Ads By Google

Sukanya Samriddhi: ಮಗಳ ಹೆಸರಿನಲ್ಲಿ ಈ ಯೋಜನೆ ತೆರೆದರೆ ಮಗಳಿಗೆ ಸಿಗಲಿದೆ 42 .48 ಲಕ್ಷ ರೂಪಾಯಿ, ಕೇಂದ್ರ ಸರ್ಕಾರದ ಯೋಜನೆ.

If you open a Sukanya samriddhi account in your daughter's name at the post office and invest 1.5 lakh rupees per year, you can get a huge profit after 15 years.
Ads By Google

Sukanya Samriddhi Yojana Details: ಮೋದಿ ಸರ್ಕಾರವು ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರವು ಸಾಕಷ್ಟು ಸಣ್ಣ ಉಳಿತಾಯ ಯೋಜನಗಳನ್ನು ಬಿಡುಗಡೆ ಮಾಡಿದೆ.

ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ (Sukanya Samriddhi Yojana) ಬಡ್ಡಿ ದರವನ್ನ ಹೆಚ್ಚಿಸುವಂತೆ ಸರ್ಕಾರ ಘೋಷಿಸಿದೆ.

Image Credit: foreignaffairs

ಸುಕನ್ಯಾ ಸಮೃದ್ಧಿ ಯೋಜನೆ
ಇನ್ನು 2023 -24 ರ ಹಣಕಾಸು ವರ್ಷ ಏಪ್ರಿಲ್ 1 ರಿಂದ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಹಣಕಾಸಿನ ವಹಿವಾಟುಗಳಲ್ಲಿ ಹೆಚ್ಚಿನ ಬದಲಾವಣೆ ಆಗಲಿದೆ. ಈ ವರ್ಷದ ಮೊದಲ ತ್ರೈಮಾಸಿಕ ಯೋಜನೆಗಳ ಬಡ್ಡಿ ದರಗಳನ್ನು ಪ್ರಕಟಿಸಲಾಗಿದೆ. ಹೊಸ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಕೇಂದ್ರ ಸರಕಾರ ಹೆಚ್ಚಿಸಿದೆ.

Image Credit: godigit

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಹೆಚ್ಚಳ
ಸುಕನ್ಯಾ ಸಮೃದ್ಧಿ ಯೋಜನೆಯು ನಿಮಗೆ ಕಡಿಮೆ ಹೂಡಿಕೆಯಲ್ಲಿ ದೊಡ್ಡ ಮಟ್ಟಿನ ಲಾಭವನ್ನು ತಂದು ಕೊಡುತ್ತದೆ. ಮೋದಿ ಸರ್ಕಾರವು ತನ್ನ ಮೊದಲ ವಾದಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿತ್ತು. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವು ಶೇ. 7 .60 ರಿಂದ 8 ಕ್ಕೆ ಹೆಚ್ಚಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳು
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು 10 ವರ್ಷದ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಈ ಖಾತೆಯ ಮೂಲಕ ನಿಮ್ಮ ಮಗಳಿಗೆ 40 ಲಕ್ಷಕ್ಕೂ ಹೆಚ್ಚಿನ ಹಣವನ್ನು ಪಡೆಯಬಹುದು.

Image Credit: ndtv

ಸುಕನ್ಯಾ ಸಮೃದ್ಧಿ ಯೋಜನೆಯ ಮುಕ್ತಾಯವು 15 ವರ್ಷಗಳದ್ದಾಗಿದೆ. ನೀವು ಒಂದು ವರ್ಷಕ್ಕೆ 1,50,000 ಲಕ್ಷ ರೂಪಾಯಿಗಳನ್ನು 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ ನಿಮ್ಮ ಒಟ್ಟು ಹೂಡಿಕೆಯು 22 .50 ಲಕ್ಷ ರೂಪಾಯಿ ಆಗುತ್ತದೆ.

15 ವರ್ಷ ಅವಧಿ ಪೂರ್ಣವಾದ ನಂತರ ನೀವು ಒಟ್ಟಾರೆಯಾಗಿ 42.48 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಕೂಡ ಹೂಡಿಕೆ ಮಾಡಿದ ಹಣಕ್ಕೆ ಡಬಲ್ ಹಣ ಸಿಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in