Puttakkana Makkalu: ನಾದಿನಿ ಸುಮಾ ಹಾಕಿದ ಸವಾಲಿಗೆ ಕಂಗಾಲಾದ ಕಂಠಿ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ತಿರುವು.
Suma Challenged Kanti: ಜೀ ವಾಹಿನಿ ಪ್ರಸ್ತುತ ಪಡಿಸುತ್ತಿರುವ ಪುಟ್ಟಕ್ಕನ ಮಕ್ಕಳು (Puttakkna Makkalu) ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿ ಅತಿ ಹೆಚ್ಚು ಪ್ರೇಕ್ಷಕರನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಯಾವಾಗಲು ಟಾಪ್ ಒನ್ ಟಿಆರ್ ಪಿಯಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹ ಕಂಠಿ ಮದುವೆಯ ಬಳಿಕ ಅನೇಕ ತಿರುವುಗಳು ಉಂಟಾಗುತ್ತಿದೆ. ವಲ್ಲದ ಮನಸ್ಸಲ್ಲಿ ಸ್ನೇಹ ಕಂಠಿಯ ಮನೆಗೆ ಹೋಗಿದ್ದಾಳೆ.
ಕಂಠಿ ಬಡ್ಡಿ ವ್ಯವಹಾರವನ್ನು ಬಿಟ್ಟು ಸ್ವಂತ ವ್ಯಹಾರವನ್ನು ಮಾಡುತ್ತೇನೆ ಎಂದಾಗ ಸ್ನೇಹ ಕಂಠಿಗೆ ಬೆನ್ನೆಲುಬಾಗಿ ನಿಲ್ಲಲು ನಿರ್ಧರಿಸುತ್ತಾಳೆ. ಮತ್ತೆ ಸ್ನೇಹ ಕಂಠಿ ಮೇಲೆ ಸ್ವಲ್ಪ ಮಟ್ಟಿಗೆ ಕೋಪವನ್ನು ಕಡಿಮೆ ಮಾಡಿಕೊಳ್ಳುತ್ತಾಳೆ. ಆದರೆ ಕಂಠಿ ಹೇಳಿದ ಸುಳ್ಳುಗಳೇ ಇದೀಗ ಅವನ ಪಾಲಿಗೆ ಮುಳ್ಳಾಗುತ್ತಿದೆ. ಕಂಠಿ ಹೇಳಿರುವ ಒಂದೊಂದೇ ಸುಳ್ಳುಗಳು ಸ್ನೇಹಾಳಿಗೆ ತಿಳಿಯುತ್ತಿದೆ.
ಕಂಠಿ ಮೇಲೆ ಕೋಪಗೊಂಡಿರುವ ಸ್ನೇಹ
ಇನ್ನು ತಾನು ಅವಿದ್ಯಾವಂತ ಎಂದು ಸ್ನೇಹ ಬಳಿ ಕಂಠಿ ಹೇಳುತ್ತಾನೆ. ಈ ವಿಷಯ ತಿಳಿದ ಸ್ನೇಹ ಕಂಠಿಗೆ ಕಪಾಳಕ್ಕೆ ಹೊಡೆದು ತನ್ನ ಅಮ್ಮನ ಮನೆಗೆ ಹೋಗುತ್ತಾಳೆ. ಇನ್ನು ಪುಟ್ಟಕ್ಕ ತನ್ನ ಮಕ್ಕಳು ಹಾಗೂ ಅಳಿಯಂದಿರ ಜೊತೆ ಮನೆದೇವರ ಬಳಿ ಹೋಗುವುದಾಗಿ ಹರಕೆ ಹೊತ್ತಿರುತ್ತಾರೆ.
ಮನೆ ದೇವರ ಬಳಿ ಕಂಠಿ ಹೊರತುಪಡಿಸಿ ಪುಟ್ಟಕ್ಕನ ಕುಟುಂಬ ಹೋಗುತ್ತದೆ. ನಂತರ ಪುಟ್ಟಕ್ಕ ಕಂಠಿಗೆ ದೇವಸ್ಥಾನಕ್ಕೆ ಬರಲು ಹೇಳುತ್ತಾಳೆ. ಕಂಠಿ ದೇವಸ್ಥಾನಕ್ಕೆ ಬರುವುದು ಪುಟ್ಟಕ್ಕನನ್ನು ಹೊರತುಪಡಿಸಿ ಬೇರೆಯವರಿಗೂ ಇಷ್ಟವಾಗುದಿಲ್ಲ. ಸ್ನೇಹ ಕಂಠಿಯ ಮೇಲೆ ಕೋಪಗೊಂಡಿರುತ್ತಾಳೆ. ಇನ್ನು ದೇವಸ್ಥಾನದಲ್ಲಿ ಸ್ನೇಹಾಳ ತಂಗಿ ಸುಮಾ ಕಂಠಿಗೆ ಹೊಸ ಸವಾಲನ್ನು ಹಾಕುತ್ತಾಳೆ.
