Supreme Court: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂ ಕೋರ್ಟ್, ದೇಶದಲ್ಲಿ ಜಾರಿಗೆ ಬಂತು ಹೊಸ ನಿಯಮ.

ಸರ್ಕಾರೀ ನೌಕರರ ಅಮಾನತು ವಿಷವಾಗಿ ಹೊಸ ನಿಯಮ ಜಾರಿಗೆ ತಂಡ ಹೈಕೋರ್ಟ್.

Supreme Court Verdict About Govt Employees Suspension: ಸದ್ಯ ದೇಶದಲ್ಲಿ ಸರ್ಕಾರ ನೌಕರರಿಗೆ ಸಂಬಂಧಿಸಿದಂತೆ ಅನೇಕ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರ ಕೂಡ ಸರ್ಕಾರದ ಪ್ರತಿಯೊಂದು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ.

ಸರ್ಕಾರದ ಯಾವುದೇ ನಿಯಮವನ್ನು ನೌಕರರು ಉಲ್ಲಘಿಸಿದರು ಕೂಡ ನೌಕರರು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸದ್ಯ ಸರ್ಕಾರೀ ನೌಕರರನ್ನು ಕೆಲಸದಿಂದ ಅಮಾನತ್ತುಗೊಳಿಸುವ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೌಕರರನ್ನು ಅಮಾನತ್ತುಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಹೊರಡಿಸಿದೆ.

supreme court order on government employees
Image Credit: Original Source

ಸರ್ಕಾರೀ ನೌಕರರಿಗೆ ಸುಪ್ರೀಂ ಕೋರ್ಟ್ ಆದೇಶ
ಸರ್ಕಾರೀ ನೌಕರನನ್ನು ಕೆಲಸದಿಂದ ಅಮಾನತ್ತುಗೊಳಿಸಿರುವ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿದೆ. ಈ ಬಗ್ಗೆ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಂಜಿತ್ ಸೇನ್ ಮತ್ತು ಸಿ. ನಾಗಪ್ಪನ್ ಅವರ ವಿಭಾಗೀಯ ಪೀಠವು ಸರ್ಕಾರೀ ನೌಕರರನ್ನು ದೀರ್ಘ ಕಾಲದವರೆಗೆ ಅಮಾನತ್ತುಗೊಳಿಸುವ ಬಗ್ಗೆ ಟೀಕೆ ವ್ಯಕ್ತಪಡಿಸಿದೆ. ಅಮಾನತು ವಿಶೇಷವಾಗಿ ಆರೋಪಗಳನ್ನು ರೂಪಿಸುವ ಅವಧಿಯಲ್ಲಿ ತಾತ್ಕಾಲಿಕವಾಗಿದೆ ಮತ್ತು ಅದನ್ನು ಕಡಿಮೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

supreme court order on government employees suspend
Image Credit: economictimes

ಸರ್ಕಾರೀ ನೌಕರರನ್ನು 90 ದಿನಗಳಿಗಿಂತ ಹೆಚ್ಚು ಅಮಾನತುಗೊಳಿಸುವಂತಿಲ್ಲ
“ಯಾವುದೇ ಸರ್ಕಾರೀ ನೌಕರನ ವಿರುದ್ಧ ಚಾರ್ಟ್ ಶೀಟ್ ಅನುಪಸ್ಥಿತಿಯಲ್ಲಿ ಅವರನ್ನು 90 ದಿನಗಳ ಅಥವಾ 3 ತಿಂಗಳಿಗಿಂತ ಹೆಚ್ಚು ಕಾಲ ಅಮಾನತುಗೊಳಿಸುವಂತಿಲ್ಲ” ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಈ ಅವಧಿಯಲ್ಲಿ ಅಧಿಕಾರಿ ಅಥವಾ ಉದ್ಯೋಗಿಗೆ ಚಾರ್ಟ್ ಶೀಟ್ ನೀಡದಿದ್ದರೆ ಅಮಾನತು ಆದೇಶವು ಮೂರು ತಿಂಗಳನ್ನು ಮೀರಬಾರದು. ಅದೇ ರೀತಿಯಲ್ಲಿ ಚಾರ್ಟ್ ಶೀಟ್ ಅನ್ನು ಸಲ್ಲಿಸಿದರೆ, ಅಮಾನತು ಅವಧಿಯನ್ನು ವಿಸ್ತರಿಸಲು ವಿವರವಾದ ಆದೇಶವಮನ್ನು ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

Join Nadunudi News WhatsApp Group

Join Nadunudi News WhatsApp Group