SSY Details: ಹೆಣ್ಣು ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್, ಮಗಳ ಮದುವೆಗೆ ಸಿಗಲಿದೆ 25 ಲಕ್ಷ ರೂ., ಇಂದೇ ಸರ್ಜಿ ಸಲ್ಲಿಸಿ.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪಡೆಯಿರಿ 25 ಲಕ್ಷ ರೂಪಾಯಿ.

Sukanya Samriddhi Yojana Investment And Profit Deatils: ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಲ್ಲಿ Sukanya Samriddhi Yojana ಕೂಡ ಒಂದಾಗಿದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಪೋಷಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ನಿಮ್ಮ ಮನೆಯ ಹೆಣ್ಣು ಮಗಳ ವಿದ್ಯಾಭ್ಯಾಸ, ಮದುವೆಗೆ ಸಹಾಯವಾಗಲು ಈ SSY ಯೋಜನೆ ಸಹಾಯವಾಗಲಿದೆ.

ಹೆಣ್ಣುಮಕ್ಕಳ ಉತ್ತಮ ಭವಿಷ್ಯಕ್ಕಾಗಿ SSY ಉತ್ತಮ ಆಯ್ಕೆ ಎನ್ನಬಹುದು. ಈ ಯೋಜನೆ ಮೂಲಕ ನೀವು ಕಡಿಮೆ ಹೂಡಿಕೆಯಲ್ಲಿ ನಿಮ್ಮ ಮಗಳ ಶಿಕ್ಷಣ ಅಥವಾ ಮದುವೆಗಾಗಿ 25 ಲಕ್ಷ ಹಣವನ್ನು ಪಡೆಯಬಹುದು. ಇದೀಗ SSY ಯೋಜನೆಯು ಹೂಡಿಕೆದಾರರಿಗೆ ನೀಡುವ ಬಡ್ಡಿದರ ಎಷ್ಟು? ಹೂಡಿಕೆಯ ವಿಧಾನ ಹಾಗೂ ಹೂಡಿಕೆಯಿಂದ ಗಳಿಸಬಹುದಾದ ಲಾಭದ ಮೊತ್ತ ಎಷ್ಟು? ಎನ್ನುವ ಬಗ್ಗೆ ವಿವರ ತಿಳಿಯೋಣ.

Sukanya Samriddhi Yojana
Image Credit: Economictimes

ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ SSY
ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಗು ಜನಸಿದ ತಕ್ಷಣವೇ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹದು.

SSY ಯೋಜನೆ ಹೂಡಿಕೆಯ ನಿಯಮಗಳೇನು..?
ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಖಾತೆ ತೆರೆದ ದಿನದಿಂದ 15 ವರ್ಷಗಳವರೆಗೆ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಖಾತೆಯಲ್ಲಿ ಹಣದ ಠೇವಣಿ ಸಕಾಲದಲ್ಲಿ ಆಗದಿದ್ದರೆ ಖಾತೆಯು ಡಿಫಾಲ್ಟ್ ಆಗುವ ಸಾಧ್ಯತೆ ಇರುತ್ತದೆ. ಖಾತೆಯನ್ನು ಪುನಃ ಸಕ್ರಿಯಗೊಳಿಸಲು ರೂ. 50 ದಂಡವನ್ನು ಪಾವತಿಸಬೇಕಾಗುತ್ತದೆ.

Sukanya Samriddhi Yojana Investment Profit
Image Credit: Informalnewz

25 ಲಕ್ಷ ಹಣ ಪಡೆಯಲು ಎಷ್ಟು ಹೂಡಿಕೆ ಅಗತ್ಯವಿದೆ..?
ನಿಮ್ಮ ಮಗುವಿನ ವಯಸ್ಸು 5 ವರ್ಷವಿದ್ದಾಗ ನೀವು ಹೂಡಿಕೆಯನ್ನು ಪ್ರಾರಂಭಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಶೇ. 8 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಯೋಜನೆಯಲ್ಲಿ ಮಾಸಿಕವಾಗಿ 4,641 ರೂ. ಹೂಡಿಕೆ ಮಾಡುತ್ತಾ ವಾರ್ಷಿಕವಾಗಿ 55,700 ರೂ ಪಾವತಿಸಿದರೆ ನೀವು ಮೆಚುರಿಟಿ ಅವಧಿಯ ನಂತರ 25 ಲಕ್ಷ ಹಣವನ್ನು ಪಡೆಯಬಹುದು. ಈ ಯೋಜೆನೆಯಲ್ಲಿ ಸೆಕ್ಷನ್ 80C ಅಡಿಯಲ್ಲಿ 1 .50 ಲಕ್ಷ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group