ಭಾಗೀರಥಿಯ ಬಳಿ ಪುಟ್ಟಕ್ಕನ ಕುಟುಂಬ
ಭಾಗೀರಥಿಯ ಬಳಿ ಪುಟ್ಟಕ್ಕನ ಕುಟುಂಬ ಬರುತ್ತದೆ. ಭಾಗೀರಥಿ ಪವಿತ್ರವಾದ ಜಲ. ತಪ್ಪು ಮಾಡಿದವರು ಅಲ್ಲಿ ಉದ್ಭವಿಸುವ ನೀರನ್ನು ಕುಡಿದರೆ ಪವಿತ್ರರಾಗುತ್ತಾರೆ ಎನ್ನುವುದು ಜನರ ನಂಬಿಕೆ. ಮೋಸದ ಹಾದಿ ತುಳಿದವರಿಗೆ ಭಾಗೀರಥಿ ಒಲಿಯುವುದಿಲ್ಲ. ಸತ್ಯ ಮಾರ್ಗದಲ್ಲಿ ಇರುವವರಿಗೆ ಭಾಗೀರಥಿ ತೀರ್ಥವನ್ನು ನೀಡುತ್ತಾಳೆ ಎನ್ನುವುದು ಅಲ್ಲಿನ ಮಹಿಮೆ. ಭಾಗೀರಥಿ ಬಳಿ ಹೋಗಿ ಪುಟ್ಟಕ್ಕ, ಸುಮಾ, ಸ್ನೇಹ, ಸಹನಾ ತೀರ್ಥವನ್ನು ತೆಗೆದುಕೊಂಡು ಬರುತ್ತಾರೆ.
ಕಂಠಿಗೆ ದೊಡ್ಡ ಸವಾಲು ಹಾಕಿದ ನಾದಿನಿ ಸುಮಾ
ಈ ವೇಳೆ ಸುಮಾ ಕಂಠಿಗೆ ಸವಾಲನ್ನು ಹಾಕುತ್ತಾಳೆ. ನಿಮಗೆ ಭಾವ ಎನ್ನುವುದೋ, ಶ್ರೀ ಎನ್ನುವುದೋ, ದೊರೆ ಎನ್ನುವುದೋ ತಿಳಿಯುತ್ತಿಲ್ಲ. ಅಷ್ಟೊಂದು ಹೆಸರಿದೆ ನಿಮಗೆ. ಧೈರ್ಯ ಇದ್ದರೆ ನೀವು ಭಾಗೀರಥಿ ಬಳಿ ಹೋಗಿ ತೀರ್ಥ ತೆಗೆದುಕೊಂಡು ಬನ್ನಿ ಎನ್ನುತ್ತಾಳೆ. ಸುಮಾಳ ಮಾತಿಗೆ ಪುಟ್ಟಕ ಕೋಪಗೊಳ್ಳುತ್ತಾಳೆ.
ಪುಟ್ಟಕ್ಕ ಕಂಠಿ ಪರ ಮಾತನಾಡಿ. ಕಂಠಿ ಏನೇ ತಪ್ಪು ಮಾಡಿದರು ಅವರ ಪ್ರೀತಿ ಮಾತ್ರ ಪರಿಶುದ್ಧವಾಗಿದೆ ಎನ್ನುತ್ತಾಳೆ. ಹಾಗೆ ಕಂಠಿ ಬಳಿ ಪುಟ್ಟಕ್ಕ ತೀರ್ಥ ತೆಗೆದುಕೊಂಡು ಬರುವಂತೆ ಹೇಳುತ್ತಾಳೆ. ಇನ್ನು ಸುಳ್ಳುಗಳ ಸರಮಾಲೆಯನ್ನೇ ಸುರಿಸಿರುವ ಕಂಠಿಗೆ ಭಾಗೀರಥಿ ತೀರ್ಥವನ್ನು ನೀಡುತ್ತಾಳೆ ಇಲ್ಲವ ಎನ್ನುವುದನ್ನು ಕಾದು ನೋಡಬೇಕಿದೆ.