SSY Benefits: ಮಗಳ ಹೆಸರಿನಲ್ಲಿ ಇಂದೇ ಈ ಯೋಜನೆಯ ಖಾತೆ ತೆರೆಯಿರಿ, ಮಗಳಿಗೆ 21 ವರ್ಷವಾದಾಗ ಸಿಗಲಿದೆ 51 ಲಕ್ಷ ರೂ.
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ 51 ಲಕ್ಷ ಲಾಭ.
Sukanya Samriddhi Scheme: ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಲ್ಲಿ Sukanya Samriddhi Yojana ಕೂಡ ಒಂದಾಗಿದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಪೋಷಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ನಿಮ್ಮ ಮನೆಯ ಹೆಣ್ಣು ಮಗಳ ವಿದ್ಯಾಭ್ಯಾಸ, ಮದುವೆಗೆ ಸಹಾಯವಾಗಲು ಈ SSY ಯೋಜನೆ ಸಹಾಯವಾಗಲಿದೆ. ಹೆಣ್ಣುಮಕ್ಕಳ ಉತ್ತಮ ಭವಿಷ್ಯಕ್ಕಾಗಿ SSY ಉತ್ತಮ ಆಯ್ಕೆ ಎನ್ನಬಹುದು. ಇದೀಗ ನಾವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಸುಕನ್ಯಾ ಸಮೃದ್ಧಿ ಯೋಜನೆ ನಿಯಮ
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆಯಲು ಮಗುವಿನ ಗರಿಷ್ಠ ವಯಸ್ಸು 10 ವರ್ಷ ಆಗಿದೆ. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಗು ಜನಸಿದ ತಕ್ಷಣವೇ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹದು. ಈ ಯೋಜನೆಯಲ್ಲಿ ಮಗಳಿಗೆ 21 ವರ್ಷ ತುಂಬಿದ ನಂತರ ಮಾತ್ರ ಮೆಚ್ಯೂರಿಟಿ ಮೊತ್ತ ಲಭ್ಯವಾಗುತ್ತದೆ. 18 ವರ್ಷ ವಯಸ್ಸಿನಲ್ಲಿ ನೀವು ಮೊತ್ತದ 50 ಪ್ರತಿಶತವನ್ನು ಹಿಂತೆಗೆದುಕೊಳ್ಳಬಹುದು.
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರ ಶೇಕಡಾ 8 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಮೊದಲು ವಾರ್ಷಿಕ ಬಡ್ಡಿ ಶೇ. 7.60 ದರದಲ್ಲಿ ಲಭ್ಯವಿತ್ತು. ಆದರೆ ಈ ವರ್ಷದ ಮೊದಲ ತ್ರೈಮಾಸಿಕ ದಲ್ಲಿ ಸರ್ಕಾರವು SSY ಬಡ್ಡಿದರವನ್ನು 40 bps ಹೆಚ್ಚಿಸಿದೆ. ಇದರಿಂದಾಗಿ ಹೂಡಿಕೆದಾರರು ಉತ್ತಮ ಲಾಭ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಈ ಯೋಜನೆಯಲ್ಲಿ ಮಗಳ ಹೆಸರಿನಲ್ಲಿ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸಿಕೊಳ್ಳಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳು
SSY ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಮಗಳಿಗೆ 18 ವರ್ಷ ತುಂಬಿದ ನಂತರ 50 ಪ್ರತಿಶತದಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಈ ಯೋಜನೆಯ ಮುಕ್ತಾಯದ ನಂತರ 51,03,707 ರೂಪಾಯಿಯನ್ನು ಪಡೆಯಲಾಗುತ್ತದೆ. ಈ ಯೋಜನೆಯನ್ನು ಹೂಡಿಕೆದಾರರು 18 ಲಕ್ಷ ಠೇವಣಿ ಮಾಡಿದರೆ 21 ವರ್ಷಗಳ ನಂತರ 33,03,707 ಲಕ್ಷ ರೂಪಾಯಿ ಅನ್ನು ಬಡ್ಡಿಯಾಗಿ ಪಡೆಯುತ್ತಾರೆ. ಇನ್ನು ಲಾಭದ ಹಣ ನೀವು ಠೇವಣಿ ಮಾಡುವ ಹಣದ ಮೇಲೆ ನಿರ್ಧಾರ ಆಗಿರುತ್ತದೆ.