Vehicle Subsidy: ವಾಹನ ಖರೀದಿಸುವವರಿಗೆ ಸಿಗಲಿದೆ 3 ಲಕ್ಷ ರೂ ಸಬ್ಸಿಡಿ, ಸಿದ್ದರಾಮಯ್ಯ ಇನ್ನೊಂದು ಘೋಷಣೆ.
ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯದವರಿಗೆ ವಾಹನ ಖರೀದಿಗೆ Subsidy ನೀಡುವ ಬಗ್ಗೆ ಘೋಷಣೆ ಹೊರಡಿಸಲಾಗಿದೆ.
Vehicle Subsidy: ಕರ್ನಾಟಕ ಸರ್ಕಾರ ಇತ್ತೀಚಿಗೆ ಜನರಿಗಾಗಿ ಸಾಕಷ್ಟು ಸೌಲಭ್ಯವನ್ನು ನೀಡುತ್ತಿದೆ. ಇನ್ನು ಆರ್ಥಿವಾಗಿ ಅಸಮರ್ಥರಾಗಿರುವವರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ (Congreaa Govt) ಧನ ಸಹಾಯ ಮಾಡುತ್ತಿದೆ. ಅಲ್ಪ ಸಂಖ್ಯಾತರ ಅಭಿವೃದ್ದಿಗಾಗಿ ಸರ್ಕಾರ ವಿವಿಧ ಸೌಕರ್ಯವನ್ನು ನೀಡುತ್ತಿದೆ.
ಇದೀಗ ರಾಜ್ಯದ ಮುಖ್ಯಮಂತ್ರಿ Siddaramaiah ಅವರು ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯದವರಿಗೆ ಸಿಹಿಸುದ್ದಿ ನೀಡಿದ್ದಾರೆ ಎಂದು ಹೇಳಬಹುದು. ಅಲ್ಪ ಸಂಖ್ಯಾತರ ಕನಸಿಗೆ ಬೆಂಗಾವಲಾಗಿ ನಿಲ್ಲಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯದವರಿಗೆ ಸಿಹಿ ಸುದ್ದಿ
ಸಾಮಾನ್ಯವಾಗಿ ಎಲ್ಲರು ಸ್ವಂತ ವಾಹನ ಖರೀದಿಯ ಬಗ್ಗೆ ಯೋಚಿಸುತ್ತಾರೆ. ಆದರೆ ಯಾವುದೇ ವಾಹನವನ್ನು ಖರೀದಿಸಬೇಕೆಂದರು ದೊಡ್ಡ ಮೊತ್ತದ ಹಣದ ಅವಶ್ಯಕತೆ ಇರುತ್ತದೆ. ಮೂರು ನಾಲ್ಕು ಚಕ್ರದ ವಾಹನ ಖರೀದಿ ಬಡ ಜನರಿಗೆ ಕಷ್ಟವಾಗುತ್ತದೆ. ಇದೀಗ ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯದವರಿಗೆ ಸಿಹಿ ಸುದ್ದಿ ನೀಡಿದೆ. ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯದವರಿಗೆ ವಾಹನ ಖರೀದಿಗೆ Subsidy ನೀಡುವ ಬಗ್ಗೆ ಘೋಷಣೆ ಹೊರಡಿಸಲಾಗಿದೆ.
ವಾಹನ ಖರೀದಿಗೆ ಸಿಗಲಿದೆ 3 ಲಕ್ಷ ಸಬ್ಸಿಡಿ
ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯದವರಿಗೆ ವಾಹನ ಖರೀದಿಗೆ 3 ಲಕ್ಷ ರೂ.ಸಬ್ಸಿಡಿ ನೀಡುವುದಾಗಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದ ಸದಸ್ಯರು ತಮ್ಮ ಆಯ್ಕೆಯ ಆಟೋ ರಿಕ್ಷಾ, ಟ್ಯಾಕ್ಸಿ, ಅಥವಾ ಮೂರು -ನಾಲ್ಕು ಚಕ್ರದ ಗೂಡ್ಸ್ ವಾಹನವನ್ನು ಖರೀದಿಸಿದಾಗ ಆ ವಾಹನ ಮೊತ್ತದ ಶೇ. 50 ರಷ್ಟು ಸಬ್ಸಿಡಿಅಥವಾ 3 ಲಕ್ಷ ರೂ. ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ. ಸಬ್ಸಿಡಿ ಜೊತೆಗೆ ಉಳಿತಾಯ ಮೊತ್ತಕ್ಕೆ ಸರ್ಕಾರವು ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆಯಲು ಅವರಿಗೆ ಸಹಾಯ ಮಾಡಲಿದೆ.
ರಾಜ್ಯ ಸರ್ಕಾರದ ಈ ಸಬ್ಸಿಡಿ ಪಡೆಯಲು ಅರ್ಹತೆಗಳೇನು
*ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯದ ಸದಸ್ಯರು ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
*ಅರ್ಜಿದಾರರ ವಯಸ್ಸು 18 ರಿಂದ 55 ವರ್ಷವಾಗಿರಬೇಕು.
*ಅರ್ಜಿದಾರರ ವಾರ್ಷಿಕ ಆದಾಯವು 4 .5 ಲಕ್ಷಕ್ಕಿಂತ ಕಡಿಮೆ ಇರಬೇಕು.
*ಇನ್ನು ಅರ್ಜಿದಾರರ ಕುಟುಂಬದಲ್ಲಿ ಯಾವುದೇ ಸದಸ್ಯರು ಕೂಡ ಸರ್ಕಾರೀ ನೌಕರರಾಗಿರಬಾರದು.