Sukanya Samriddhi: ಪೋಷಕರೇ ಈಗ ಹೆಣ್ಣು ಮಗುವಿನ ಶಿಕ್ಷಣದ ಚಿಂತೆ ಬೇಡ, ಸರ್ಕಾರವೇ ಶಿಕ್ಷಣಕ್ಕೆ ಹಣ ನೀಡಲಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಗಳ ವಿದ್ಯಾಭ್ಯಾಸದ ಹಣವನ್ನ ಭರಿಸಿಕೊಳ್ಳಬಹುದು.

Sukanya Samriddhi Yojana For Girls: ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿ ಯಾವುದೇ ರೀತಿ ಆರ್ಥಿಕ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹೆಣ್ಣು ಮಕ್ಕಳಿಗಾಗಿ ವಿವಿಧ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಇದೀಗ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲು ಸರ್ಕಾರ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Sukanya Samriddhi Yojana For Girls
Image Credit: timesofindia

ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) 
ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹಾಗೂ ಶಿಕ್ಷಣಕ್ಕೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪರಿಚಯಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು.

10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಗುವಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆಯ ಮೇಲೆ ಶೇ. 8 ರಷ್ಟು ಬಡ್ಡಿ ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ ಹೂಡಿಕೆ ಲಾಭದಾಯಕ
ಸುಮಾರು 15 ವರ್ಷಗಳ ವರೆಗೆ ಮಾತ್ರ ಮಗಳ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 250 ರೂ. ಗರಿಷ್ಠ ಹೂಡಿಕೆಯ ಮೊತ್ತ 1.50 ಲಕ್ಷ. ಯೋಜನೆಯ ಅವಧಿಯ ಮುಕ್ತಾಯದ ನಂತರ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದಾಗಿದೆ. ವರ್ಷದಲ್ಲಿ 1.50 ಲಕ್ಷವನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 22,5000 ರೂ. ಗಳು ಬರುತ್ತವೆ. ಇನ್ನು 7.6 ಬಡ್ಡಿದರದ ಪ್ರಕಾರ 43,43,071 ರೂಗಳನ್ನು ಬಡ್ಡಿಯಾಗಿ ಪಡೆಯಬಹುದು.

Join Nadunudi News WhatsApp Group

Sukanya Samriddhi Yojana for girl child education
Image Credit: indiafilings

ಈ ಯೋಜನೆಯ ಹೂಡಿಕೆಯಲ್ಲಿ ಸಿಗಲಿದೆ 66 ಲಕ್ಷ
ಇನ್ನು ಮೆಚ್ಯುರಿಟಿ ಅವಧಿಯ ನಂತರ ಅರ್ಜಿದಾದರೂ 65,93,071 ರೂ. ಗಳ ಲಾಭವನ್ನು ಪಡೆಯಬಹುದು. ಎಸ್ ಬಿ ಐ ಬ್ಯಾಂಕ್ ನಲ್ಲಿ ನಿಮ್ಮ ಮಗಳ ಖಾತೆಯನ್ನು ತೆರೆಯಬೇಕು. ಎಸ್ ಬಿ ಐ ಮೊತ್ತವನ್ನು ನೀಡಲಿದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಕೂಡ ಹೆಚ್ಚಿಸಿದೆ.

ಇನ್ನು ನಿಮ್ಮ ಮನೆಯಲ್ಲಿ ಎರಡು ಮಕ್ಕಳಿದ್ದರೆ ಜಂಟಿ ಖಾತೆಯನ್ನು ತೆರೆಯಬಹುದು. ಮೊದಲು ಈ ಯೋಜನೆಯಲ್ಲಿ ಶೇ. 7.6 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿತ್ತು, ಆದರೆ ಈಗ ಶೇ. 8 ಕ್ಕೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ.

Join Nadunudi News WhatsApp Group