Couple Rules: ಇಂತಹ ಪತಿ ಪತ್ನಿಯರು ಇನ್ನುಮುಂದೆ ಒಟ್ಟಿಗೆ ಇರುವಂತಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ.
ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದ ಸುಪ್ರೀಮ್ ಕೋರ್ಟ್.
Supreme Court About Marriage Divorce: ಭಾರತೀಯ ನ್ಯಾಯಾಲಯದಲ್ಲಿ (Indian Law) ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲವು ನ್ಯಾಯಪರವಾದ ಆದೇಶವನ್ನು ಹೊರಡಿಸುತ್ತಲೇ ಇರುತ್ತದೆ. ಆಸ್ತಿಯ ವಿಚಾರವಾಗಿ ನಡೆದ ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್ ಅನೇಕ ರೀತಿಯ ತೀರ್ಪುಗಳನ್ನು ನೀಡಿದೆ. ಇತ್ತೀಚಿಗೆ ವಿಚ್ಛೇದನದ (Divorce) ಪ್ರಕರಣಗಳು ಹೆಚ್ಚುತ್ತಿವೆ. ಇನ್ನು ಕಾನೂನಿನಲ್ಲಿ ವಿಚ್ಛೇದನ ಪಡೆಯಲು ಅನೇಕ ನಿಯಮವನ್ನು ಜಾರಿಗೊಳಿಸಲಾಗಿದೆ.
ದಂಪತಿಗಳು ವಿಚ್ಛೇದನ ಪಡೆಯಲು ನಿರ್ಧರಿಸಿದರೆ ಕಾನೂನಿನ ನಿಯಮದ ಪ್ರಕಾರವೇ ವಿಚ್ಛೇದನವನ್ನು ಪಡೆಯಬೇಕು. ವಿಚ್ಛೇಧನ ಪಡೆದ ದಂಪತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲದಲ್ಲಿ ವಿವಿಧ ರೀತಿಯ ಪ್ರಕರಣ ದಾಖಲಾಗಿರುತ್ತದೆ. ಒಂದೊಂದು ಪ್ರಕರಣಗಳಿಗೂ ಸಂಬಂಧಿಸಿದಂತೆ ಅನೇಕ ರೀತಿಯ ಕಾನೂನುಗಳಿವೆ.
ಗಂಡ ಹೆಂಡತಿಯ ದಾಂಪತ್ಯ ಜೀವನದಲ್ಲಿ ಬಿರುಕು
ಮದುವೆಯಾಗುವ ಸಮಯದಲ್ಲಿ ಪರಸ್ಪರ ಒಪ್ಪಿ ಮದುವೆಯಾಗಿರುತ್ತಾರೆ. ಆದರೆ ವೈವಾಹಿಕ ಜೀವನದಲ್ಲಿ ನಡೆಯುವ ಕೆಲ ಕಹಿ ಘಟನೆಗಳಿಂದಾಗಿ ಹಲವು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇಡಲು ನಿರ್ಧರಿಸುತ್ತಾರೆ. ಹಿಂದೂ ಧರ್ಮದಲ್ಲಿ ಮದುವೆಗೆ ಅದರದ್ದೇ ಆದ ಸ್ಥಾನವಿದೆ.
ಶಾಸ್ತ್ರೋತ್ರವಾಗಿ ಮದುವೆಯಾಗಿರುವ ಜೋಡಿ ತಮ್ಮ ಜೀವನದಲ್ಲಿ ಉಂಟಾಗುವ ಭಿನ್ನಾಭಿಪ್ರಾಯದಿಂದ ಬೇರೆಯಾಗಲು ನಿರ್ಧರಿಸುವುದು ನಿಜಕ್ಕೂ ವಿಷಾದನೀಯ. ಇನ್ನು ಮದುವೆಯಾಗುವ ಸಮಯದಲ್ಲಿ ಕಾನೂನಿನ ಪ್ರಕಾರ ನೋಂದಣಿ ಮಾಡಿಕೊಳ್ಳಬೇಕು. ಅದೇ ರೀತಿಯ ಮದುವೆಯ ನಂತರ ವಿಚ್ಛೇಧನ ಪಡೆಯಬೇಕಿದ್ದರು ಕಾನೂನಿನ ನಿಯಮಾನುಸಾರವೇ ವಿಚ್ಛೇದನವನ್ನು ಪಡೆಯಬೇಕಾಗುತ್ತದೆ. ಕಾನೂನಿನ ನಿಯಮವನ್ನು ಮೀರಿ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಪತಿ ಪತ್ನಿಯ ನಡುವೆ ಬಿನ್ನಾಭಿಪ್ರಾಯ ಇದ್ದಾಗ ಅವರನ್ನು ಒಟ್ಟಿಗೆ ಇರಿಸುವುದು ಕ್ರೌರ್ಯ
ಇನ್ನು ನ್ಯಾಯಾಲಯವು ವಿಚ್ಛೇದನ ಪಡೆಯಲು ಬಯಸುವ ದಂಪತಿಗಳಿಗೆ 6 ತಿಂಗಳುಗಳ ಕಾಲ ಜೊತೆಯಾಗಿ ಇರಲು ಆದೇಶವನ್ನು ನೀಡುತ್ತದೆ. ಇದೀಗ ನ್ಯಾಯಾಲಯವು ಪತಿ ಪತ್ನಿಯ ನಡುವೆ ಭಿನ್ನಾಭಿಪ್ರಾಯ ಇದ್ದಾಗ ಅವರನ್ನು ಒಟ್ಟಿಗೆ ಇರಿಸುವುದರ ಬಗ್ಗೆ ಹೇಳಿಕೆ ನೀಡಿದೆ.
ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇಧನ ಪಡೆಯಲು ಬಯಸುವವ ದಂಪತಿಗಳನ್ನು ಒಟ್ಟಿಗೆ ಇಡುವುದು ಕ್ರೌರ್ಯಕ್ಕೆ ಸಮಾನ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ವಿವಾಹ ಸಂಬಂಧವನ್ನು ಉಳಿಸಲು ಯಾವುದೇ ಅವಕಾಶ ಇಲ್ಲದಿದ್ದಾಗ ಅವರನ್ನು ಒಟ್ಟಿಗೆ ಇರಿಸುವು ಉತ್ತಮವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.