Sugar Price: ರಾಜ್ಯದ ಜನತೆಗೆ ಬೇಸರದ ಸುದ್ದಿ, ಸಕ್ಕರೆ ಬೆಲೆಯಲ್ಲಿ ಏರಿಕೆ.

ಹೆಚ್ಚು ಸಕ್ಕರೆ ಬಳಸುವ ಜನರಿಗೆ ಬೇಸರದ ಸುದ್ದಿ ಬಂದಿದೆ, ಸಕ್ಕರೆ ಬೆಲೆಯಲ್ಲಿ ಏರಿಕೆ ಆಗಿದೆ.

Sugar Price Increase: ಇದೀಗ ರಾಜ್ಯದ ಜನತೆಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಈಗಾಗಲೇ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ವಿದ್ಯುತ್ ದರದ ಏರಿಕೆ ಜೊತೆಗೆ ದಿನನಿತ್ಯದ ಬಳಕೆಯ ವಸ್ತು ಸಕ್ಕರೆ ಬೆಲೆ (Sugar Price) ಸಹ ಏರಿಕೆ ಕಾಣುತ್ತಿದೆ. ಜನರು ಹೊಸ ಸರ್ಕಾರದ ನಿರೀಕ್ಷೆಯಲ್ಲಿ ಇದ್ದಾರೆ.

ರಾಜ್ಯದಲ್ಲಿ ಪ್ರತಿ ತಿಂಗಳು ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ. ಇದೀಗ ರಾಜ್ಯದ ಜನತೆ ಮತದಾನ ಮಾಡಿ ಹೊಸ ಸರ್ಕಾರದ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಮತ್ತೆ ಜನತೆಗೆ ವಸ್ತುಗಳ ಬೆಲೆ ಏರಿಕೆಯಿಂದ ಬೇಸರ ಉಂಟಾಗಿದೆ ಎನ್ನಬಹುದು.

Sugar Price Increase
Image Source: India Today

ಸಕ್ಕರೆ ಬೆಲೆಯಲ್ಲಿ ಏರಿಕೆ
ಸಕ್ಕರೆ ಉತ್ಪಾದನೆ ಪ್ರಮಾಣ ಕುಸಿಯುವ ಸಾಧ್ಯತೆ ಇರುವುದರಿಂದ ಸಕ್ಕರೆ ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಶದಲ್ಲಿ ಸಕ್ಕರೆ ಉತ್ಪಾದನೆ ಪ್ರಮಾಣ ಕುಸಿತವಾಗುವ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಸಕ್ಕರೆ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ರಾಷ್ಟ್ರೀಯ ಸಕ್ಕರೆ ಉತ್ಪಾದಕರ ಸಹಕಾರ ಒಕ್ಕೂಟ 2022- 23 ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯ ಅಂದಾಜನ್ನು 32.7 ದಶಲಕ್ಷ ಟನ್ ಗಳಷ್ಟು ಇಳಿಸಿದೆ. ಈ ಮೊದಲು 35.5 ದಶಲಕ್ಷ ಟನ್ ಗಳಷ್ಟು ಉತ್ಪಾದನೆಯನ್ನು ಅಂದಾಜಿಸಲಾಗಿತ್ತು. 2021 ರಿಂದ 2022 ಕ್ಕೆ ಹೋಲಿಸಿದರೆ ಸಕ್ಕರೆ ಉತ್ಪಾದನೆ ಶೇಕಡಾ 9 ರಷ್ಟು ಕಡಿಮೆ ಆಗಿದೆ.

Sugar Price Increase
Image Source: India Today

Join Nadunudi News WhatsApp Group

Join Nadunudi News WhatsApp Group