SSY: ಹೆಣ್ಣು ಮಗುವಿನ ಓದು ಮತ್ತು ಮದುವೆಗೆ ಸಿಗಲಿದೆ 63 ಲಕ್ಷ ರೂಪಾಯಿ, ಇಂದೇ ಈ ಯೋಜನೆಗೆ ಸೇರಿಕೊಳ್ಳಿ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಣ್ಣು ಮಗುವಿನ ಮದುವೆ ಮತ್ತು ವಿಧ್ಯಾಭಾಸಕ್ಕೆ ಹಣ ಸಂಗ್ರಹ ಮಾಡಬಹುದು.

Sukanya Samriddhi Yojana Benefits: ಕೇಂದ್ರ ಸರ್ಕಾರವು ದೇಶದ ಹೆಣುಮಕ್ಕಳಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಆರ್ಥಿಕವಾಗಿ ನೆರವು ನೀಡಲು ಸರ್ಕಾರ ಮುಂದಾಗಿದೆ.

ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ಜವಲಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ಈ ಯೋಜನೆಯ ಮೇಲಿನ ಹೂಡಿಕೆಯು ನಿಮ್ಮ ಮಗುವಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.

Investing in Sukanya Samriddhi Yojana can save money for girl child's marriage and graduation.
Image Credit: rajasthankhabre

ಹೆಣ್ಣುಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)
ನಿಮ್ಮ ಮನೆಯ ಹೆಣ್ಣು ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುದರಿಂದ ನೀವು ನಿಮ್ಮ ಮಗಳ ಭವಿಷ್ಯವನ್ನು ಬಹಳ ಸುಂದರವಾಗಿ ರೂಪಿಸಬಹುದಾಗಿದೆ. ನಿಮ್ಮ ಮಗುವಿನ ಶಿಕ್ಷಣಕ್ಕೆ ಈ ಸುಕನ್ಯಾ ಸಮೃದ್ಧಿ ಯೋಜನೆ ಸಹಾಯವಾಗಲಿದೆ. ಇನ್ನು ಸರ್ಕಾರವು ಈ ಯೋಜನೆಯ ಮೇಲಿನ ಬಡ್ಡಿದರವನ್ನು ಕೂಡ ಹೆಚ್ಚಿಸಲು ನಿರ್ಧರಿಸಿದೆ.

ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಗು ಜನಸಿದ ತಕ್ಷಣವೇ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹದು.

Sukanya Samriddhi Yojana can be invested in empowering the girl child
Image Credit: axisbank

ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಸಿಗಲಿದೆ 63 ಲಕ್ಷ ರೂ.
ಈ ಯೋಜನೆಯಲ್ಲಿ ನೀವು 250 ರೂನಿಂದ ಗರಿಷ್ಟ 1.50 ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಸಿಕವಾಗಿ 12,500 ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ 1.5 ಲಕ್ಷ ಹಣವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

ಈ ಯೋಜನೆಯಲ್ಲಿ ಮೆಚ್ಯುರಿಟಿ ಚಿಪ್ಪಿಂಗ್ ಸೌಲಭ್ಯವು ಸುಲಭವಾಗಿ ಲಭ್ಯವಾಗಲಿದೆ. ಮೆಚ್ಯುರಿಟಿ ಅವಧಿಯ ನಂತರ ನಿಮ್ಮ ಮಗಳು 21 ವರ್ಷ ವಯಸ್ಸಾದಾಗ ನೀವು ಸಂಪೂರ್ಣ ಹಣವನ್ನು ಹಿಂಪಡೆಯಲು ಬಯಸಿದಾಗ 63,79,634 ರೂ. ಹಣವನ್ನು ಪಡೆಯಬಹುದು.

ಈ ಹಣದಿಂದ ನಿಮ್ಮ ಮಗುವಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು. ಹೂಡಿಕೆಯ ಹಣದಿಂದ ನಿಮ್ಮ ಮಗುವಿನ ವಿದ್ಯಾಭ್ಯಾಸ ಅಥವಾ ಮದುವೆ ಮಾಡಬಹುದು. ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ಇಂದೇ ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Join Nadunudi News WhatsApp Group