Future Scheme: 12,000 ರೂ ಹೂಡಿಕೆ ಮಾಡಿದರೆ ನಿಮಗೆ ಸಿಗಲಿದೆ 70 ಲಕ್ಷ ರೂ, ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರದ ಯೋಜನೆ.
ಈ ಯೋಜನೆಯಲ್ಲಿ 12000 ಹೂಡಿಕೆ ಮಾಡುವ ಮೂಲಕ ಪಡೆಯಿರಿ 70 ಲಕ್ಷ ಲಾಭ.
SSY Investment Plan 2023: ಇನ್ನು ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆ ಇರುತ್ತದೆ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವುದು ಪೋಷಕರ ಕರ್ತವ್ಯವಾಗಿರುತ್ತದೆ. ಇನ್ನು ಹೆಣ್ಣು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಜವಾಬ್ದಾರಿಗಳು ಹೆಚ್ಚಿರುತ್ತದೆ. ಹೆಣ್ಣು ಮಗಳ ವಿದ್ಯಾಭ್ಯಾಸ ಮದುವೆ ಇವೆಲ್ಲದರ ಬಗ್ಗೆ ತಂದೆ ತಾಯಿಗೆ ಹೆಚ್ಚಿನ ಚಿಂತೆ ಇರುತ್ತದೆ.
ಕೇಂದ್ರ ಸರ್ಕಾರ ಮಹಿಳೆಯರ ಅನುಕೂಲಕ್ಕಾಗಿ ಈಗಾಗಲೇ ಸಾಕಷ್ಟು ಯೋಜನೆಯನ್ನು ರೂಪಿಸಿದ್ದು ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಲು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆಯ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.
ಕೇಂದ್ರ ಸರ್ಕಾರ ನಿಮಗಾಗಿ ಪರಿಚಯಿಸಿದೆ ತೆರಿಗೆ ಮುಕ್ತ ಹೂಡಿಕೆಯ ಯೋಜನೆ
ಕೇಂದ್ರ ಮೋದಿ ಸರ್ಕಾರವು Sukanya Samriddhi ಯೋಜನೆ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆಗೆ ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆ ಮೂಲಕ ನೀವು ಕಡಿಮೆ ಹೂಡಿಕೆಯಲ್ಲಿ ನಿಮ್ಮ ಮಗಳ ಶಿಕ್ಷಣ ಅಥವಾ ಮದುವೆಗಾಗಿ 70 ಲಕ್ಷ ಹಣವನ್ನು ಪಡೆಯಬಹುದು. ಈ ಯೋಜನೆಯು ಹೆಚ್ಚಿನ ಸುರಕ್ಷತೆಯನ್ನು ಹೊಂದಿದ್ದು ಬಡ ಕುಟುಂಬಗಳಿಗೆ ಇದು ಉತ್ತಮ ಹೂಡಿಕೆಯ ಯೋಜನೆಯಾಗಿದೆ.
ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಗು ಜನಸಿದ ತಕ್ಷಣವೇ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹದು. ಈ ಯೋಜನೆಯಲ್ಲಿ ಗಳಿಸಿದ ಆದಾಯವು 100 % ತೆರಿಗೆ ಮುಕ್ತವಾಗಿರುವುದು ವಿಶೇಷವಾಗಿದೆ.
12000 ರೂ ಹೂಡಿಕೆ ಮಾಡಿದರೆ ನಿಮಗೆ ಸಿಗಲಿದೆ 70 ಲಕ್ಷ ರೂ
ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಮೋದಿ ಸರ್ಕಾರ ನಡೆಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 12,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಮೊತ್ತವು ವರ್ಷದಲ್ಲಿ 1.5 ಲಕ್ಷ ಆಗುತ್ತದೆ. 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ 47.3 ಲಕ್ಷ ಬಡ್ಡಿಯನ್ನು ಪಡೆಯಬಹುದು ಮತ್ತು ಮಗಳ ವಯಸ್ಸು 21 ವರ್ಷವಾದಾಗ, ಮೆಚ್ಯೂರಿಟಿ ಆದ ಮೇಲೆ ಒಟ್ಟು 69.70 ಲಕ್ಷ ರೂ. ಲಾಭವನ್ನು ಪಡೆಯಬಹುದು. SSY ಯೋಜನೆಯಲ್ಲಿ ಒಟ್ಟು 15 ವರ್ಷಗಳ ಹೂಡಿಕೆಯಲ್ಲಿ ನೀವು 70 ಲಕ್ಷ ಲಾಭವನ್ನು ಪಡೆಯಲು ಸಹಾಯವಾಗುತ್ತದೆ.