India Lost World Cup: ರೋಹಿತ್ ತಗೆದುಕೊಂಡ ಒಂದು ಕೆಟ್ಟ ನಿರ್ಧಾರ ತಂಡದ ಸೋಲಿಗೆ ಕಾರಣವಾಯಿತು, ಬೇಸರದಲ್ಲಿ ಫ್ಯಾನ್ಸ್.

ರೋಹಿತ್ ತಗೆದುಕೊಂಡ ಈ ನಿರ್ಧಾರ ತಂಡದ ಸೋಲಿಗೆ ಕಾರಣವಾಯಿತು ಎಂದ Sunil Gavaskar.

Sunil Gavaskar About Rohit: ನಿನ್ನೆ ನಡೆದ ICC World cup 2023 ರ ಫೈನಲ್ ನ ಹಣಾಹಣಿಯಲ್ಲಿ ಟೀಮ್ ಇಂಡಿಯಾದ ವಿರುದ್ಧ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಟೀಮ್ ಇಂಡಿಯಾದ ಗೆಲುವಿನ ನಿರೀಕ್ಷೆಯಲ್ಲಿದ್ದ ಇಡೀ ಭಾರತೀಯರು ಸದ್ಯ ಬಾರಿ ಬೇಸರದಲ್ಲಿದ್ದಾರೆ.

ನಿನ್ನೆ ಅಹಮದಾಬಾದ್ ನಲ್ಲಿ ನಡೆದ India v/s Australia ತಂಡದ ಪಂದ್ಯದಲ್ಲಿ ಮೊದಲು Team India ಬ್ಯಾಟಿಂಗ್ ಮಾಡಿದೆ. ಟೀಮ್ ಇಂಡಿಯಾ ಗೆಲ್ಲುತ್ತದೆ ಎಂದು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕೋಟ್ಯಾಂತರ ಅಭಿಮಾನಿಗಳ ಕಾತುರತೆಗೆ ನಿನ್ನೆ ಬ್ರೇಕ್ ಬಿದ್ದಿದೆ.

Sunil Gavaskar About Rohit
Image Credit: Cricketaddictor

India v /s Australia
ICC World cup 2023 ರ ಫೈನಲ್ ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 241 ರನ್ ಗಳ ಗುರಿಯನ್ನು ನೀಡಿದೆ. ಟೀಮ್ ಇಂಡಿಯಾ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 6 ವಿಕೆಟ್ ಗಳನ್ನು ಟೀಮ್ ಇಂಡಿಯಾವನ್ನು ಸೋಲಿಸಿದೆ. ICC World Cup 2023 ರ Cup ಅನ್ನು ಆಸ್ಟ್ರೇಲಿಯಾ ತನ್ನ ಮುಡಿಗೇರಿಸಿಕೊಂಡರೆ Team India Runner UP ಆಗಿದೆ. ಸದ್ಯ ಟೀಮ್ ಇಂಡಿಯಾದ ಬಗ್ಗೆ ಶ್ರೇಷ್ಠ ಬ್ಯಾಟ್ ಮ್ಯಾನ್ Sunil Gavaskar ಹೇಳಿಕೆಯೊಂದನ್ನು ನೀಡಿದ್ದಾರೆ. ಸದ್ಯ ಈ ಆಟಗಾರನ ಹೇಳಿಕೆ ಬಾರಿ ವೈರಲ್ ಆಗುತ್ತಿದೆ.

ರೋಹಿತ್ ತಗೆದುಕೊಂಡ ಒಂದು ಕೆಟ್ಟ ನಿರ್ಧಾರ ತಂಡದ ಸೋಲಿಗೆ ಕಾರಣವಾಯಿತು

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಡಿಮೆ ಸ್ಕೊರಿಂಗ್ ಮುಖಾಮುಖಿಯಲ್ಲಿ ಆಸ್ಟೇಲಿಯಾದ ನಿಯಮಿತವಲ್ಲದ ಬೌಲರ್ ಗಳ ಮೇಲೆ ದಾಳಿ ಮಾಡಲು ರೋಹಿತ್ ಮತ್ತು ಅವರ ತಂಡ ಸಂಪೂರ್ಣವಾಗಿ ವಿಫಲವಾಗಿದೆ. ರೋಹಿತ್ ಶರ್ಮಾ ಈ ರೀತಿ ತಪ್ಪಾದ ಶಾಟ್ ಆಡಿ ಔಟಾದದ್ದು ಮಹತ್ವದ ತಿರುವು.

Join Nadunudi News WhatsApp Group

Rohit Sharma Latest News
Image Credit: Hindustantimes

ರೋಹಿತ್ ಶರ್ಮಾ ಚೆನ್ನಾಗಿ ಆಡುತ್ತಿದ್ದರು. ಆ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಹಿತ 10 ರನ್ ಆಗಲೇ ಬಂದಿದ್ದವು. ಬಹುಶಃ ಮುಂದಿನ ಎಸೆತದಲ್ಲಿ ಹಾಗೆ ಬ್ಯಾಟ್ ಮಾಡಬಾರದಿತ್ತು. ಅವರು ಅದನ್ನು ಕನೆಕ್ಟ್ ಮಾಡಿ ಸಿಕ್ಸರ್ ಬಾರಿಸಿದ್ದರೆ ನಾವೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತಿದ್ದೆವು. ಭಾರತ ತಂಡದ ಸ್ಕೊರ್ 260 ರನ್ ಗಳಿಗಿಂತ ಹೆಚ್ಚಿರಬೇಕಿತ್ತು. ಆದರೆ ಕೇವಲ 241 ರನ್ ಗಳಾಗಿ ಉಳಿಯಿತು ಎಂದು  Sunil Gavaskar ಬೇಸರ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group