Sunny leone Cheating Case:ಕೇರಳ ಕೋರ್ಟ್ ಮೆಟ್ಟಿಲೇರಿದ ನಟಿ ಸನ್ನಿ ಲಿಯೋನ್, ನಾನು ಯಾವುದೇ ತಪ್ಪು ಮಾಡಿಲ್ಲ.
Sunny leone Cheating Case: ಸನ್ನಿ ಲಿಯೋನ್ (Sunny Leone) ಹೆಸರನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳೇ ಇರುತ್ತಾರೆ, ನೀಲಿ ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಫೇಮಸ್ ಆಗಿದ್ದ ನಟಿ ಸನ್ನಿ ಲಿಯೋನ್ ಅವರು ನಂತರ ಬಾಲಿವುಡ್ (Bollywood) ನಲ್ಲಿ ಟಾಪ್ ನಟಿಯಾಗಿ ಮಿಂಚಿದರು.
ಹಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್ ಅವರು ನಂತರ ಕನ್ನಡ ಚಿತ್ರದಲ್ಲಿ ಕೂಡ ಕಾಣಿಸಿಕೊಂಡರು ಎಂದು ಹೇಳಬಹುದು.
ವೃತ್ತಿ ಜೀವನದ ಮೂಲಕ ಅನೇಕರ ಟೀಕೆಗೆ ಗುರಿಯಾಗಿದ್ದ ನಟಿ ಸನ್ನಿ ಲಿಯೋನ್ ಅವರು ನಂತರ ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಸಾಕಷ್ಟು ಜನರಿಗೆ ಸಹಾಯ ಮಾಡಿದರು. ಹಲವು ಮಕ್ಕಳ ವಿದ್ಯಾಭ್ಯಾಸ ಮತ್ತು ಹಲವು ಮಕ್ಕಳ ಖರ್ಚು ವೆಚ್ಚಗಳನ್ನ ನೋಡಿಕೊಳ್ಳುತ್ತಿರುವ ನಟಿ ಸನ್ನಿ ಲಿಯೋನ್ ಅವರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. Kerala HC Grants Interim Protection From Arrest To Sunny Leone.
ಕೇರಳ ಕೋರ್ಟ್ ಮೆಟ್ಟಿಲೇರಿದ ನಟಿ ಸನ್ನಿ ಲಿಯೋನ್
ಕೆಲವು ವಿಷಯಗಳ ಕುರಿತಾಗಿ ನಟಿ ಸನ್ನಿ ಲಿಯೋನ್ ಅವರು ಕೇರಳ ಹೈಕೋರ್ಟ್ (Kerala High Court) ಮೆಟ್ಟಿಲನ್ನ ಏರಿದ್ದಾರೆ.
ಸನ್ನಿ ಲಿಯೋನ್ ಅವರು ಕೇರಳ ಹೈ ಕೋರ್ಟ್ ಗೆ ಅರ್ಜಿಯನ್ನ ಸಲ್ಲಿಸಿದ್ದಾರೆ. ಕೆಲವು ಆರೋಪಗಳಿಂದ ತಮ್ಮನ್ನ ವಜಾ ಮಾಡುವ ಕುರಿತಂತೆ ನಟಿ ಸನ್ನಿ ಲಿಯೋನ್ ಅವರು ಈಗ ಕೇರಳ ಕೋರ್ಟ್ ಮೆಟ್ಟಿಲನ್ನ ಏರಿದ್ದು ಸದ್ಯ ಸುದ್ದಿ ಬಹಳ ವೈರಲ್ ಆಗಿದೆ.
ನಟಿ ಸನ್ನಿ ಲಿಯೋನ್ ಮೇಲೆ ವಂಚನೆಯ ಆರೋಪ
ಇವೆಂಟ್ ಗೆ ಬರುವುದಾಗಿ ಹೇಳಿ ಲಕ್ಷಗಟ್ಟಲೆ ಹಣವನ್ನ ಪಡೆದುಕೊಂಡ ನಟಿ ಸನ್ನಿ ಲಿಯೋನ್ ಅವರು ನಂತರ ಇವೆಂಟ್ ಬರದೇ ಮೋಸ ಮಾಡಿದ್ದಾರೆ ಎಂದು ಆರೋಪವನ್ನ ಮಾಡಲಾಗಿದ್ದು ಆ ಆರೋಪದಲ್ಲಿ ಸನ್ನಿ ಲಿಯೋನ್ ಅವರ ಪತಿ ಮತ್ತು ಅವರ ಒಬ್ಬ ಉದ್ಯೋಗಿಯನ್ನ ಕೂಡ ಸೇರಿಸಲಾಗಿತ್ತು.
