ಈಗಿನ ಕಾಲದಲ್ಲಿ ಸಾಲವನ್ನ ಯಾರು ತಾನೇ ಮಾಡುವುದಿಲ್ಲ ಹೇಳಿ. ದೇಶದ ದೊಡ್ಡ ದೊಡ್ಡ ಶ್ರೀಮಂತರು ಕೂಡ ಯಾವುದೇ ಒಂದು ಅನಿವಾರ್ಯ ಕಾರಣಕ್ಕೆ ಸಾಲವನ್ನ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಶ್ರೀಮಂತರು ಬಹಳ ದೊಡ್ಡ ಪ್ರಮಾಣದಲ್ಲಿ ಸಾಲವನ್ನ ಮಾಡಿದರೆ ಬಡವರು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸಾಲವನ್ನ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಸಾಲವನ್ನ ಕೂಡುವವರು ಬಹಳ ಎಚ್ಚರಿಕೆಯ ಕ್ರಮವನ್ನ ತೆಗೆದುಕೊಳ್ಳುವುದರ ಮೂಲಕ ಸಾಲವನ್ನ ಕೊಡುತ್ತಾರೆ ಎಂದು ಹೇಳಬಹುದು. ಬೇರೆಯವರ ಸಾಕ್ಷಿಯನ್ನ ಪಡೆದ್ದುಕೊಂಡು ಅಥವಾ ಬೇರೆಯವರ ಬಳಿ ಜಾಮೀನನ್ನ ಹಾಕಿಸಿಕೊಂಡು ಸಾಲವನ್ನ ಕೊಡುತ್ತಾರೆ ಎಂದು ಹೇಳಬಹುದು.
ಸಾಲ ಮಾಡಿದರು ಸಾಲವನ್ನ ಸರಿಯಾದ ರೀತಿಯಲ್ಲಿ ತೀರಿಸದೆ ಇದ್ದರೆ ಸಾಲವನ್ನ ಕೊಟ್ಟವರು ಯಾರು ಜಾಮೀನು ಹಾಕಿರುತ್ತಾರೆಯೋ ಅವರ ಬಳಿ ಸಾಲವನ್ನ ವಸೂಲಿ ಮಾಡುತ್ತಾರೆ ಎಂದು ಹೇಳಬಹುದು. ಹಣಕಾಸಿನಲ್ಲಿ, ಜಾಮೀನು, ಜಾಮೀನು ಪತ್ರ/ಮುಚ್ಚಳಿಕೆ ಅಥವಾ ಖಾತರಿ ಎಂದರೆ ಒಬ್ಬ ಸಾಲಗಾರನು ಸಾಲದ ಕಂತು ತಪ್ಪಿಸಿದರೆ ಆ ಸಾಲಗಾರನ ಋಣದ ಭಾರಕ್ಕೆ ಹೊಣೆಗಾರಿಕೆ ಹೊತ್ತುಕೊಳ್ಳುತ್ತೇನೆ ಎಂದು ಒಬ್ಬ ಪಕ್ಷನು ಮಾಡುವ ವಾಗ್ದಾನವನ್ನು ಒಳಗೊಳ್ಳುವಂಥದ್ದು. ವಾಗ್ದಾನ ಮಾಡುವ ವ್ಯಕ್ತಿ ಅಥವಾ ಕಂಪನಿಯನ್ನು “ಜಾಮೀನುದಾರ” ಅಥವಾ “ಹೊಣೆಗಾರ” ಎಂದು ಕೂಡ ಕರೆಯಲಾಗುತ್ತದೆ.
ಇನ್ನು ಸಾಲಗಾರನಿಗೆ ಜಾಮೀನು ಹಾಕುವವರಿಗೆ ಸುಪ್ರೀಮ್ ಕೋರ್ಟ್ ದೊಡ್ಡ ಆದೇಶವನ್ನ ನೀಡಿದ್ದು ಇದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಹಾಗಾದರೆ ಏನದು ಆದೇಶ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕಾರ್ಪೊರೇಟ್ ಸಾಲಗಾರರಿಗೆ ಇಲ್ಲವೇ ಕಂಪನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು ಕೊಡುವವರಿಗೆ ಎಚ್ಚರಿಕೆ ಸಂದೇಶವನ್ನು ಸುಪ್ರೀಂಕೋರ್ಟ್ ನೀಡಿದ್ದು, ಮಹತ್ವದ ತೀರ್ಪು ಪ್ರಕಟಿಸಿದೆ. ಸಾಲ ಪಡೆಯುವವರಿಗೆ ಜಾಮೀನನ್ನ ಹಾಕುವ ವ್ಯಕ್ತಿಗಳು ಸಾಲದ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಜಮೀನುದಾರರು ಕೂಡ ಸಾಲಕ್ಕೆ ಬಾಧ್ಯಸ್ಥರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ದಿವಾಳಿತನದ ಸಂಹಿತೆಯ ಅಡಿಯಲ್ಲಿ ಸಾಲವನ್ನ ಪಡೆದುಕೊಂಡರು ಸಾಲವನ್ನ ತೀರಿಸಲು ವಿಫಲವಾದರೆ ವೈಯಕ್ತಿಕ ಜಾಮೀನುದಾರರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಸಾಲ ಪಡೆಯುವವರಿಗೆ ಜಾಮೀನು ಹಾಕಿದ ವ್ಯಕ್ತಿ ಕೂಡ ಆ ಸಾಲಕ್ಕೆ ಪಾಲುಗಾರನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇನ್ನುಮುಂದೆ ಸಾಲ ಪಡೆದವರು ಸಾಲವನ್ನ ತೀರಿಸದೆ ಇದ್ದರೆ ಆ ಸಾಲವನ್ನ ಜಾಮೀನು ಹಾಕಿದವರು ತೀರಿಸಬೇಕಾಗುತ್ತದೆ. ಸ್ನೇಹಿತರೆ ಈ ಮಾಹಿತಿಯನ್ನ ಸಾಲ ಪಡೆದುಕೊಳ್ಳುವವರಿಗೆ ಜಾಮೀನು ಹಾಕುವ ಎಲ್ಲರಿಗೂ ತಲುಪಿಸಿ.