SSY Update: ಮಗಳ ಮದುವೆಯ ಚಿಂತೆ ಬಿಟ್ಟುಬಿಡಿ, ಕೇಂದ್ರದಿಂದ ಮಗಳ ಮದುವೆಗೆ ಸಿಗಲಿದೆ 27 ಲಕ್ಷ ರೂಪಾಯಿ.
ಕೇಂದ್ರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಗಳ ಮದುವೆಗೆ ಹಣದ ಕೊರತೆ ಇರಲ್ಲ.
Sukanya Samriddhi Yojana Metuirty Benefits: ಕೇಂದ್ರದ ಮೋದಿ ಸರ್ಕಾರ ದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಹೆಣ್ಣು ಮಕ್ಕಳ ಪೋಷಕರ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿವಿಧ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ.
ಸಾಮಾನ್ಯವಾಗಿ ತಂದೆ ತಾಯಿಗೆ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಜೀವನವನ್ನು ನೀಡಬೇಕು ಎನ್ನುವುದು ಪೋಷಕರ ಕನಸಾಗಿರುತ್ತದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಣದ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಹೆಣ್ಣು ಮಗುವಿಗಾಗಿ ಸರ್ಕಾರ ಉತ್ತಮ ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ.
Sukanya Samriddhi Yojana
ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಲ್ಲಿ Sukanya Samriddhi Yojana ಕೂಡ ಒಂದಾಗಿದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಪೋಷಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ನಿಮ್ಮ ಮನೆಯ ಹೆಣ್ಣು ಮಗಳ ವಿದ್ಯಾಭ್ಯಾಸ, ಮದುವೆಗೆ ಸಹಾಯವಾಗಲು ಈ SSY ಯೋಜನೆ ಸಹಾಯವಾಗಲಿದೆ. SSY ಯೋಜನೆಯು ಹೂಡಿಕೆಯ ವಿವರ ತಿಳಿಯೋಣ.
ಕೇಂದ್ರದಿಂದ ಮಗಳ ಮದುವೆಗೆ ಪಡೆದುಕೊಳ್ಳಿ 27 ಲಕ್ಶಗ ರೂ ಉಚಿತ
ಈ Sukanya Samriddhi Yojana ಕೇಂದ್ರ ಮೋದಿ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆಗೆ ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆ ಮೂಲಕ ನೀವು ಕಡಿಮೆ ಹೂಡಿಕೆಯಲ್ಲಿ ನಿಮ್ಮ ಮಗಳ ಶಿಕ್ಷಣ ಅಥವಾ ಮದುವೆಗಾಗಿ 27 ಲಕ್ಷ ಹಣವನ್ನು ಪಡೆಯಬಹುದು. ಈ ಯೋಜನೆಯು ಹೆಚ್ಚಿನ ಸುರಕ್ಷತೆಯನ್ನು ಹೊಂದಿದ್ದು ಬಡ ಕುಟುಂಬಗಳಿಗೆ ಇದು ಉತ್ತಮ ಹೂಡಿಕೆಯ ಯೋಜನೆಯಾಗಿದೆ.
ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷ ಮೀರಿರಬಾರದು . 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಗು ಜನಸಿದ ತಕ್ಷಣವೇ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹದು. ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.
27 ಲಕ್ಷ ಪಡೆಯಲು ಯಾವ ರೀತಿ ಹೂಡಿಕೆ ಅಗತ್ಯ..?
ಮೋದಿ ಸರ್ಕಾರ ನಡೆಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 5,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಈ ಮೊತ್ತವು ವಾರ್ಷಿಕವಾಗಿ 60,000 ರೂ. ಆಗುತ್ತದೆ. ಇದರಲ್ಲಿ 15 ವರ್ಷಗಳಲ್ಲಿ ಸುಮಾರು 9 ಲಕ್ಷ ರೂ. ಹೂಡಿಕೆ ಮಾಡಿದರೆ ರೂ. 17,93,814 ಬಡ್ಡಿಯನ್ನು ನೀಡಲಾಗುತ್ತದೆ. ಹಾಗೆಯೆ 6 ವರ್ಷಗಳ ನಂತರ ಅಂದರೆ 21 ನೇ ವಯಸ್ಸಿನಲ್ಲಿ ಒಟ್ಟು ನೀವು ರೂ. 26,93,814 ಲಾಭವನ್ನು ಪಡೆಯಬಹುದು. ಇದರಲ್ಲಿ ಪ್ರಮುಖವಾದ ವಿಷಯವೆಂದರೆ ನೀವು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.