ಕೋರ್ಟ್ ಮೆಟ್ಟಿಲೇರಲು ಕಾರಣ ಏನು
ಸನ್ನಿ ಲಿಯೋನ್, ಪತಿ ಡೇನಿಯಲ್ ವೆಬರ್ ಮತ್ತು ಅವರ ಒಬ್ಬ ಉದ್ಯೋಗಿ ವಿರುದ್ಧ ದಾಖಲಾದ ಕೆಲವು ವಂಚನೆಯ ಆರೋಪವನ್ನ ವಜಾಗೊಳಿಸುವಂತೆ ನಟಿ ಸನ್ನಿ ಲಿಯೋನ್ ಅವರು ಈಗ ಕೇರಳ ಕೋರ್ಟ್ ಮೆಟ್ಟಿಲನ್ನ ಏರಿದ್ದಾರೆ.
ಕೇರಳದ ಕೋರ್ಟ್ ನಲ್ಲಿ ಸನ್ನಿ ಲಿಯೋನ್, ಅವರ ಪತಿ ಡೇನಿಯಲ್ ಮತ್ತು ಅವರ ಒಬ್ಬ ಉದ್ಯೋಗಿಯ ಮೇಲೆ ಈವೆಂಟ್ ಮ್ಯಾನೇಜರ್ ಶಿಯಾಸ್ ಕುಂಜುಮೊಹಮ್ಮದ್ ಅವರು ಪ್ರಕರಣವನ್ನ ದಾಖಲು ಮಾಡಿದ್ದರು.
ಒಂದು ಇವೆಂಟ್ ನಲ್ಲಿ ಕಾಣಿಸಿಕೊಳ್ಳಲು ಈವೆಂಟ್ ಮ್ಯಾನೇಜರ್ ಶಿಯಾಸ್ ಕುಂಜುಮೊಹಮ್ಮದ್ ಅವರಿಗೆ ಲಕ್ಷಾಂತರ ರೂಪಾಯಿ ಹಣವನ್ನ ನೀಡಲಾಗಿತ್ತು, ಆದರೆ ಅವರು ಆ ಇವೆಂಟ್ ನಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ದೂರಿನಲ್ಲಿ ಆರೋಪವನ್ನ ಮಾಡಲಾಗಿತ್ತು.
ಇನ್ನು ಇದರ ಕುರಿತಂತೆ ಕೇರಳ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ FIR ಕೂಡ ದಾಖಲು ಮಾಡಲಾಗಿತ್ತು. ಸದ್ಯ ಇದರ ಬಗ್ಗೆ ಕೋರ್ಟಿಗೆ ಅರ್ಜಿ ಸಲ್ಲಿಸಿರುವ ನಟಿ ಸನ್ನಿ ಲಿಯೋನ್ ಅವರು ನಾನು, ಪತಿ ಮತ್ತು ಉದ್ಯೋಗಿ ಈ ಆರೋಪದಲ್ಲಿ ನಿರಪರಾಧಿಗಳು ಎಂದು ಹೇಳಿದ್ದಾರೆ.
ನಮ್ಮ ವಿರುದ್ಧ ಯಾವುದೇ ವಸ್ತು ಸಾಕ್ಷ್ಯಗಳಿಲ್ಲ ಮತ್ತು ಅರ್ಜಿದಾರನು ಯಾವುದೇ ನಷ್ಟವನ್ನ ಅನುಭವಿಸಿಲ್ಲ ಎಂದು ಹೇಳಿದ್ದಾರೆ. ಸದ್ಯ ನಟಿ ಸನ್ನಿ ಲಿಯೋನ್ ಅವರು ನಮ್ಮ ವಿರುದ್ದದ ವಿಚಾರಣೆಯನ್ನ ರದ್ದುಮಾಡುವಂತೆ ಅರ್ಜಿಯನ್ನ ಸಲ್ಲಿಸಿದ್ದಾರೆ.
ಸದ್ಯ ನಟಿ ಸನ್ನಿ ಲಿಯೋನ್ ಅವರು ಕೇರಳದ ಹೈ ಕೋರ್ಟಿನಲ್ಲಿ ಅರ್ಜಿಯನ್ನ ಸಲ್ಲಿಸಿದ್ದು ಕೋರ್ಟ್ ಯಾವ ರೀತಿಯಲ್ಲಿ ತೀರ್ಮಾನವನ್ನ ಕೈಗೊಳ್ಳುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ.