Supreme Court Ruling Tenants cannot Get Property Ownerships: ಬಾಡಿಗೆ ಮನೆ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಈಗ ದೇಶಾದ್ಯಂತ ಹೊಸ ನಿಯಮ ಜಾರಿಗೆ ತಂದಿದೆ. ಕೆಲವರು ಹಲವು ವರ್ಷಗಳ ಕಾಲ ಬಾಡಿಗೆ ಮನೆಯಲಿದ್ದು ಆ ಮನೆಯನ್ನು ಅವರ ಹೆಸರಿಗೆ ಮಾಡಿಸಿಕೊಳ್ಳಲು ಬಯಸುತ್ತಾರೆ. ಆದರೆ ಇನ್ನುಮುಂದೆ ಬಾಡಿಗೆ ಮನೆಯ ಮಾಲೀಕತ್ವ ಬಾಡಿಗೆದಾರ ಪಡೆದುಕೊಳ್ಳಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಈಗ ಬಾಡಿಗೆ ಮನೆ ಮಾಲೀಕತ್ವ ನಿಯಮದಲ್ಲಿ ಬದಲಾವಣೆ ಮಾಡಿದ್ದು ಈ ನಿಯಮ ದೇಶಾದ್ಯಂತ ಎಲ್ಲರಿಗೂ ಅನ್ವಯ ಆಗಲಿದೆ.
ನಿಯಮ ಬದಲಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಇನ್ನುಮುಂದೆ ಬಾಡಿಗೆ ಮನೆಯಲ್ಲಿ 5 ವರ್ಷ ವಾಸಮಾಡಿದರೂ ಅಥವಾ 50 ವರ್ಷ ವಾಸಮಾಡಿದರೂ ಆ ಮನೆಯ ಮಾಲೀಕತ್ವ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿರು ಹೊರಡಿಸಿದೆ. ಬಾಡಿಗೆದಾರ ಮತ್ತು ಮಾಲೀಕರ ನಡುವಿನ ಕೆಲವು ವಿವಾದ ಬಗೆಹರಿಸುವ ಉದ್ದೇಶದಿಂದ ಮತ್ತು ಮಾಲೀಕರ ಹಕ್ಕು ಬಲಪಡಿಸುವ ಉದ್ದೇಶದಿಂದ ಸುಪ್ರೀಂ ಈ ತೀರ್ಪು ಹೊರಡಿಸಿದೆ.
ದೆಹಲಿಯ ಒಂದು ಪ್ರಕರಣದಿಂದ ಈ ತೀರ್ಪು ಪ್ರಕಟ
ಸುಪ್ರೀಂ ಕೋರ್ಟ್ ಈ ತಿರುಪು ಕೊಡಲು ಕಾರಣ, ದೆಹಲಿಯ ಜ್ಯೋತಿ ಶರ್ಮಾ ಮತ್ತು ಬಾಡಿಗೆದಾರ ವಿಷ್ಣು ಗೋಯಲ್ ನಡುವಿನ 70 ವರ್ಷಗಳ ಹಳೆಯ ವಿವಾದ ಆಗಿರುತ್ತದೆ. ಗೋಯಲ್ ಶರ್ಮಾ ಅವರ ಆಸ್ತಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. 30 ವರ್ಷಗಳಿಗೂ ಹೆಚ್ಚು ಕಾಲ ಅಡೆತಡೆ ಇಲ್ಲದೆ ವಾಸವಿದು ಬಾಡಿಗೆ ಕೊಡುವುದನ್ನು ಕೂಡ ಸಂಪೂರ್ಣವಾಗಿ ನಿಲ್ಲಿಸಿದ್ದರು.
ಗೋಯಲ್ ಅವರು ಪ್ರತಿಕೂಲ ಸ್ವಾದೀನದ ಹಕ್ಕಿನ ಅಡಿಯಲ್ಲಿ ಆ ಆಸ್ತಿಯ, ಅಂದರೆ ಆ ಬಾಡಿಗೆ ಮನೆಯ ಮಾಲೀಕತ್ವ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆದರೆ, ಶರ್ಮಾ ಅವರು ಆಸ್ತಿಯನ್ನು ಖಾಲಿ ಮಾಡುವಂತೆ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದರು. ಈ ಪ್ರಕರಣ ದಶಕಗಳ ಕಾಲ ನಡೆದಿದ್ದು ಈಗ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಬಾಡಿಗೆ ಒಪ್ಪಂದದಲ್ಲಿ ಆಸ್ತಿ ಬಳಸಿಕೊಳ್ಳುವ ಹಕ್ಕು ಮಾತ್ರ ಇರುತ್ತದೆ, ಇದರ ಹೊರತಾಗಿ ಪ್ರತಿಕೂಡ ಸ್ವಾದೀನ ಪಡೆದುಕೊಳ್ಳಲು ಬಾಡಿಗೆದಾರನಿಗೆ ಯಾವುದೇ ಹಕ್ಕು ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಭೂಮಾಲೀಕರಿಗೆ ದೊಡ್ಡ ಗೆಲುವು, ಏಕೆಂದರೆ ದೀರ್ಘಕಾಲೀನ ಬಾಡಿಗೆದಾರರು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವುದು ಇದರಿಂದ ತಡೆಯಾಗುತ್ತೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಆಸ್ತಿ ಮಾಲೀಕರಿಗೆ ಅನುಕೂಲ
ಸುಪ್ರೀಂ ಕೋರ್ಟ್ ಈ ನಿರ್ಧಾರದಿಂದ ಆಸ್ತಿ ಮಾಲೀಕರಿಗೆ ಸಾಕಷ್ಟು ಅನುಕೂಲವಾಗಿದೆ ಮತ್ತು ಇದರಿಂದ ಆಸ್ತಿ ಮಾಲೀಕರು ಹಾಗು ಬಾಡಿಗೆದಾರರ ನಡುವಿನ ವಿವಾದ ಕೂಡ ಕಡಿಮೆ ಆಗುತ್ತೆ. ಸುಪ್ರೀಂ ಕೋರ್ಟಿನ ಈ ತೀರ್ಪು ಬಾಡಿಗೆ ಒಪ್ಪಂದದ ಮಹತ್ವವನ್ನು ಒತ್ತಿ ಹೇಳುತ್ತದೆ. ಇನ್ನುಮುಂದೆ ಬಾಡಿಗೆದಾರರು ಯಾವುದೇ ಕಾಲಾವಧಿಯಲ್ಲಿ ಆದರಿಸಿ ಕೋರ್ಟಿನಲ್ಲಿ ಪ್ರತಿಕೂಲ ಸ್ವಾದೀನದ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.ಆಸ್ತಿ ಮಾಲೀಕರಿಗೆ ಇದರಿಂದ ಇನ್ನಷ್ಟು ಸುರಕ್ಷತೆ ಸಿಕ್ಕಂತೆ ಆಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

