Property Sale: ಕುಟುಂಬದ ಈ ಸದಸ್ಯನಿಗೆ ಯಾವ ಅನುಮತಿ ಇಲ್ಲದೆ ಆಸ್ತಿ ಮಾರುವ ಹಕ್ಕಿದೆ, ಕೋರ್ಟ್ ಮಹತ್ವದ ತೀರ್ಪು.

ಹಿಂದೂ ಅವಿಭಜಿತ ಕುಟುಂಬದ ಮುಖ್ಯಸ್ಥನಿಗೆ `ಆಸ್ತಿ ಮಾರಾಟ' ಮಾಡುವ ಸಂಪೂರ್ಣ ಹಕ್ಕಿದೆ.

Supreme Court New Judgment On Property Sale: ಸಾಮಾನ್ಯವಾಗಿ ಭಾರತೀಯ ಕಾನೂನಿನಲ್ಲಿ (Indian Law) ಆಸ್ತಿಗೆ (Property)  ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ಇನ್ನು ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಕೂಡ ಕಾನೂನಿನಲ್ಲಿ ಅನೇಕ ನಿಯಮಗಳಿವೆ. ಅಧಿಕಾರ ಇಲ್ಲದವರು ಯಾವುದೇ ಆಸ್ತಿಯನ್ನು ಮಾರಾಟ ಮಾಡಬಾರದು ಎನ್ನುವ ಉದ್ದೇಶದಿಂದ ವಿವಿಧ ರೀತಿಯ ಆಸ್ತಿಯ ಕಾನೂನನ್ನು ಜಾರಿಗೊಳಿಸಲಾಗಿದೆ.

Supreme Court New Judgment
Image Credit: Thehinducentre

ಹಿಂದೂ ಅವಿಭಜಿತ ಕುಟುಂಬದ ಮುಖ್ಯಸ್ಥನಿಗೆ ಆಸ್ತಿ ಮಾರಾಟ ಮಾಡುವ ಸಂಪೂರ್ಣ ಹಕ್ಕಿದೆ
ಅರ್ಜಿದಾರರಾದ ಬಾಲಾಜಿ ಅವರು ವಿವಾದಿತ ಆಸ್ತಿಯು ಅವಿಭಕ್ತ ಕುಟುಂಬದ ಆಸ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬದ ಆಸ್ತಿಯಾಗಿದ್ದು ಇದನ್ನು ಅವರ ತಂದೆ ಖಾತರಿದಾರರಾಗಿ ಅಡವಿಟ್ಟಿದ್ದಾರೆ ಎಂದು NS ಬಾಲಾಜಿ ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದರು.

ಈ ನಿಟ್ಟಿನಲ್ಲಿ ನಾರಾಯಣ್ ಬಾಲ್ ಹಾಗೂ ಶ್ರೀಧರ್ ಸುತಾರ್ ಅವರ ತೀರ್ಪನ್ನು ನ್ಯಾಯಾಲಯ ಉಲ್ಲೇಖಿಸಿ ಹಿಂದೂ ಅವಿಭಜಿತ ಕುಟುಂಬದ ಮುಖ್ಯಸ್ಥ ಕುಟುಂಬದ ಆಸ್ತಿಯಾಗಿದ್ದು ಮಾರಾಟ ಮಾಡುವ ಅಥವಾ ವಿಲೇವಾರಿ ಮಾಡುವ ಅಥವಾ ಅಡಮಾನ ಇಡುವ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದಾನೆ ಎಂದು ಸುಪ್ರೀಮ್ ಕೋರ್ಟ್ ಆದೇಶ ಹೊರಡಿಸಿದೆ.

Property Sale
Image Credit: Indiafilings

ಕುಟುಂಬದ ಸದಸ್ಯರ ಅಗತ್ಯ ಇಲ್ಲ
ಅರ್ಜಿದಾರರ ತಂದೆ ಕುಟುಂಬದ ಮುಖ್ಯಸ್ಥರಾಗಿ ಆಸ್ತಿಯಾಗಿದ್ದು ಮಾರಾಟ ಮಾಡುವ ಅಥವಾ ವಿಲೇವಾರಿ ಮಾಡುವ ಅಥವಾ ಅಡಮಾನ ಇಡಲು ಅರ್ಹರಾಗಿದ್ದಾರೆ ಎಂದು ಸುಪ್ರೀಮ್ ಕೋರ್ಟ್ ಆದೇಶ ಹೊರಡಿಸಿದೆ. HUF ನ ಸದಸ್ಯರು ಇದಕ್ಕೆ ಸಮ್ಮತಿಸುವ ಅಗತ್ಯ ಇಲ್ಲ.

ಪ್ರತ್ಯೇಕತೆಯ ನಂತರ ಆ ಉತ್ತರಾಧಿಕಾರಿ ಈ ಸಂದರ್ಭದಲ್ಲಿ ಆಸ್ತಿ ಮಾರಾಟವನ್ನು ಪ್ರಶ್ನಿಸಬಹುದು. ಪ್ರತ್ಯೇಕತೆಯು ಕಾನೂನುಬದ್ಧ ಅವಶ್ಯಕತೆ ಅಥವಾ ಆಸ್ತಿಯ ಸುಧಾರಣೆಗಾಗಿ ಅಲ್ಲದಿದ್ದರೆ, ಈ ಅಭಿಪ್ರಾಯಗಳೊಂದಿಗೆ ಮದ್ರಾಸ್ ಹೈ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ವಜಾಗೊಳಿಸಿತು. ಹೈ ಕೋರ್ಟ್ ಆದೇಶದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ.

Join Nadunudi News WhatsApp Group

Join Nadunudi News WhatsApp Group