kerala Story Verdict: ಕೇರಳ ಸ್ಟೋರಿ ಚಿತ್ರದ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಆದೇಶ ನೀಡಿದ ಕೋರ್ಟ್.
ದಿ ಕೇರಳ ಸ್ಟೋರಿ ಚಿತ್ರ ಒಂದು ಕಾಲ್ಪನಿಕ ಚಿತ್ರವೆಂದು ಘೋಷಣೆ ಮಾಡಿದ ಸುಪ್ರೀಂ ಕೋರ್ಟ್.
The kerala Story Movie Supreme Court Verdict: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಈಗಾಗಲೇ ದೇಶಾದ್ಯಂತ ರಿಲೀಸ್ ಆಗಿದೆ. ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಸಾಕಷ್ಟು ಜನರು ಈ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಈ ಸಿನಿಮಾ ವಿವಾದದ ಮದ್ಯೆ ಸಿಲುಕಿಕೊಂಡಿದ್ದರೂ ದಾಖಲೆಯ ಕಲೆಕ್ಷನ್ ಮಾಡಿದೆ.
ವಿವಾದಕ್ಕೆ ಒಳಗಾದ ದಿ ಕೇರಳ ಸ್ಟೋರಿ ಸಿನಿಮಾ
ಇನ್ನು ಹಲವು ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧದ ಭೀತಿ ಎದುರಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರವನ್ನ ನೋಡಿದ ಸಾಕಷ್ಟು ಜನರು ಚಿತ್ರಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನ ಕೂಡ ಘೋಷಣೆ ಮಾಡಿದ್ದು ಇದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ.
ಈ ಸಿನಿಮಾ ಬಿಡುಗಡೆಯಾದ ಕೆಲವೇ ದಿನದಲ್ಲಿ ಕೆಲವು ಕಡೆಗಳಲ್ಲಿ ಈ ಸಿನಿಮಾವನ್ನು ನಿಷೇಧ ಮಾಡಲಾಗಿದೆ. ಈ ಸಿನಿಮಾ ರಾಜಕೀಯದಲ್ಲೂ ವಿವಾದಗಳನ್ನು ಸೃಷ್ಟಿ ಮಾಡಿತ್ತು. ಅನೇಕ ರಾಜಕೀಯ ಮುಖಂಡರು ಈ ಸಿನಿಮಾ ನಿಷೇಧ ಕುರಿತು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ದಿ ಕೇರಳ ಸ್ಟೋರಿ ಸಿನಿಮಾ ಕಾಲ್ಪನಿಕ ಕಥೆಯೆಂದು ಅಳವಡಿಸಲು ಸೂಚಿಸಿದ ಸುಪ್ರೀಂ ಕೋರ್ಟ್.
ಇದೀಗ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ಡಿವಾಲಾ ಅವರನ್ನು ಹೊಂದಿದ ನ್ಯಾಯಪೀಠವು ಈ ಸಿನಿಮಾ ಕಾಲ್ಪನಿಕ ಕಥೆಯಾಗಿದ್ದು, ಕಲ್ಪನೆಯ ಆವೃತ್ತಿಯನ್ನು ಪ್ರತಿನಿಧಿಸುತ್ತದೆ ಅನ್ನುವುದನ್ನು ಡಿಸ್‌ಕ್ಲೈಮರ್‌ನಲ್ಲಿ ಸ್ಪಷ್ಟಪಡಿಸಿ ಎಂದು ನಿರ್ಮಾಪಕರಿಗೆ ಸುಪ್ರಿಂ ಕೋರ್ಟ್ ಸೂಚನೆ ನೀಡಿದೆ.