Sukanya Samriddhi Yojana Monthly Investment Return: ಇತ್ತೀಚಿನ ದಿನಗಳಲ್ಲಿ ಜನರು ಹೂಡಿಕೆಯತ್ತ ಹೆಚ್ಚು ಮುಖಮಾಡುತ್ತಿದ್ದಾರೆ. ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ಇಂದಿನಿಂದಲೇ ಹೂಡಿಕೆಯನ್ನು ಮಾಡಬೇಕು. ಇದೀಗ ಹೆಣ್ಣು ಮಕ್ಕಳ ಆರ್ಥಿಕ ಭದ್ರತೆ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕಡಿಮೆ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು.
ಇನ್ನು SSY ಯೋಜನೆಯನ್ನು ಹೂಡಿಕೆ ಮಾಡುವುದರ ಮೂಲಕ ಸುಮಾರು 69.30 ಲಕ್ಷ ರೂಪಾಯಿ ತನಕ ಆದಾಯ ಪಡೆದುಕೊಳ್ಳಬಹುದು. ಮಗಳ ಮದುವೆ ಮತ್ತು ಶಿಕ್ಷಣಕ್ಕೆ ಹಣ ಹೂಡಿಕೆ ಮಾಡುವ ಪೋಷಕರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಒಂದು ಉತ್ತಮವಾದ ಆಯ್ಕೆ ಆಗಿದೆ. ಹಾಗಾದರೆ ಸುಕನ್ಯಾ ಸಮೃದ್ಧಿ ಯೋಜನೆಯ ಲಾಭ, ಷರತ್ತುಗಳು, ಹಣ ಹಿಂಪಡೆಯುವುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರದ ಒಂದು ಸುರಕ್ಷಿತ ಉಳಿತಾಯ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ಜಾರಿಗೆ ತರಲಾಗಿದೆ. ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಬಹುದು. ಪ್ರಸ್ತುತ, ಈ ಯೋಜನೆಯಲ್ಲಿ 8.2% ಬಡ್ಡಿದರವಿದ್ದು, ಇದು ಸಂಯುಕ್ತ ಬಡ್ಡಿಯೊಂದಿಗೆ ಲೆಕ್ಕಹಾಕಲಾಗುತ್ತದೆ. ಈ ಯೋಜನೆಯು ತೆರಿಗೆ ಮುಕ್ತವಾಗಿದ್ದು, EEE (Exempt-Exempt-Exempt) ಸ್ಥಿತಿಯನ್ನು ಹೊಂದಿದೆ – ಅಂದರೆ ಹೂಡಿಕೆ, ಬಡ್ಡಿ ಮತ್ತು ಮ್ಯಾಚುರಿಟಿ ಮೊತ್ತ ಎಲ್ಲವೂ ತೆರಿಗೆ ರಹಿತ.
ಯೋಜನೆಯ ಷರತ್ತುಗಳು
* 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಗೆ ಮಾತ್ರ
* ಭಾರತೀಯ ನಿವಾಸಿ ಆಗಿರಬೇಕು
* ಒಂದು ಕುಟುಂಬದಿಂದ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಖಾತೆ ತೆರೆಯಬಹುದು
* ಕನಿಷ್ಠ ಹೂಡಿಕೆ 250 ರೂಪಾಯಿ, ಗರಿಷ್ಠ 1.5 ಲಕ್ಷ ವಾರ್ಷಿಕವಾಗಿ
* 15 ವರ್ಷಗಳ ಹೂಡಿಕೆ ಯೋಜನೆ
* 21 ವರ್ಷಕ್ಕೆ ಮ್ಯಾಚುರಿಟಿ ಮೊತ್ತವನ್ನು ಪಡೆದುಕೊಳ್ಳಬಹುದು
* 80c ಅಡಿಯಲ್ಲಿ 1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ
* ಬಾಲಕಿಗೆ 18 ವರ್ಷ ಆಗುವ ತನಕ ಪೋಷಕರು ಖಾತೆಯನ್ನು ನಿರ್ವಹಿಸಬೇಕು
SSY ನಲ್ಲಿ ಎಷ್ಟು ಹೂಡಿಕೆ ಮಾಡಿದ್ರೆ ಎಷ್ಟು ಲಾಭ ಬರುತ್ತೆ ನೋಡಿ
| ತಿಂಗಳ ಹೂಡಿಕೆ | ವಾರ್ಷಿಕ ಹೂಡಿಕೆ | 15 ವರ್ಷದಲ್ಲಿ ಒಟ್ಟು ಹೂಡಿಕೆ | 21 ವರ್ಷದಲ್ಲಿ ಮ್ಯಾಚ್ಯುರಿಟಿ | ಒಟ್ಟು ಲಾಭ |
|---|---|---|---|---|
| ₹2,000 | ₹24,000 | ₹3.60 ಲಕ್ಷ | ₹13.33 ಲಕ್ಷ | ₹9.73 ಲಕ್ಷ |
| ₹4,000 | ₹48,000 | ₹7.20 ಲಕ್ಷ | ₹26.66 ಲಕ್ಷ | ₹19.46 ಲಕ್ಷ |
| ₹6,000 | ₹72,000 | ₹10.80 ಲಕ್ಷ | ₹39.99 ಲಕ್ಷ | ₹29.19 ಲಕ್ಷ |
| ₹8,000 | ₹96,000 | ₹14.40 ಲಕ್ಷ | ₹53.32 ಲಕ್ಷ | ₹38.92 ಲಕ್ಷ |
| ₹10,000 | ₹1,20,000 | ₹18.00 ಲಕ್ಷ | ₹66.65 ಲಕ್ಷ | ₹48.65 ಲಕ್ಷ |
| ₹10,417 | ₹1,25,004 | ₹18.75 ಲಕ್ಷ | ₹69.30 ಲಕ್ಷ | ₹50.55 ಲಕ್ಷ |
ಗಮನಿಸಿ: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ₹69.30 ಲಕ್ಷ ಆದಾಯ ಪಡೆದುಕೊಳ್ಳಲು ಪ್ರತಿ ತಿಂಗಳು ₹10,417 ಹೂಡಿಕೆ ಮಾಡಬೇಕಾಗುತ್ತದೆ.
