Driving License Renewal New Rules: ದೇಶದಲ್ಲಿ ಸಂಚಾರಿ ನಿಯಮಗಳು ಎಷ್ಟೇ ಕಠಿಣವಾದರೂ ರಸ್ತೆ ಅಪಘಾತ, ಸಿಗ್ನಲ್ ಜಂಪಿಂಗ್, ಪಾದಚಾರಿ ಮಾರ್ಗದಲ್ಲಿ ಗಾಡಿ ಓಡಿಸುವುದು, ಅವಧಿ ಮುಗಿದ ಡ್ರೈವಿಂಗ್ ಲೈನ್ಸನ್ಸ್ ಮೂಲಕ ವಾಹನ ಚಾಲನೆ, ವೇಗಾವಾದ ಚಾಲನೆಯಂತಹ ಘಟನೆಗಳು ನೆಡೆಯುತ್ತಲೇ ಇದೆ. ಇದಕ್ಕಾಗಿ ಸರ್ಕಾರ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. ಇದೀಗ ಡ್ರೈವಿಂಗ್ ಲೈಸನ್ಸ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರಲಾಗಿದೆ ಮತ್ತು ಹೊಸ ನಿಯಮದ ಪ್ರಕಾರ, ಡ್ರೈವಿಂಗ್ ಲೈಸನ್ಸ್ ಇದ್ದರೂ ಕಡ್ಡಾಯವಾಗಿ ದಂಡ ಪಾವತಿ ಮಾಡಬೇಕು.
ಅವಧಿ ಮುಗಿದ ಮರುದಿನದಿಂದ ಡ್ರೈವಿಂಗ್ ಲೈಸೆನ್ಸ್ ಅಮಾನ್ಯ
ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದ ಮರುದಿನದಿಂದ 30 ದಿನಗಳ ಗ್ರೇಸ್ ಪೀರಿಯಡ್ ನೀಡಲಾಗುತ್ತಿತ್ತು. ಆದರೆ ಈಗ ಆ ಗ್ರೇಸ್ ಪಿರಿಯಡ್ ಅನ್ನು ರದ್ದುಮಾಡಲಾಗಿದೆ. ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಮುಗಿದ ಮರುದಿನದಿಂದ ಅಮಾನ್ಯವಾಗುತ್ತದೆ. ಲೈಸೆನ್ಸ್ ಅವಧಿ ಮುಗಿದುದ್ದು ತಡವಾಗಿ ನವೀಕರಣ ಮಾಡಿದರು ಕೂಡ ಆ ಅವಧಿಯಲ್ಲಿ ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಆಗಿದೆ.
ಸುಪ್ರೀಮ್ ಕೋರ್ಟ್ ತೀರ್ಪು
2025 ರ ಡಿಸೆಂಬರ್ ನಲ್ಲಿ ನ್ಯಾಯಮೂರ್ತಿ ಗಳಾಗಿರುವ Ahsanuddin Amanullah ಮತ್ತು S.V.N. Bhatti ಅವರ ತೀರ್ಪಿನಲ್ಲಿ 2019 ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ಸೆಕ್ಷನ್ 14 ರಲ್ಲಿ ಇದ್ದ 30 ದಿನಗಳ ಗ್ರೇಸ್ ಪೀರಿಯಡ್ ಅನ್ನು ತೆಗೆದುಹಾಕಲಾಗಿದೆ. ಇನ್ನುಮುಂದೆ ಲೈಸೆನ್ಸ್ ಮುಗೀತದ ತಕ್ಷಣ ಅಮಾನ್ಯವಾಗುತ್ತದೆ. ಅವಧಿ ಮುಗಿದ ನಂತರ ವಾಹನ ಚಲಾಯಿಸಿದರೆ ಅದು ಕಾನೂನುಬಾಹಿರವಾಗಿದೆ, ನವೀಕರಣ (Renewal) ಮಾಡಿಸಿಕೊಳ್ಳಲು ಅವಕಾಶವಿದೆ, ಆದರೆ ನವೀಕರಣ ಆಗುವವರೆಗೂ ವಾಹನ ಚಾಲನೆ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಗ್ರೇಸ್ ಪಿರಿಯಡ್ ಮುಗಿದ ನಂತರ ಪರವಾನಗಿ ನವೀಕರಿಸದಿದ್ದರೆ ವಿಮಾ ಕಂಪನಿಗಳು ಕ್ಲೇಮ್ ತಿರಸ್ಕರಿಸಬಹುದು ಮತ್ತು ಒಂದು ವರ್ಷದೊಳಗೆ ನವೀಕರಿಸದಿದ್ದರೆ, ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಬೇಕಾಗುತ್ತದೆ.
ಪರಿಣಾಮ
- ಲೈಸನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ದಂಡ ಪಾವತಿ ಮಾಡಬೇಕು
- ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ
- ಅಪಘಾತವಾದರೆ ಇನ್ಸೂರೆನ್ಸ್ ಕಂಪನಿಗಳು ಕ್ಲೇಮ್ ನಿರಾಕರಿಸುತ್ತವೆ
- ಒಂದು ವರ್ಷದೊಳಗೆ ನವೀಕರಣ ಮಾಡದಿದ್ದರೆ, ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತದೆ
ಈ ರೀತಿಯಾಗಿ ನಿಮ್ಮ ಡ್ರೈವಿಂಗ್ ಲೈಸನ್ಸ್ ನವೀಕರಣ ಮಾಡಿಕೊಳ್ಳಿ
- ಡ್ರೈವಿಂಗ್ ಲೈಸನ್ಸ್ ಮುಗಿಯುವ ಒಂದು ವರ್ಷ ಮೊದಲು ಅಥವಾ ವರ್ಷದೊಳಗೆ ಅರ್ಜಿ ಸಲ್ಲಿಸಬಹುದು.
- https://parivahan.gov.in/ ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ RTO ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
- 40 ವರ್ಷ ಮೇಲ್ಪಟ್ಟವರಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ.
- ಟ್ರಾಸ್ಪೋರ್ಟ್ ವಾಹನಗಳಿಗೆ 3 ವರ್ಷಕೊಮ್ಮೆ ನವೀಕರಣ ಕಡ್ಡಾಯ
- ತಡವಾಗಿ ಅರ್ಜಿ ಸಲ್ಲಿಸಿದರೆ Late fee ಪಾವತಿಮಾಡಬೇಕು
Disclaimer: This information is provided for awareness purposes only. For personalised legal advice, consult a qualified professional and refer to official government notifications.

