Sugar Price: ಉಚಿತ ಅಕ್ಕಿ ಬೆನ್ನಲ್ಲೇ ಬಂತು ಇನ್ನೊಂದು ಬೇಸರದ ಸುದ್ದಿ, ಸಕ್ಕರೆ ಬೆಲೆಯಲ್ಲಿ ದಾಖಲೆಯ ಏರಿಕೆ.

ಸಕ್ಕರೆಯ ಬೆಲೆಯಲ್ಲಿ ದಾಖಲೆಯ ಏರಿಕೆ ಆಗಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ.

Sugar Price Hike In Karnataka: ಇತ್ತೀಚಿನದಿನಗಳಲ್ಲಿ ಬೆಲೆ ಏರಿಕೆಯ ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ. ಪ್ರತಿ ನಿತ್ಯ ಒಂದಲ್ಲ ಒಂದು ವಸ್ತುವಿನ ಬೆಲೆ ಏರಿಕೆ ಕಾಣುತ್ತಿದೆ. ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಹೆಚ್ಚಾಗುತ್ತಿದೆ. ನಿತ್ಯ ಜೀವನದಲ್ಲಿ ಬಳಸಲಾಗುವ ಆಹಾರ ಪದಾರ್ಥದ ಬೆಲೆ ಹೆಚ್ಚಿಸಿದರೆ ಜನರು ಹೆಚ್ಚಿನ ಹಣ ಖರೀದಿಸಲೇ ಬೇಕು. ಹಣ ಹೆಚ್ಚಾಗಿದೆ ಎಂದು ಅದನ್ನು ಖರೀದಿಸದಿದ್ದರೆ ಕಷ್ಟವಾಗುತ್ತದೆ.

ಇನ್ನು ಹಾಲು, ಮೊಸಲು, ತರಕಾರಿ, ಗ್ಯಾಸ್ ಬೆಲೆ ಸೇರಿದಂತೆ ಹೆಚ್ಚು ಆಹಾರ ದಾನ್ಯಗಳ ಬೆಲೆಕೊಡ ಹೆಚ್ಚಾಗುತ್ತಿದೆ. ಇನ್ನು ನಿತ್ಯ ಬಳಕೆಯ ತರಕಾರಿಯಾದ ಟೊಮೊಟೊ ದರ ಕಳೆದ ಮೂರು ತಿಂಗಳಿಂದಾ ಗನಕ್ಕೇರಿದೆ. ಕಳೆದ ತಿಂಗಳು ದಾಖಲೆಯ ಎರಿಕಾ ಆಗಿದ್ದ ಟೊಮೇಟೊ ಬೆಲೆ ಈಗ ಕಡಿಮೆ ಆಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಬಹುದು. ಟೊಮೊಟೊ ದರ ಹೆಚ್ಚಾದ ಬೆನ್ನಲ್ಲೇ ಈರುಳ್ಳಿ, ಸೊಪ್ಪುಗಳ ಬೆಲೆ ಕೂಡ ಒಂದೊಂದೇ ಏರಿಕೆ ಕಾಣುತ್ತಿದೆ.

sugar price hike
Image Credit: kannadanews

ಜನಸಾಮಾನ್ಯರಿಗೆ ಬೇಸರದ ಸುದ್ದಿ
ಈಗಾಗಲೇ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಾಗುತ್ತಿದೆ. ವಸ್ತುವಿನ ಬೆಲೆ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಪದೇ ಪದೇ ಬೇಸರವಾಗುತ್ತಿದೆ. ಈಗಾಗಲೇ ನಿತ್ಯ ಬಳಕೆಯ ಆಹಾರ ದಾನ್ಯಗಳ ಬೆಲೆ ಕೂಡ ಏರಿಕೆಯಾಗಿದೆ. ಇತ್ತೀಚಿನ ಹಣದುಬ್ಬರತೆ ಜನರ ಆರ್ಥಿಕ ಪರಿಸ್ಥಿಯ (People Economy) ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದರೆ ತಪ್ಪಾಗಲಾರದು.

ಬೇಳೆಕಾಳುಗಳ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಕೂಡ ಏರಿಕೆಯಾಗಿದೆ. ಅಕಾಲಿಕ ಮಳೆಯೂ ಬೆಳೆಗಳ ಮೇಲೆ ಹೆಚ್ಚಿನ ಅಡ್ಡ ಪರಿಣಾಮವನ್ನು ಬೀರುತ್ತಿದೆ. ಈ ಬಾರಿ ಮಳೆಯ ಕೊರತೆಯಿಂದಾಗಿ ಸಾಕಷ್ಟು ನಷ್ಟ ಎದುರಾಗುತ್ತಿದೆ. ಬೆಲೆ ಏರಿಕೆಯ ಪರಿಸ್ಥಿಗೆ ಮಳೆಯ ಅಭಾವ ಮುಖ್ಯ ಕಾರಣವಾಗಿದೆ. ಇನ್ನು ಈಗಾಗಲೇ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿರುವ ಜನತೆಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.

Sugar Price Hike latest
Image Credit: Zeebiz

ಸಕ್ಕರೆ ಬೆಲೆಯಲ್ಲಿ ದಿಢೀರ್ ಏರಿಕೆ
ಇನ್ನು ದೇಶದಲ್ಲಿ ಸಕ್ಕರೆ ದರ ಶೇ. 3 ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಸಕ್ಕರೆ ಬೆಲೆ ಕೂಡ ಏರಿಕೆಯಾಗಿ ಜನರ ಜೇಬಿಗೆ ಇನ್ನಷ್ಟು ಹೊರೆಯಾಗಿದೆ. ಮಳೆಯ ಕೊರತೆಯಿಂದಾಗಿ ಕಬ್ಬು ಬೆಳೆಗಾರರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಸರಿಯಾದ ಪ್ರಮಾಣದಲ್ಲಿ ಕಬ್ಬು ಪೂರೈಕೆ ಆಗದಿರುವ ಕಾರಣ ಸಕ್ಕರೆ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಸದ್ಯ ದೇಶದಲ್ಲಿ ಪ್ರತಿ ಮೆಟ್ರಿಕ್ ಟನ್ ಸಕ್ಕರೆಯ ದರವು 37,760 ರೂ. ಗೆ ತಲುಪಿದೆ. ಮುಂದಿನ ದಿನಗಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾದರೆ ಮತ್ತೆ ಸಕ್ಕರೆ ದರ ಹೆಚ್ಚಾಗುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group