Homemakers Rights: ಇನ್ಮುಂದೆ ಹೆಂಡತಿಯ ಖರ್ಚಿಗೆ ಗಂಡ ಇಷ್ಟು ಹಣ ಕೊಡಲೇಬೇಕು, ಹೈಕೋರ್ಟ್ ಆದೇಶ

ಇನ್ನುಮುಂದೆ ಗೃಹಿಣಿಯರ ವೈಯಕ್ತಿಕ ಖರ್ಚಿಗೆ ಪತಿ ಹಣ ನೀಡಬೇಕು

Supreme Court Verdict About Homemakers Rights: ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಗೃಹಿಣಿಯರ ಪಾತ್ರ ಸಾಕಷ್ಟಿರುತ್ತದೆ. ಯಾವುದೇ ವೇತನ ಪಡೆಯದೇ ಹಗಲಿರುಳು ದುಡಿಯುವ ಜೀವ ಎಂದರೆ ಅದು ಮನೆ ನಡೆಸಿಕೊಂಡು ಹೋಗುವ ಗೃಹಿಣಿ. ಯಾವುದೇ ಪ್ರತಿಫಲವನ್ನು ಬಯಸದೆ ತನ್ನ ಕುಟುಂಬಕ್ಕಾಗಿ ಗೃಹಿಣಿಯು ಹಗಲಿರುಳು ದುಡಿಯುತ್ತಾಳೆ. ಆದರೆ ಇಂತಹ ಗೃಹಿಣಿಗೆ ಯಾವುದೇ ವೇತನ ನೀಡಲಾಗುವುದಿಲ್ಲ.

ಸದ್ಯ ಸುಪ್ರೀಂ ಕೋರ್ಟ್ ಇಂತಹ ಗೃಹಿಣಿಯರ ಬಗ್ಗೆ ಮಹತ್ವದ ಹೇಳಿಕೆಯನ್ನು ಹೊರಡಿಸಿದೆ. ಭಾರತೀಯ ಪುರುಷರು ಗೃಹಿಣಿಯರ ಪಾತ್ರ ಮತ್ತು ಕುಟುಂಬಕ್ಕಾಗಿ ಅವರು ಮಾಡುವ ತ್ಯಾಗವನ್ನು ಗುರುತಿಸುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗೃಹಿಣಿಯರ ಹಕ್ಕುಗಳಿಗೆ ಒತ್ತು ನೀಡುವ ಮೂಲಕ ಭಾರತೀಯ ಗೃಹಿಣಿಯರ ಪರ ಸುಪ್ರೀಂ ಕೋರ್ಟ್ ನಿಂತಿದೆ ಎನ್ನಬಹುದು.

Supreme Court Verdict About Homemakers Rights
Image Credit: Outlookindia

ಇನ್ನುಮುಂದೆ ಗೃಹಿಣಿಯರ ವೈಯಕ್ತಿಕ ಖರ್ಚಿಗೆ ಪತಿ ಹಣ ನೀಡಬೇಕು
ಕುಟುಂಬದಲ್ಲಿ ಗೃಹಿಣಿಯರ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ನ್ಯಾಯಾಲಯ, ಗಂಡಂದಿರು ತಮ್ಮ ಹೆಂಡತಿಯರಿಗೆ ಆರ್ಥಿಕ ನೆರವು ನೀಡುವುದು ಅಗತ್ಯ ಎಂದು ಹೇಳಿದರು. ನ್ಯಾಯಮೂರ್ತಿ ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ ಭಾರತೀಯ ವಿವಾಹಿತ ಪುರುಷನು ತನ್ನ ಹೆಂಡತಿಗೆ ಆರ್ಥಿಕವಾಗಿ ಸ್ವತಂತ್ರವಾಗಲು ಸಹಾಯ ಮಾಡಬೇಕು ಎಂದು ಹೇಳಿದರು.

ಆದಾಯದ ಸ್ವತಂತ್ರ ಮೂಲವನ್ನು ಹೊಂದಿರದ ಅವರ ಪತ್ನಿ, ವಿಶೇಷವಾಗಿ ಅವರ ವೈಯಕ್ತಿಕ ಅಗತ್ಯಗಳಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಗಂಡನ ಹಣಕಾಸಿನಲ್ಲಿ ಹೆಂಡತಿಗೆ ಪ್ರವೇಶವನ್ನು ನೀಡುವುದು ಹಾಗೆಯೆ ಗೃಹಿಣಿಯರ ವೈಯಕ್ತಿಕ ಖರ್ಚಿಗೆ ಪತಿ ಹಣ ನೀಡಬೇಕು ಎಂದು ಹೇಳಿದ್ದಾರೆ.

ಗೃಹಿಣಿಯರಿಗಾಗಿ ಕೋರ್ಟ್ ನೀಡಿದ ಮೂರು ಪ್ರಮುಖ ಆದೇಶ
•ಭಾರತೀಯ ವಿವಾಹಿತ ಪುರುಷರು ತಮ್ಮ ಸಂಗಾತಿಗೆ ವೈಯಕ್ತಿಕ ವೆಚ್ಚಗಳಿಗಾಗಿ ಹಣ ನೀಡಬೇಕು.

Join Nadunudi News WhatsApp Group

•ಮನೆಯ ಖರ್ಚಿನ ಹೊರತಾಗಿ, ಅವರ ವೈಯಕ್ತಿಕ ವೆಚ್ಚಗಳನ್ನು ಭರಿಸಬೇಕು.

•ಜಂಟಿ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಥವಾ ATM ಕಾರ್ಡ್ ನೀಡಬೇಕು.

Homemakers Rights
Image Credit: Timesnowhindi

Join Nadunudi News WhatsApp Group