Abishek Ambareesh Politics: ಮಗನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಸುಮಲತಾ, ಸದ್ಯದಲ್ಲೇ ಮದುವೆ.
Sumalatha Ambareesh And Abhishek Ambareesh: ನಟಿ, ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಇದೀಗ ರಾಜಕೀಯ ವಿಷಯವಾಗಿ ಬಾರಿ ಸುದ್ದಿಯಲ್ಲಿದ್ದಾರೆ.
ಇದೀಗ ನಟಿ ತಮ್ಮ ಮಗ ಅಭಿಷೇಕ್ ಅಂಬರೀಷ್ (Abhishek Ambareesh) ಅವರ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದಾರೆ. ಹಾಗೂ ಅಭಿಷೇಕ್ ಮತ್ತು ಅವಿವಾ ಮದುವೆಯ ಬಗ್ಗೆ ಕೂಡ ಮಾತನಾಡಿದ್ದಾರೆ.
ಕನ್ನಡ ಖ್ಯಾತ ಹಿರಿಯ ನಟ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ಇದೀಗ ತಮ್ಮ ಹೊಸ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟ ಅಭಿಷೇಕ್ ಅಂಬರೀಷ್ ಅವರು ಇದೀಗ ಮದುವೆಗೆ ಸಿದ್ದರಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ನಟ ಅಭಿಷೇಕ್ ಅಂಬರೀಷ್ ಅವರು ಅವಿವಾ ಬಿದ್ದಪ್ಪ (Aviva Biddappa) ಜೊತೆ ಡಿಸೆಂಬರ್ 11 ರಂದು ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಇನ್ನು ಈ ಜೋಡಿ ಹಸೆಮಣೆ ಏರಲು ಸಜಾಗಿದ್ದಾರೆ. ಈ ನಡುವೆ ನಟಿ ಸುಮಲತಾ ಅಂಬರೀಷ್ ಅವರು ತಮ್ಮ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ.
ಅಭಿಷೇಕ್ ಅಂಬರೀಷ್ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಸುಮಲತಾ
‘ಚುನಾವಣೆಗೆ ನಿಲ್ಲುವಂತೆ ಎರಡು ಪಕ್ಷಗಳಿಂದ ಅಭಿಷೇಕ್ ಗೆ ಆವ್ಹಾನ ಬಂದಿದ್ದು ನಿಜ. ಅಭಿಷೇಕ್ ಸದ್ಯದಲ್ಲೇ ಮದುವೆ ಆಗಲಿದ್ದಾನೆ. ಅಲ್ಲದೆ, ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳಿವೆ.
ನಾನು ರಾಜಕಾರಣದಲ್ಲಿ ಇರುವಾಗ, ಅವನು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಮತ್ತು ಚುನಾವಣೆಯನ್ನು ಎದುರಿಸುವುದಿಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನು ಅಭಿಷೇಕ್ ಹಾಗೂ ಅವಿವಾ ಮದುವೆ ಶೀಘ್ರದಲ್ಲೇ ನಡೆಯುವ ಬಗ್ಗೆ ಸುಳಿವು ನೀಡಿದ್ದಾರೆ.