Govt Scheme: ಕೇವಲ 411 ರೂ. ಗಳ ಹೂಡಿಕೆಯಲ್ಲಿ ಸಿಗಲಿದೆ 66 ಲಕ್ಷ, ಕೇಂದ್ರ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಉತ್ತಮ ಲಾಭ.

Sukanya Samruddhi Yojana Benefits: ದೇಶದಲ್ಲಿನ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಹೂಡಿಕೆಯ ಯೋಜನೆಯನ್ನು ಜಾರಿಗೊಳಿಸಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಹೆಚ್ಚಿನ ಯೋಜನೆಯನ್ನು ಪರಿಚಯಿಸುತ್ತಿದೆ. ಹೆಣ್ಣು ಮಕ್ಕಳು ಒಂದು ರೀತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎನ್ನಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹಣ ಅವಶ್ಯಕತೆ ಇರುತ್ತದೆ. ಇನ್ನು ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತಂದೆ ತಾಯಿಗೆ ಆ ಮಗುವಿನ ಭವಿಷ್ಯದ ಚಿಂತೆ ಹೆಚ್ಚಿರುತ್ತದೆ.

ತಮ್ಮ ಮಗಳಿಗೆ ಉತ್ತಮ ಜೀವನದ ಜೊತೆಗೆ ಶಿಕ್ಷಣವನ್ನು ನೀಡಬೇಕೆನ್ನುವ ಆಸೆ ಎಲ್ಲ ಪೋಷಕರಲ್ಲಿಯೂ ಇರುವುದು ಸಾಮಾನ್ಯ. ಇನ್ನು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹಣದ ಅವಶ್ಯಕೆತೆ ಹೆಚ್ಚಿರುತ್ತದೆ. ಹೀಗಾಗಿ ಕೇಂದ್ರ ಸರಕಾರ ಹೆಣ್ಣು ಮಕ್ಕಳ ಭವಿಷ್ಯದ ಚಿಂತೆಯನ್ನು ಪೋಷಕರಿಗೆ ಕಡಿಮೆ ಮಾಡಲು ಹೂಡಿಕೆ ಯೋಜನೆಯನ್ನು ಪರಿಚಯಿಸುತ್ತಿದೆ.

sukanya samriddhi yojana investment
Image Credit: Etmoney

Sukanya Samruddhi Yojana
ಈಗಾಗಲೇ ಕೇಂದ್ರ ಸರಕಾರ ಸಾಕಷ್ಟು ಸಣ್ಣಾ ಉಳಿತಾಯ ಯೋಜನೆಯನ್ನು ಪರಿಚಯಿಸಿದ್ದು, ಅದರಲ್ಲಿ Sukanya Samruddhi Yojana ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಆಯ್ಕೆಯಾಗಿದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ ನೀವು ಕೇಂದ್ರ ಸರ್ಕಾರ SSY ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳಿಗೆ ಉತ್ತಮ ಭವಿಷ್ಯವನ್ನು ನೀಡಬಹುದು. ಇನ್ನು SSY ಖಾತೆಯಲ್ಲಿನ ಹೂಡಿಕೆಯು IT ಕಾಯ್ದೆ ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹತೆ ಪಡೆದಿದೆ.

ಹೀಗಾಗಿ ನೀವು ಈ ಉಳಿತಾಯ ಯೋಜನೆಯಾ ಹೂಡಿಕೆಯ ಹಣದಿಂದ ಗಳಿಸಿದ ಮೊತ್ತಕ್ಕೆ ಯಾವ ತೆರಿಗೆ TAX ಕಟ್ಟುವ ಅಗತ್ಯ ಇರುವುದಿಲ್ಲ. SSY ಯೋಜನೆಯಲ್ಲಿನ ಹೂಡಿಕೆಯು ನೀವು ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ.

sukanya samriddhi yojana latest update
Image Credit: Zeebiz

ಕೇವಲ 411 ರೂ. ಗಳ ಹೂಡಿಕೆಯಲ್ಲಿ ಸಿಗಲಿದೆ 66 ಲಕ್ಷ
ನಿಮ್ಮ ಮಗಳ ಹೆಸರಿನಲ್ಲಿ ನೀವು ಪ್ರತಿ ದಿನಕ್ಕೆ ಸುಮಾರು 411 ರೂ. ಗಳನ್ನೂ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ನೀವು ಒಂದು ವರ್ಷದಲ್ಲಿ 1.5 ಲಕ್ಷ ರೂ. ಗಳ ಸಂಪೂರ್ಣ ತೆರಿಗೆ ಮುಕ್ತ ಮೊತ್ತವನ್ನು ಹೂಡಿಕೆ ಮಾಡಿದರೆ, 15 ವರ್ಷಗಲ್ಲಿ ನೀವು ಒಟ್ಟು 22,50,000 ಹೂಡಿಕೆಯ ಮೊತ್ತವನ್ನು ಪಡೆಯಬಹುದು. ಇನ್ನು ನಿಮ್ಮ ಮಗಳು 21 ವರ್ಷವನ್ನು ತಲುಪಿದಾಗ ನೀವು 65,93,071 ರೂ. ಗಳ ಮೊತ್ತವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group