SSY Update: ಕೇವಲ 300 ರೂ. ಹೂಡಿಕೆಯಲ್ಲಿ 50 ಲಕ್ಷ ರಿಟರ್ನ್ ಪಡೆಯಬಹುದು, ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.
ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯುವ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿಯಿರಿ.
Sukanya Samriddhi Yojana Profit: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಆರ್ಥಿಕವಾಗಿ ನೆರವು ನೀಡಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರವು ದೇಶದ ಹೆಣುಮಕ್ಕಳಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ಜವಲಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.
ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ಈ ಯೋಜನೆಯ ಮೇಲಿನ ಹೂಡಿಕೆಯು ನಿಮ್ಮ ಮಗುವಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.
ಹೆಣ್ಣುಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)
ನಿಮ್ಮ ಮನೆಯ ಹೆಣ್ಣು ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುದರಿಂದ ನೀವು ನಿಮ್ಮ ಮಗಳ ಭವಿಷ್ಯವನ್ನು ಬಹಳ ಸುಂದರವಾಗಿ ರೂಪಿಸಬಹುದಾಗಿದೆ. ನಿಮ್ಮ ಮಗುವಿನ ಶಿಕ್ಷಣಕ್ಕೆ ಈ ಸುಕನ್ಯಾ ಸಮೃದ್ಧಿ ಯೋಜನೆ ಸಹಾಯವಾಗಲಿದೆ.
ಇನ್ನು ಸರ್ಕಾರವು ಈ ಯೋಜನೆಯ ಮೇಲಿನ ಬಡ್ಡಿದರವನ್ನು ಕೂಡ ಹೆಚ್ಚಿಸಲು ನಿರ್ಧರಿಸಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ರಿಟರ್ನ್ ಅನ್ನು ಪಡೆಯಬಹುದಾಗಿದೆ.ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು.
ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಬಡ್ಡಿದರ ಪಡೆಯಬಹುದು
ಈ ಯೋಜನೆಯಲ್ಲಿ ನೀವು 250 ರೂನಿಂದ ಗರಿಷ್ಟ 1.50 ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಸಿಕವಾಗಿ 12,500 ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ 1.5 ಲಕ್ಷ ಹಣವನ್ನು ಪಡೆಯಬಹುದಾಗಿದೆ.ಈ ಯೋಜನೆಯಲ್ಲಿ ಮೆಚ್ಯುರಿಟಿ ಚಿಪ್ಪಿಂಗ್ ಸೌಲಭ್ಯವು ಸುಲಭವಾಗಿ ಲಭ್ಯವಾಗಲಿದೆ.
ಇನ್ನು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಹಣದಿಂದ ನಿಮ್ಮ ಮಗುವಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು. ಹೂಡಿಕೆಯ ಹಣದಿಂದ ನಿಮ್ಮ ಮಗುವಿನ ವಿದ್ಯಾಭ್ಯಾಸ ಅಥವಾ ಮದುವೆ ಮಾಡಬಹುದು. ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ಇಂದೇ ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಕೇವಲ 300 ರೂ. ಹೂಡಿಕೆಯಲ್ಲಿ 50 ಲಕ್ಷ ರಿಟರ್ನ್ ಪಡೆಯಬಹುದು
*ನಿಮ್ಮ ದೈನಂದಿನ ಹೂಡಿಕೆ 35 ರೂ. ಗಳಿಗೆ ಪ್ರಸ್ತುತ ಬಡ್ಡಿದರದಲ್ಲಿ 5 ಲಕ್ಷ ರೂ. ಗೆ ಬೆಳೆಯಲಿದೆ. ಇನ್ನು ದಿನಕ್ಕೆ 100 ರೂ. ಹೂಡಿಕೆಯಲ್ಲಿ ಪ್ರತಿ ತಿಂಗಳು 3000 ರೂ. ಗಳ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಯ ಮೇಲೆ ನೀವು ಸುಮಾರು 16 ಲಕ್ಷ ರಿಟರ್ನ್ ಅನ್ನು ಪಡೆಯಬಹುದಾಗಿದೆ.
*ಇನ್ನು ದಿನಕ್ಕೆ 200 ರೂ. ಹೂಡಿಕೆಯಲ್ಲಿ ಪ್ರತಿ ತಿಂಗಳು 6,000 ರೂ. ಗಳ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಯ ಮೇಲೆ ನೀವು ಸುಮಾರು 33 ಲಕ್ಷ ರಿಟರ್ನ್ ಅನ್ನು ಪಡೆಯಬಹುದಾಗಿದೆ.
*ಇನ್ನು ದಿನಕ್ಕೆ 300 ರೂ. ಹೂಡಿಕೆಯಲ್ಲಿ ಪ್ರತಿ ತಿಂಗಳು 9,000 ರೂ. ಗಳ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಯ ಮೇಲೆ ನೀವು ಸುಮಾರು 50 ಲಕ್ಷ ರಿಟರ್ನ್ ಅನ್ನು ಪಡೆಯಬಹುದಾಗಿದೆ.