ಹಣ ಹಿಂಪಡೆಯುದು ಹೇಗೆ?
ಖಾತೆ ತೆರೆದ 21 ವರ್ಷಗಳ ನಂತರ ಮ್ಯಾಚುರಿಟಿ ಆಗುತ್ತದೆ, ಆದರೆ ಠೇವಣಿಗಳು ಕೇವಲ 15 ವರ್ಷಗಳು. ಮಗಳು 18 ವರ್ಷ ತುಂಬಿದ ನಂತರ ಅಥವಾ 10ನೇ ತರಗತಿ ಪಾಸ್ ಆದ ನಂತರ ಹಣ ಹಿಂಪಡೆಯಬಹುದು. ಶಿಕ್ಷಣಕ್ಕಾಗಿ 50% ವರೆಗೆ ಹಿಂಪಡೆಯಬಹುದು, ಮತ್ತು ಮದುವೆಗಾಗಿ ಮ್ಯಾಚುರಿಟಿ ಮೊದಲೇ ಮುಗಿಸಬಹುದು.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕ್ ಗೆ ಭೇಟಿ ಕೊಟ್ಟು, ಮಗುವಿನ ಜನ್ಮ ಪ್ರಮಾಣಪತ್ರ, ಆಧಾರ್ ಕಾರ್ಡ್ ಮತ್ತು ವಿಳಾಸ ಪುರಾವೆಯಂತಹ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ವಾರ್ಷಿಕವಾಗಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಕನಿಷ್ಠ ಠೇವಣಿ ಮಾಡದಿದ್ದರೆ ಖಾತೆ Default ಆಗುತ್ತದೆ, ನಂತರ 50 ರೂಪಾಯಿ ದಂಡ ಪಾವತಿಸಿ ಮರುಪ್ರಾರಂಭಿಸಬಹುದು. ಠೇವಣಿಗಳನ್ನು ನಗದು, ಚೆಕ್ ಅಥವಾ ಆನ್‌ಲೈನ್ ಮೂಲಕ ಮಾಡಬಹುದು.
ಯೋಜನೆಯ ಪ್ರಯೋಜನಗಳು
* ಸುಕನ್ಯಾ ಸಮೃದ್ಧಿ ಯೋಜನೆ ಭದ್ರವಾದ ಮತ್ತು ಸುರಕ್ಷಿತವಾದ ಯೋಜನೆ ಆಗಿದೆ.
ಈ ಯೋಜನೆಯನ್ನು ಭಾರತ ಸರ್ಕಾರವು ಬೆಂಬಲಿಸುವುದರಿಂದ ಯಾವುದೇ ರೀತಿಯ ಅಪಾಯವಿಲ್ಲ.
* ಮಧ್ಯಮ ವರ್ಗದ ಜನರಿಗೆ ಉತ್ತಮವಾಗಿದೆ
ಕನಿಷ್ಠ 250 ರೂಪಾಯಿಯಿಂದ ಆರಂಭಿಸಬಹುದಾಗಿರುವುದರಿಂದ, ಎಲ್ಲಾ ಆರ್ಥಿಕ ಸಾಮರ್ಥ್ಯದವರಿಗೂ ಇದು ಸುಲಭವಾಗಿ ಲಭ್ಯವಿದೆ.
*ಶಿಕ್ಷಣ ಮತ್ತು ಮದುವೆಗೆ ಆರ್ಥಿಕ ನೆರವು
ಈ ಯೋಜನೆಯಿಂದ ಸಂಗ್ರಹವಾದ ಹಣವನ್ನು ಮಗಳ ಶಿಕ್ಷಣ, ಮದುವೆ ಅಥವಾ ಇತರ ಪ್ರಮುಖ ಖರ್ಚುಗಳಿಗೆ ಬಳಸಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

