Sunroof Cars: 10 ಲಕ್ಷಕ್ಕೂ ಕಡಿಮೆ ಬೆಲೆಗೆ ಖರೀದಿಸಿ ಸನ್ ರೂಫ್ ಹೊಂದಿರುವ ಈ ಕಾರ್, ಸಕತ್ ಡಿಮ್ಯಾಂಡ್.
ಅಗ್ಗದ ಬೆಲೆಯಲ್ಲಿ ಖರೀದಿಗೆ ಸಿಗುತ್ತಿರುವ ಸನ್ ರೂಫ್ ವೈಶಿಷ್ಟ್ಯ ವನ್ನು ಹೊಂದಿರುವ ಕಾರ್ ಗಳ ಬಗ್ಗೆ ತಿಳಿಯಿರಿ.
Sunroof Budget Cars: ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳು ಬಿಡುಗಡೆಯಾಗಿವೆ. ಕಾರು ಖರೀದಿ ಮಾಡುವವರಿಗೆ ಹಣಕಾಸಿನ ವಿಚಾರದಲ್ಲಿ ಬಿಟ್ಟು ಆಯ್ಕೆಯ ವಿಷಯದಲ್ಲಿ ಕೊರತೆಯಂತೂ ಆಗುವುದಿಲ್ಲ.
ಇನ್ನು ಕಾರ್ ಖರೀದಿಸುವ ಮುನ್ನ ಜನರು ಕಾರುಗಳಲ್ಲಿ ಏನೇನು ವೈಶಿಷ್ಟ್ಯ ಇದೆ ಅನ್ನುವುದರ ಬಗ್ಗೆ ಗಮನ ಹರಿಸುತ್ತಾರೆ. ಅದೇ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಕಾರ್ ಖರೀದಿ ಮಾಡುವ ಮುನ್ನ ಕಾರಿನಲ್ಲಿ ಸನ್ ರೂಫ್ ಇದೆಯೇ ಅನ್ನುವುದರ ಬಗ್ಗೆ ಗಮನ ಹರಿಸುವುದು ನಾವು ತಿಳಿಯಬಹುದಾಗಿದೆ.
ಸನ್ ರೂಫ್ ಹೊಂದಿರುವ ಕಾರುಗಳು
ಇದೀಗ ಸನ್ ರೂಫ್ ಹೊಂದಿರುವ ಬಜೆಟ್ ಕಾರು ಒಂದು ಅಗ್ಗದ ಬೆಲೆಗೆ ಖರೀದಿಗೆ ಸಿಗುತ್ತಿದೆ. ಸನ್ ರೂಫ್ (Sunroof) ಹೊಂದಿರುವ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಇತ್ತೀಚಿಗೆ ಹಲವು ಕಂಪನಿಗಳು ತಮ್ಮ ಕಾರನ್ನು ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಾಗುವಂತೆ ಮಾಡುತ್ತಿವೆ. ಇದೀಗ ಸನ್ ರೂಫ್ ವೈಶಿಷ್ಟ್ಯ ಹೊಂದಿರುವ ಕಾರು ಒಂದು ಕಡಿಮೆ ಬೆಲೆಗೆ ಗ್ರಾಹಕರಿಗೆ ಕಾರುಗಳು ಕಡಿಮೆ ಬೆಲೆಗೆ ಜನರಿಗೆ ಸಿಗುತ್ತಿದ್ದು ಈ ಕಾರುಗಳ ಬೇಡಿಕೆ ಬಹಳ ಹೆಚ್ಚಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಟಾಟಾ ಆಲ್ಟ್ರೋಜ್ ಕಾರು( Tata Altroz Car)
ಅಗ್ಗದ ಬೆಲೆಯ ಸನ್ ರೂಫ್ ಪಟ್ಟಿಯಲ್ಲಿ ಮೊದಲ ಹೆಸರು ಟಾಟಾ ಆಲ್ಟ್ರೋಜ್ ಆಗಿದೆ. ಇದು ಕಂಪನಿಯ ಜನಪ್ರಿಯ ಹ್ಯಾಚ್ ಬ್ಯಾಕ್ ಆಗಿದೆ. XM (S ) ರೂಪಾಂತರದಲ್ಲಿ ಕಂಪನಿಯ ಎಲೆಕ್ಟ್ರಿಕ್ ಸ್ಯಾನ್ ರೂಫ್ ಅನ್ನು ನೀಡುತ್ತಿದೆ.
ಮಾರುಕಟ್ಟೆಯಲ್ಲಿ ಇದರ ಯಸ್ ಶೋ ರೂಮ್ ಬೆಲೆಯನ್ನು 7.35 ಲಕ್ಷ ರೂಪಾಯಿಗಳಲ್ಲಿ ಇರಿಸಲಾಗಿದೆ. ಸ್ಯಾನ್ ರೂಪ್ ವೈಶಿಷ್ಟ್ಯವನ್ನು ಹೊಂದಿರುವ ಮಾರುಕಟ್ಟೆಯಲ್ಲಿ ಇದು ಅತ್ಯಂತ ಕೈಗೆಟಕುವ ಕಾರುಗಳಲ್ಲಿ ಒಂದಾಗಿದೆ. ಈ ಕಾರು 18.05 ರಿಂದ 19.33 ಕೆಎಂಪಿಎಲ್ ವರೆಗೆ ಮೈಲೇಜ್ ಅನ್ನು ಹೊಂದಿದೆ.
ಹುಂಡೈ ಎಕ್ಸ್ ಟರ್ ಕಾರು(Hyundai Xter Car)
ಹುಂಡೈ ಎಕ್ಸ್ಟರ್ ಕಾರು ಸನ್ ರೂಫ್ ವೈಶಿಸ್ಯವನ್ನು ಪಡೆದುಕೊಂಡಿದೆ. ಇದು ಕಂಪನಿಯ ಜನಪ್ರಿಯ ಮೈಕ್ರೋ SUV ಆಗಿದ್ದು ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಅವರ SX ಮತ್ತು ಮೇಲಿನ ರೂಪಾಂತರಗಳಲ್ಲಿ ಕಂಪನಿಯು ಸ್ಯಾನ್ ರೂಫ್ ಅನ್ನು ನೀಡುತ್ತಿದೆ. ಅದರ ಸ್ಯಾನ್ ರೂಫ್ ನೊಂದಿಗೆ ಬರುವ ರೂಪಾಂತರ ಎಕ್ಸ್ ಶೋ ರೂಮ್ ಬೆಲೆ 8 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಈ ಕಾರು 19.4 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಹುಂಡೈ ಐ 20 ಕಾರು(Hyundai i20)
ಇನ್ನು ಸನ್ ರೂಫ್ ಪಟ್ಟಿಯಲ್ಲಿ ಮೂರನೇ ಹೆಸರು ಹುಂಡೈ ಐ 20 ಆಗಿದೆ. ಇದು ಕಂಪನಿಯ ಜನಪ್ರಿಯ ಹ್ಯಾಚ್ ಬ್ಯಾಕ್ ಆಗಿದೆ. ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಮ್ ಬೆಲೆ 9.01 ಲಕ್ಷ ರೂಪಾಯಿ ಆಗಿದೆ. ಈ ಕಾರಿನ ಮೈಲೇಜ್ 19.65 ರಿಂದ 21.0 Kmpl ಆಗಿದೆ.