WhatsApp Users: WhatsApp ಬಳಕೆದಾರರಿಗೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ, ತಪ್ಪದೆ ಈ ಕೆಲಸ ಮಾಡಿ.

ಸುಪ್ರೀಂ ಕೋರ್ಟ್ ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಆದೇಶವನ್ನು ನೀಡಿದೆ.

Supreme Court Verdict On Sim Deactivation: ಸದ್ಯ ದೇಶದಲ್ಲಿ Sim Card ಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಪ್ರಸ್ತತ ಈ ಡಿಜಿಟಲ್ ದುನಿಯಾದಲ್ಲಿ ಪ್ರತಿಯೊಬ್ಬರು ಕೂಡ ಮೊಬೈಲ್ ಫೋನ್ ಅನ್ನು ಬಳಸೆ ಬಳಸುತ್ತಾರೆ. ಹೀಗಿರುವಾಗ ಕೆಲ ಮೊಬೈಲ್ ಬಳಕೆದಾರರು ಎರಡು ಸಿಮ್ ಕಾರ್ಡ್ ಗಳನ್ನೂ ಬಳಸುವುದುಂಟು. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಿಮ್ ಕಾರ್ಡ್ ಖರೀದಿಗೆ ಮಿತಿಯನ್ನು ಅಳವಡಿಸಿದೆ. ಸದ್ಯ ಸುಪ್ರೀಂ ಕೋರ್ಟ್ ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಆದೇಶವನ್ನು ನೀಡಿದೆ.

ಹೆಚ್ಚು ಸಮಯದಿಂದ ಬಳಕೆಯಲ್ಲಿಲ್ಲದ ನಂಬರ್ ಅನ್ನು TRAI 90 ದಿನಗಳ ನಂತರ ಹೊಸ ಬಳಕೆದಾರರಿಗೆ ನೀಡುತ್ತದೆ. TRAI ನ ಈ ಕ್ರಮ ಬಳಕೆದಾರರ ಗೌಪ್ಯತೆಗೆ ತೊಂದರೆ ನೀಡುತ್ತದೆ ಎಂದು ಹಲವರು ಪ್ರಶ್ನಿಸಿ TRAI ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗದೆ. ಸುಪ್ರೀಂ ಕೋರ್ಟ್ TRAI ಕ್ರಮದ ಅರ್ಜಿಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಮಹತ್ವದ ತೀರ್ಪನ್ನು ನೀಡಿದೆ.

Supreme Court Verdict
Image Credit: Hindustan Times

ನಿಷ್ಕ್ರಿಯಗೊಂಡ ಸಿಮ್ ಕಾರ್ಡ್ ಅನ್ನು 90 ದಿನದ ಬಳಿಕ ಹೊಸ ಚಂದಾದಾರರಿಗೆ ನೀಡಲಾಗುತ್ತದೆ
“ಕಾನೂನುಬದ್ಧ 90 ದಿನಗಳ ಅವಧಿಯ ಮುಕ್ತಾಯದ ನಂತರ ಹೊಸ ಚಂದಾದಾರರಿಗೆ ನಿಷ್ಕ್ರಿಯಗೊಂಡ ಅಥವಾ ಸಂಪರ್ಕ ಕಡಿತಗೊಂಡ ಸಂಖ್ಯೆಗಳನ್ನು ಮರುಹಂಚಿಕೆ ಮಾಡುವುದರಿಂದ ಮೊಬೈಲ್ ಫೋನ್ ಸೇವಾ ಪೂರೈಕೆದಾರರನ್ನು ನಿರ್ಬಂಧಿಸಲಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮೂಲಕ 90 ದಿನಗಳ ಅವಧಿಯ ಮುಕ್ತಾಯದ ನಂತರ ಹೊಸ ಚಂದಾದಾರರಿಗೆ ನಿಷ್ಕ್ರಿಯಗೊಂಡ ಅಥವಾ ಸಂಪರ್ಕ ಕಡಿತಗೊಂಡ ಸಂಖ್ಯೆಗಳನ್ನು ಮರುಹಂಚಿಕೆ ಮಾಡಲು ಸುಪ್ರೀಂ ಕೋರ್ಟ್ TRAI ಗೆ ಅನುಮತಿ ನೀಡಿದೆ.

WhatsApp ಬಳಕೆದಾರರಿಗೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ
ಇನ್ನು ಎರಡು ಸಿಮ್ ಕಾರ್ಡ್ (Sim Card) ಗಳನ್ನೂ ಬಳಸುವವರು ಒಂದು ಸಿಮ್ ಅನ್ನು ಮಾತ್ರ ಪದೇ ಪದೇ ಸಕ್ರಿಯಗೊಳಿಸಿಕೊಂಡಿರುತ್ತಾರೆ. ಇನ್ನೊಂದು ನಂಬರ್ ನಲ್ಲಿ ವಾಟ್ಸಾಪ್ ಖಾತೆಯನ್ನು ತೆರೆದು ಅಥವಾ ಇನ್ನಾವುದೇ ಕೆಲಸಕ್ಕೆ ಬಳಸಿಕೊಂಡು ಆ ಸಿಮ್ ಅನ್ನು ಬಳಸದೆ ಹಾಗೆ ಬಿಟ್ಟುಬಿಡುತ್ತಾರೆ.

Important order from Supreme Court for WhatsApp users.
Image Credit: Officechai

ಸುಪ್ರೀಂ ಕೋರ್ಟ್ 90 ದಿನದ ಬಳಿಕ ಹೊಸ ಚಂದಾದಾರರಿಗೆ ನಿಷ್ಕ್ರಿಯಗೊಂಡ ಸಿಮ್ ಕಾರ್ಡ್ ಅನ್ನು ನೀಡಲು ಅನುಮತಿ ನೀಡಿರುವ ಕಾರಣ ಇದರ ನೇರ ಪರಿಣಾಮ WhatsApp ಬಳಕೆದಾರರ ಮೇಲೆ ಬೀರಲಿದೆ. ಏಕೆಂದರೆ WhatsApp ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವುದರಿಂದ ಬಳಕೆದಾರರ ಗೌಪ್ಯತೆಗೆ ಇದು ಸಮಸ್ಯೆಯನ್ನು ನೀಡುತ್ತದೆ. ವಾಟ್ಸಾಪ್ ಬಳಕೆದಾರರು ತಮ್ಮ ಗೌಪ್ಯತೆಯ ಸುರಕ್ಷತೆಗಾಗಿ ತಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವ ಮೊದಲು ತಮ್ಮ ಡೇಟಾವನ್ನು ಅಳಿಸುವಂತೆ ಸುಪ್ರೀಂ ಕೋರ್ಟ್ ವಾಟ್ಸಾಪ್ ಬಳಕೆದಾರರಿಗೆ ಆದೇಶ ನೀಡಿದೆ.

Join Nadunudi News WhatsApp Group

Join Nadunudi News WhatsApp Group