯವಾಗಲು ವಿಶೇಷ ಸೌಲಭ್ಯವನ್ನು ಒದಗಿಸಿದೆ. ಹೌದು ರೈತರಿಗೆ ಈ ಯಂತ್ರವನ್ನ ಖರೀದಿ ಮಾಡಲು ಅರ್ಧದಷ್ಟು ಸಬ್ಸಿಡಿ ನೀಡಲು ಈಗ ಸರ್ಕಾರ ಮುಂದಾಗಿದೆ.

Image Credit: Compareremit

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್
ರೈತರು ಕೃಷಿ ಮಾಡುವ ಸಮಯದಲ್ಲಿ ಮೊದಲೆಲ್ಲ ಜನರನ್ನು ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ರೈತರು ತಮ್ಮ ಕೃಷಿಗಾಗಿ ಯಂತ್ರೋಪಕರಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಜನರನ್ನು ಹಾಕಿಕೊಂಡು ಕೆಲಸ ಮಾಡುವುದಕ್ಕಿಂತ ಯಂತ್ರೋಪಕರಣಗಳಿಂದ ಕೆಲಸವನ್ನು ಮಾಡಿದರೆ, ಹಣವು ಉಳಿತಾಯ ಆಗುತ್ತದೆ ಹಾಗು ಸಮಯದ ಉಳಿತಾಯ ಕೂಡ ಆಗುತ್ತದೆ.

ಈ ಕಾರಣಕ್ಕೆ ರೈತರು ಯಂತ್ರೋಪಕರಣಗಳನು ಬಳಸುತ್ತಿದ್ದಾರೆ. ಸದ್ಯ ಕೇಂದ್ರ ಸರ್ಕಾರ ರೈತರಿಗೆ ಯಂತ್ರೋಪಕರಣಗಳನ್ನು ಖರೀದಿಸಲು ಒಂದೊಳ್ಳೆ ಅವಕಾಶವನ್ನು ನೀಡಲು ಮುಂದಾಗಿದೆ. ಹೌದು ಈ ಯಂತ್ರವನ್ನು ಖರೀದಿಸುವ ರೈತರಿಗೆ ಸರ್ಕಾರ ಸಬ್ಸಿಡಿ ನೀಡಲಿದೆ.

Image Credit: Original Source

ಈ ಯಂತ್ರಕ್ಕೆ ಸರ್ಕಾರದಿಂದ ಸಿಗಲಿದೆ 50 % ಸಬ್ಸಿಡಿ
ಇನ್ನು ದೇಶದಲ್ಲಿ ಸಾಕಷ್ಟು ಜನರು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ದೇಶದಲ್ಲಿ ಆದೇಶ ಗ್ರಾಮ ಪ್ರದೇಶದ ಜನರು ಹೈನುಗಾರಿಕೆ ಮಾಡುತ್ತಿದ್ದಾರೆ. ಇದೀಗ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಸಹಾಯ ಮಾಡಲು ಸರ್ಕಾರ ಮುಂದಾಗಿದೆ.

ದನ ಕರುಗಳಿಗೆ ಮೇವು ಹಾಕಲು ಅಗತ್ಯವಿರುವ “ಮೇವು ಕತ್ತರಿಸುವ ಯಂತ್ರ” ಖರೀದಿಗೆ ಸಬ್ಸಿಡಿ ಹಣವನ್ನು ನೀಡಲು ಸರ್ಕಾರ ಮುಂದಾಗಿದೆ. ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ 2023 -24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ರೈತರಿಗೆ ವೇವು ಕತ್ತರಿಸುವ ಯಂತ್ರವನ್ನು ವಿತರಣೆ ಮಾಡಲಾಗುತ್ತಿತ್ತು, ಇದ್ಕಕೆ 50 % ಸಬ್ಸಿಡಿಯನ್ನು ನೀಡಲು ಮುಂದಾಗಿದೆ. ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಯಂತ್ರೋಪಕರಣದ ಖರೀದಿಗೆ ಸಬ್ಸಿಡಿ ಸಾಲವನ್ನು ಪಡೆದುಕೊಳ್ಳಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in