Sudeep Campaigning: ಬೊಮ್ಮಾಯಿ ಮಾವನನ್ನು ಮೊತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡ ಕಿಚ್ಚ ಸುದೀಪ್.

ಕಿಚ್ಚ ಸುದೀಪ್ ಜನರಿಗೆ ಒಳ್ಳೇದು ಆಗಬೇಕಾದರೆ ಮತ್ತೊಮ್ಮೆ ನೀವು ಅವರನ್ನು ಗೆಲ್ಲಿಸಬೇಕು ಕುರಿತು ಸ್ಪಷ್ಟನೆ ನೀಡಿದ್ದರು

Kiccha Sudeep: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದೆ. ಮೇ 10 ರಂದು ಚುನಾವಣಾ ದಿನಾಂಕ ಕೂಡ ನಿಗದಿಯಾಗಿದೆ. ರಾಜಕೀಯ ಮುಖಂಡರು ತಮ್ಮ ತಮ್ಮ ರಾಜಕೀಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರಾದ ಕಿಚ್ಚ ಸುದೀಪ್ (Kiccha Sudeep) ತೊಡಗಿದ್ದಾರೆ. ಇದೀಗ ಪ್ರಚಾರ ಮಾಡುವಾಗ ನಟ ಸುದೀಪ್ ಅವರು ಬಿಜೆಪಿ ಪರ ಮತ ನೀಡುವಂತೆ ಮನವಿ ಮಾಡಿದ್ದಾರೆ.

Sudeep Campaigning
Image Source: Public Tv

ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ಕಿಚ್ಚ ಬ್ಯುಸಿ
ಈ ಹಿಂದೆ ನಟ ಸುದೀಪ್ ಅವರ ರಾಜಕೀಯ ಪ್ರವೇಶದ ಸುದ್ದಿಗಳು ಸಾಕಷ್ಟು ಹರಡಿದ್ದವು. ಹಾಗೆಯೆ ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ರಾಜಕೀಯ ಪ್ರವೇಶದ ಕುರಿತು ಸ್ಪಷ್ಟನೆ ನೀಡಿದ್ದರು. ನಾನು ವ್ಯಕ್ತಿಯ ಪರವಾಗಿ ಪ್ರಚಾರ ಮಾಡುತ್ತೇನೆ ಬದಲಾಗಿ ಪಕ್ಷದ ಪರವಾಗಿ ಅಲ್ಲ. ಬೊಮ್ಮಾಯಿ ಮಾವ ಯಾರ ಪರ ಪ್ರಚಾರ ಮಾಡು ಎನ್ನುತ್ತಾರೋ ಅವರ ಪರ ಪ್ರಚಾರದಲ್ಲಿ ತೊಡಗುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇನ್ನು ಇಂದು ನಟ ಕಿಚ್ಚ ಸುದೀಪ್ ಮತಯಾತ್ರೆಗೆ ಹೊರಟಿದ್ದಾರೆ. ಈ ವೇಳೆ ನಟ ಬಿಜೆಪಿ ಪರ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

Sudeep Campaigning
Image Source:m Public Tv

ಬೊಮ್ಮಾಯಿ ಮಾವನನ್ನು ಮೊತ್ತೊಮ್ಮೆ ಗೆಲ್ಲಿಸಿ ಎಂದ ಕಿಚ್ಚ
ಬಿಜೆಪಿ ಸಮಾವೇಶದಲ್ಲಿ ಕಿಚ್ಚ ಸುದೀಪ್ ಬೊಮ್ಮಾಯಿ ಅವರ ಪರ ಮಾತನಾಡಿದ್ದಾರೆ. ಇಷ್ಟು ಜನ ಸೇರಿದ್ದೀರಿ ಎಂದರೆ ಅವರು ಮಾಡಿದ ಕೆಲಸ ಗೊತ್ತಾಗುತ್ತದೆ. ಅವರ ಪರವಾಗಿ ನಾನು ಬಂದಿದ್ದೇನೆ. ಜನರಿಗೆ ಒಳ್ಳೇದು ಆಗಬೇಕಾದರೆ ಮತ್ತೊಮ್ಮೆ ನೀವು ಅವರನ್ನು ಗೆಲ್ಲಿಸಬೇಕು. ಮೊದಲ ಬಾರಿಗೆ ನಾನು ಈ ಊರಿಗೆ ಬಂದಿದ್ದೇನೆ. ಬಹಳ ಸುಂದರವಾಗಿ ನನ್ನನ್ನು ಸ್ವಾಗ ಮಾಡಿದ್ದೀರಿ. ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ. ಅಭಿವೃದ್ದಿಗಾಗಿ ಮತ್ತೆ ಬೊಮ್ಮಾಯಿ ಅವರಿಗೆ ಅವಕಾಶವನ್ನು ನೀಡಿ.

Sudeep Campaigning
Image Source: Times Of India

ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ ಎಂದ ಸುದೀಪ್
ನಿಮ್ಮ ಬೆಂಬಲ ಇದ್ದರೆ ಕೆಲಸ ಆಗುತ್ತದೆ. ನಾನು ಕೆಲಸ ಆಗುವವರ ಪರ ಇರುತ್ತೇನೆ. ನಾನು ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ. ವಿದೇಶದಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ನಾನು ಸುಮ್ಮನೆ ಪ್ರಚಾರಕ್ಕೆ ಇಳಿಯಲಿಲ್ಲ. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ. ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಸುದೀಪ್ ಮನವಿ ಮಾಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group